»   » ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್

ಐಟಂ ಸಾಂಗ್ ಮೂಲಕ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಒಂದು ಕಾಲದಲ್ಲಿ ಮಾದಕ ತಾರೆಯಾಗಿ ಕನ್ನಡ ಬೆಳ್ಳಿಪರದೆ ಬೆಳಗಿದ್ದ ಚಂದ್ರಿಕಾ ಸೆಕೆಂಡ್ ಇನ್ನಿಂಗ್ಸ್ ಗೆ ಸಿದ್ಧವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ತಮ್ಮ ಮೈಮಾಟವನ್ನು ರಾಗಿ ಮುದ್ದೆ ಬಸ್ಸಾರು ತಿಂದು, ಒಂದಷ್ಟು ಕಸರತ್ತು ಮಾಡಿ ಹಾಗೇ ಉಳಿಸಿಕೊಂಡಿದ್ದಾರೆ. ಅವರ ಸೌಂದರ್ಯ ಸೀಕ್ರೆಟ್ ರಾಗಿ ಮುದ್ದೆ ಎಂದರೆ ಇಂದಿನ ಕಾಲದ ನಟಿಯರು ನಂಬುವುದು ಕಷ್ಟ.

  ಓಂ ಸಾಯಿಪ್ರಕಾಶ್ ಆಕ್ಷನ್ ಕಟ್ ಹೇಳುತ್ತಿರುವ 'ಶ್ರೀನಾಗ ಶಕ್ತಿ' ಚಿತ್ರದ ಮೂಲಕ ಬೆಳ್ಳಿಪರದೆಗೆ ಮರಳಿದ್ದರು. ಬಹುತಾರಾಗಣದ ಆ ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ತಲುಪಲಿಲ್ಲ. ಚಂದ್ರಿಕಾ ಅವರಿಗೂ ಹೆಸರು ಬರಲಿಲ್ಲ. ಬಳಿಕ ಅವರು ಈಟಿವಿ ಕನ್ನಡ ವಾಹಿನಿಯ 'ಬಿಗ್ ಬಾಸ್' ರಿಯಾಲಿಟಿ ಶೋಗೆ ಅಡಿಯಿಟ್ಟರು.

  'ಬಿಗ್ ಬಾಸ್' ಶೋನಲ್ಲಿ ಇದ್ದಷ್ಟು ದಿನವೂ ಸಾಸಿವೆ ಕಾಳಿನಂತೆ ಚಿಟಪಟ ಎಂದು ಸಿಡಿಯುತ್ತ ಸದ್ದು ಮಾಡಿದರು. ಚಂದ್ರಿಕಾ ಯಾರು ಎಂಬುದನ್ನು ಮರೆತಿದ್ದವರಿಗೆ ಮತ್ತೆ ನೆನಪಿಸಿದರು. ಅಲ್ಲಿಂದ ಹೊರಬಂದ ಮೇಲೆ ಗಾಂಧಿನಗರ ಕಣ್ಣಿಗೆ ಮತ್ತೆ ಬಿದ್ದರು. ಈಗ ಅವರಿಗೆ ಬೇಜಾನ್ ಆಫರ್ ಗಳು ಬರುತ್ತಿವೆಯಂತೆ.

  ಮೂವತ್ತೆಂಟರ ಹರೆಯದ ಚಂದ್ರಿಕಾಗೆ ಒಂದು ಮುದ್ದಾದ ಮಗು ಇದೆ. ಆದರೂ ತಮ್ಮ ದೇಹವನ್ನು ಮಾತ್ರ ಇನ್ನೂ ಟ್ವೆಂಟಿ ಪ್ಲಸ್ ನಂತೆಯೇ ಕಾಪಾಡಿಕೊಂಡು ಬಂದಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಅವರಿಗೆ ಈಗ ಐಟಂ ಸಾಂಗ್ ನಲ್ಲಿ ಸೊಂಟ ಬಳುಕಿಸುವ ಚಾನ್ಸ್ ಸಿಕ್ಕಿದೆ.

  ಚತುರ್ಭುಜ ಚಿತ್ರದಲ್ಲಿ ಚಂದ್ರಿಕಾ ಐಟಂ ನಂಬರ್

  ಸದ್ಯಕ್ಕೆ ಅವರು 'ಚತುರ್ಭುಜ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಐಟಂ ಸಾಂಗ್ ಗೆ ಸೊಂಟ ಬಳುಕಿಸಲಿದ್ದಾರೆ, ಎದೆ ಕುಲುಕಿಸಲಿದ್ದಾರೆ. ಒಂದಷ್ಟು ಸಹ ನರ್ತಕಿಯರ ಜೊತೆ ಚಂದ್ರಿಕಾ ಅವರು ಹೆಜ್ಜೆ ಹಾಕಿದ್ದನ್ನು ಚಿತ್ರೀಕರಿಸಿಕೊಳ್ಳಲಾಗಿದೆ.

  ಮದನ್ ಹರಿಣಿ ನೃತ್ಯ ಸಂಯೋಜನೆ

  ಮದನ್ ಹರಿಣಿ ನೃತ್ಯ ಸಂಯೋಜನೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ತಮ್ಮ ಹಾವ ಭಾವ ಭಂಗಿಗಳನ್ನು ಚಂದ್ರಿಕಾ ಈ ಹಾಡಿನಲ್ಲಿ ತೋರಿದ್ದಾರೆ. ಇದೊಂದು ಸಾಮಾಜಿಕ ವಿಡಂಬನಾತ್ಮಕ ಹಾಡು.

  ದಿಗ್ಗಜರ ಜೊತೆ ತೆರೆ ಹಂಚಿಕೊಂಡಿದ್ದ ತಾರೆ

  ಚಂದ್ರಿಕಾ ಅವರಿಗೆ ಈ ಹಿಂದೆ ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್, ಶಂಕರ್ ನಾಗ್, ಕಾಶಿನಾಥ್ ಮುಂತಾದ ದಿಗ್ಗಜರ ಜೊತೆ ಅಭಿನಯಿಸಿದ ಅನುಭವವಿದೆ. ಗೋಲ್ ಮಾಲ್ ರಾಧಾಕೃಷ್ಣ, ಸಿಬಿಐ ವಿಜಯ್, ಕೆರಳಿದ ಕೇಸರಿ, ನೀನು ನಕ್ಕರೆ ಹಾಲು ಸಕ್ಕರೆ ಹಾಗೂ ಗಂಡನಿಗೆ ತಕ್ಕ ಹೆಂಡತಿ ಚಿತ್ರಗಳು ಚಂದ್ರಿಕಾ ಅವರಿಗೆ ಹೆಸರು ತಂದುಕೊಟ್ಟಂತಹವು.

  ಚತುರ್ಭುಜ ಹೊಸಬರ ಚಿತ್ರ

  ಇನ್ನು ಚತುರ್ಭುಜ ಚಿತ್ರದ ವಿಚಾರಕ್ಕೆ ಬಂದರೆ ಈ ಚಿತ್ರದಲ್ಲಿ ಹೊಸಬರಾದ ಶ್ರೀಯಾ ಹಾಗೂ ಚರಣ್ ದಾಸ್ ಅಭಿನಯಿಸಿದ್ದಾರೆ. ಕೃಷ್ಣ ಲೇಖನ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು.

  ಚಂದ್ರಿಕಾ ಐಟಂ ಹಾಡು ಖಂಡಿತ ಇಷ್ಟವಾಗುತ್ತದೆ

  ಈ ಹಾಡಿಗೆ ಚಂದ್ರಿಕಾ ಅವರೇ ಪರ್ಫೆಕ್ಟ್ ಅನ್ನಿಸಿತು. ಅವರನ್ನು ಸಂಪರ್ಕಿಸಿದೆವು. ಅವರು ಕೂಡಲೆ ಅಂಗೀಕರಿಸಿದರು. ಈ ಹಾಡನ್ನು ಪ್ರೇಕ್ಷಕರು ಖಂಡಿತ ಇಷ್ಟಪಡುತ್ತಾರೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

  ಸಂಪೂರ್ಣ ರಾತ್ರಿ ವೇಳೆ ಚಿತ್ರೀಕರಿಸಿದ ಹಾಡು

  ಈ ಹಾಡಿನ ಸಂಪೂರ್ಣ ಚಿತ್ರೀಕರಣವನ್ನು ರಾತ್ರಿ ವೇಳೆ ಮಾಡಿರುವುದು ವಿಶೇಷ. ಹಾಡಿಗೆ ಮದನ್ ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರದ ಬಹುತೇಕದ ಭಾಗದ ಚಿತ್ರೀಕರಣ ಮುಗಿದಿದೆ. ಮುಂದಿನ ಹಂತದ ಚಿತ್ರೀಕರಣವನ್ನು ಹಂಪಿ ಹಾಗೂ ಬಾಗಲಕೋಟೆಯಲ್ಲಿ ಮಾಡಲು ಉದ್ದೇಶಿಸಲಾಗಿದೆ ಎಂದು ನಿರ್ದೇಶಕರು ವಿವರ ನೀಡಿದ್ದಾರೆ.

  English summary
  Yesteryear actress Chandrika, who had acted with some of the big names of her time, made her comeback to acting a few years ago. Now she will be seen in an item number in forthcoming Kannada movie Chaturbhuja. The song was picturised on the actress along with group dancers recently.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more