»   » ನಟಿ ಹರಿಪ್ರಿಯಾ ಇ-ಮೇಲ್ ಮಾಡಿದ್ದಾರಾ ಹಾಗಿದ್ರೆ ಅದನ್ನು ನಂಬಬೇಡಿ

ನಟಿ ಹರಿಪ್ರಿಯಾ ಇ-ಮೇಲ್ ಮಾಡಿದ್ದಾರಾ ಹಾಗಿದ್ರೆ ಅದನ್ನು ನಂಬಬೇಡಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರ ಹೆಸರಲ್ಲಿ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸುಳ್ಳು ಖಾತೆ ತೆರೆದು ಉಪಯೋಗಿಸುವರು ಹಲವಾರು ಮಂದಿ ಸಿಗುತ್ತಾರೆ. ಮಾತ್ರವಲ್ಲದೇ ಇದು ಇತ್ತೀಚಿಗಿನ ಆನ್ ಲೈನ್ ದಂಧೆ ಆಗಿದೆ.

ಆದರೆ ಇದೀಗ ಹೊಸದಾಗಿ ಇಮೇಲ್ ಅಕೌಂಟ್ ಹ್ಯಾಕ್ ಮಾಡುವ ಹೊಸ ಸಮಸ್ಯೆ ಹುಟ್ಟಿದ್ದು ವಿಶೇಷ. ಹೌದು ನಟಿ ಹರಿಪ್ರಿಯಾ ಅವರ ಇಮೇಲ್ ಅಕೌಂಟ್ ಅನ್ನು ಯಾರೋ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ.[ಫೇಸ್ ಬುಕ್ ನಲ್ಲಿ ರಕ್ಷಿತ್ ಶೆಟ್ಟಿ ನಂಬಿ ಮೋಸ ಹೋಗ್ಬೇಡಿ!]

Kannada Actress Haripriya Email Account Hacked

'ಉಗ್ರಂ', 'ರಿಕ್ಕಿ' ಚಿತ್ರದ ಖ್ಯಾತಿಯ ನಟಿ ಹರಿಪ್ರಿಯಾ ಅವರ hariprriya6666@gmail.com ಇಮೇಲ್ ಅಕೌಂಟ್ ಹ್ಯಾಕ್ ಆಗಿದ್ದು, ಅವರ ಇಮೇಲ್ ಅಕೌಂಟ್ ನಿಂದ ಯಾವುದೇ ರೀತಿಯ ಸಂದೇಶ ರವಾನೆಯಾಗಿದ್ದರೆ, ಅಥವಾ ಯಾವುದೇ ರೀತಿಯ ಸಂಭಾಷಣೆ ನಡೆದಿದ್ದರೆ, ಅದಕ್ಕೆ ನಾನು ಜವಾಬ್ದಾರಿ ಅಲ್ಲ, ಅದು ನನ್ನಿಂದ ಆಗಿಲ್ಲ ಎಂದು ತಮ್ಮ ಗೆಳೆಯರು ಮತ್ತು ಅಭಿಮಾನಿಗಳಿಗೆ ನಟಿ ಟ್ವಿಟ್ಟರ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಈ ಮೊದಲು ಸ್ಟಾರ್ ನಟ-ನಟಿಯರ ಹೆಸರಲ್ಲಿ ಫೇಕ್ ಅಕೌಂಟ್ ಬಳಕೆ ಮಾಡುತ್ತಿದ್ದ ಬಗ್ಗೆ ಹಲವಾರು ದೂರುಗಳು ಕೇಳಿ ಬಂದಿದ್ದವು. ಆದರೆ ಸ್ಟಾರ್ ಗಳ ಇಮೇಲ್ ಅಕೌಂಟ್ ಹ್ಯಾಕ್ ಮಾಡುವ ಬಗ್ಗೆ ದೂರು ಬಂದಿದ್ದು ಮಾತ್ರ ಇದೇ ಮೊದಲ ಬಾರಿಗೆ ಎಂದೆನಿಸುತ್ತದೆ. ಇಂತಹ ಕೇಸ್ ಗಳು ತುಂಬಾ ಕಡಿಮೆ.

Kannada Actress Haripriya Email Account Hacked

ನಟಿ ರಾಧಿಕಾ ಪಂಡಿತ್, ಚಿಕ್ಕಣ್ಣ ಮತ್ತು ನಟ ರಕ್ಷಿತ್ ಶೆಟ್ಟಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರಿಂದ ಸ್ಟಾರ್ ನಟರು ಕಿರಿಕಿರಿ ಅನುಭವಿಸುವ ಪರಿಸ್ಥಿತಿ ಬಂದಿತ್ತು. ಇದೀಗ ಹ್ಯಾಕ್ ಮಾಡುವುದು ಮಾತ್ರ ಹೊಸ ವಿಚಾರ ಆಗಿದೆ.

English summary
After fake Twitter and Facebook accounts of film stars, there is a new online trouble: hackers. Sandalwood star Haripriya's email account hariprriya6666gmail.com has been hacked.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada