For Quick Alerts
  ALLOW NOTIFICATIONS  
  For Daily Alerts

  ಚುನಾವಣೆ ನಂತರ ಚಿತ್ರರಂಗಕ್ಕೆ ಗುಡ್ ಬೈ: ರಮ್ಯಾ

  By Srinath
  |

  ಮಂಡ್ಯ ಲೋಕಸಭೆ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಾಗಿನಿಂದಲೂ ಖ್ಯಾತ ನಟಿ ರಮ್ಯಾ ಅಲಿಯಾಸ್ ದಿವ್ಯಸ್ಪಂದನ ಒಂದಲ್ಲ ಒಂದು ನೋವು, ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಈ ರಾಜಕೀಯ ಜಂಜಾಟದಿಂದ ಅವರು ಬಸವಳಿದಿದ್ದಾರಾ? ಅಥವಾ ಏನೇ ಆಗಲಿ ರಾಜಕೀಯದಲ್ಲೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸಿದ್ದಾರಾ?

  ನೋವೋ/ನಲಿವೋ/ಸೋತರೂ/ಗೆದ್ದರೂ ರಾಜಕೀಯ ಜೀವನವನ್ನೇ ಅಪ್ಪಿಕೊಂಡು ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುವುದಾಗಿ ರಮ್ಯಾ ತಮ್ಮ ಮನದಿಂಗಿತವನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಅಭಿಮಾನಿಗಳಿಗೆ 'ಗೋಲ್ಡನ್ ಗರ್ಲ್' ರಮ್ಯಾರ ಈ ನಿರ್ಧಾರ ನುಂಗಲಾರದ ತುತ್ತಾಗಿದ್ದು, ತೀವ್ರ ನಿರಾಶೆಗೊಳಗಾಗಿದ್ದಾರೆ. ದೊಡ್ಡ ಬ್ಯಾನರಿನ ಎರಡು ಚಿತ್ರಗಳಲ್ಲಿ ನಟಿಸಲು ಒಪ್ಪಿದ್ದ ರಮ್ಯಾ ಅಡ್ವಾನ್ಸ್ ಸಹ ಪಡೆದಿದ್ದರು. ಆದರೆ ಈಗ ಆ ಮುಂಗಡವನ್ನು ವಾಪಸ್ ಮಾಡಲು ನಿರ್ಧರಿಸಿದ್ದಾರೆ.

  ಅಥವಾ ಮತದಾನಕ್ಕಿನ್ನು ನಾಲ್ಕೈದು ದಿನಗಳಿರುವಾಗ ಖಾಸಗಿ ಬದುಕಿನಲ್ಲಿ ಅನೇಕ ವಿವಾದಗಗಳಿಗೆ ಗುರಿಯಾಗಿದ್ದು ಅದರಿಂದ ಹೊರಬರಲು, ಮತದಾರರ ಮನಸ್ಸನ್ನು ಬೇರೆಡೆ ಸೆಳೆಯಲು ಸಿನಿಮಾ ಜೀವನ ಬಿಟ್ಟು ಕಾಯಂ ಆಗಿ ರಾಜಕೀಯದ ಮೂಲಕ ಸಮಾಜಸೇವೆ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರಾ? ಕಾಲವೇ ಹೇಳಬೇಕು... ಅದಕ್ಕೂ ಮುನ್ನ ರಮ್ಯಾ ಏನು ಹೇಳಿದ್ದಾರೆ? ನೋಡೋಣ.

  ಅಭಿಮಾನಿಗಳಿಗೆ ತೀವ್ರ ನಿರಾಶೆ

  ಅಭಿಮಾನಿಗಳಿಗೆ ತೀವ್ರ ನಿರಾಶೆ

  ಇದೇ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿರುವ 'ಗೋಲ್ಡನ್ ಗರ್ಲ್' ರಮ್ಯಾ ತಮ್ಮ ಚಿತ್ರ ಬದುಕು ಸದ್ಯದಲ್ಲೇ ಅಂತ್ಯ ಕಾಣಲಿದೆ ಎಂದಿದ್ದಾರೆ. ಚಿತ್ರರಂಗದಲ್ಲಿ ಬಹುಬೇಡಿಕೆಯಾಗಿರುವಾಗಲೇ ರಮ್ಯಾ ಇಂತಹ ನಿರ್ಧಾರ ತೆಗೆದುಕೊಂಡಿರುವುದು ಆಘಾತಕಾರಿಯಾಗಿದೆ. ಸ್ವತಃ ರಮ್ಯಾ ಹೇಳಿರುವಂತೆ ಇನ್ಮುಂದೆ ಅವರು ಯಾವುದೇ ಸಿನಿಮಾದಲ್ಲಿ ನಟಿಸುವುದಿಲ್ಲ.

  ಉತ್ತುಂಗದಲ್ಲಿರುವಾಗಲೇ ನಟನೆಗೆ ಗುಡ್ ಬೈ

  ಉತ್ತುಂಗದಲ್ಲಿರುವಾಗಲೇ ನಟನೆಗೆ ಗುಡ್ ಬೈ

  ಬೇರೆ ನಟಿಯರು ತಮ್ಮ ಚಿತ್ರ ಬದುಕು ಅವಸಾನದಲ್ಲಿರುವಾಗ ರಾಜಕೀಯದತ್ತ ಹರಳುತ್ತಾರೆ. ಆದರೆ ಚಿತ್ರರಂಗದಲ್ಲಿ ನಾನು ಇನ್ನೂ ಉತ್ತುಂಗದಲ್ಲಿರುವಾಗಲೇ ನಟನೆಗೆ ಗುಡ್ ಬೈ ಹೇಳಿ ರಾಜಕೀಯದತ್ತ ಮುಖ ಮಾಡಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

  ನಾಯಕನ ಜತೆ ಡ್ಯೂಯೆಟ್ ಜನ ಒಪ್ಪುವುದಿಲ್ಲ

  ನಾಯಕನ ಜತೆ ಡ್ಯೂಯೆಟ್ ಜನ ಒಪ್ಪುವುದಿಲ್ಲ

  ನೋಡಿ ಸಂಸದರೊಬ್ಬರು ಶಾರ್ಟ್ ಸ್ಕರ್ಟ್- ಸ್ಲೀವ್ ಲೆಸ್ ಬ್ಲೌಸ್ ತೊಟ್ಟು ನಾಯಕನ ಜತೆ ಡ್ಯೂಯೆಟ್ ಹಾಡುವುದನ್ನು ಜನ ಒಪ್ಪುವುದಿಲ್ಲ. ಅಂಬರೀಷ್ ಅಂಕಲ್ ಅಂಥವರು ಮತ್ತೆ ನಟನೆಗೆ ಬಂದರೆ ಓಕೆ. ಆದರೆ ನಮಗೆ ಅದು ಸೂಟ್ ಆಗುವುದಿಲ್ಲ. ಹಾಗಾಗಿ ನಟನೆಗೆ ವಿರಾಮ ಹೇಳುತ್ತಿದ್ದೇನೆ ಎಂದೂ ರಮ್ಯಾ ಕಾರಣ ನೀಡಿದ್ದಾರೆ.

  ರಮ್ಯಾ ನಟಿಸಬೇಕಿದ್ದ ಚಿತ್ರಗಳು ಯಾವುವು?

  ರಮ್ಯಾ ನಟಿಸಬೇಕಿದ್ದ ಚಿತ್ರಗಳು ಯಾವುವು?

  ರಮ್ಯಾ ಅವರು ಖ್ಯಾತ ನಟ ಸುದೀಪ್ ಜತೆ ಒಂದು ಸಿನಿಮಾ ಹಾಗೂ 'ಸಂಜು ಮತ್ತು ಗೀತಾ' ತಂಡದ ಜತೆ ನಟಿಸಬೇಕಿತ್ತು. ಇದರ ಹೊರತಾಗಿ, ಪ್ರಜ್ವಲ್ ದೇವರಾಜ್ ಅವರ ದಿಲ್ ಕಾ ರಾಜಾ, ಜಗ್ಗೇಶ್ ತಾರಾಗಣದ ನೀರ್ ದೋಸೆ ಮತ್ತು ಶಿವರಾ್ ಕುಮಾರ್ ಅಭಿನಯದ ಆರ್ಯನ್ ಚಿತ್ರಗಳನ್ನು ಸಹ ರಮ್ಯಾ ಪೂರ್ಣಗೊಳಿಸಬೇಕಿದೆ.

  English summary
  Mandya Lok Sabha bypoll Congress candidate Kannada Actress Golden Girl Ramya to bid adieu to acting. Speaking to a daily, Ramya has said that her career in films will be ending soon. She will not going to act in any movie here after. This comes as a shocker, as the actress is in the peak of her career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X