For Quick Alerts
  ALLOW NOTIFICATIONS  
  For Daily Alerts

  ರಮ್ಯಾ ಬೇಡ ಅಂದಿದ್ದು ಹರಿಪ್ರಿಯಾ ಪಾಲಾಯ್ತು.!

  By Suneetha
  |

  ಲಕ್ಕಿ ಸ್ಟಾರ್ ರಮ್ಯಾ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿರುವ 'ದಿಲ್ KA ರಾಜ' ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿರುವ ವಿಚಾರ ನಿಮಗೆ ಗೊತ್ತೇ ಇದೆ. ರಮ್ಯಾ ಅವರ ಅನುಪಸ್ಥಿತಿಯಿಂದ ಈ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗದೇ ನಿಂತ ನೀರಾಗಿದೆ.

  ಈ ಮೊದಲು ನಿರ್ದೇಶಕ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನಿಮಾದ ಕಥೆ ಕೂಡ ರಮ್ಯಾ ಅವರಿಂದಾಗಿ ಹೀಗೆ ಅರ್ಧಕ್ಕೆ ನಿಂತಿತ್ತು. ತದನಂತರ ಅವರ ಜಾಗಕ್ಕೆ 'ಉಗ್ರಂ' ಚಿತ್ರದ ಖ್ಯಾತಿಯ ನಟಿ ಹರಿಪ್ರಿಯಾ ಅವರನ್ನು ಕರೆತಂದು ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಹಳೇ ವಿಷಯ.['ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?]

  ಅಂದಹಾಗೆ ಈಗ 'ದಿಲ್ KA ರಾಜ' ಚಿತ್ರತಂಡ ಕೂಡ 'ನೀರ್ ದೋಸೆ' ಚಿತ್ರತಂಡ ಮಾಡಿದ ಕೆಲಸವನ್ನು ಮಾಡುತ್ತಿದೆ. ಹೌದು 'ದಿಲ್ KA ರಾಜಾ' ಚಿತ್ರಕ್ಕೆ ರಮ್ಯಾ ಅವರ ಜಾಗಕ್ಕೆ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅವರನ್ನು ಕರೆತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]

  ಇದಕ್ಕೆ ರಮ್ಯಾ ಅವರೂ ಒಪ್ಪಿಕೊಂಡಿದ್ದಾರಂತೆ, ಇತ್ತೀಚೆಗೆ 'ದಿಲ್ KA ರಾಜಾ' ಚಿತ್ರದ ನಿರ್ದೇಶಕ ಸೋಮನಾಥ್ ಪಾಟೀಲ್ ಅವರು ರಮ್ಯಾ ಅವರನ್ನು ಸಂಪರ್ಕಿಸಿ ಬೇರೊಬ್ಬ ನಾಯಕಿಯನ್ನು ಹಾಕಿಕೊಂಡು ಸಿನಿಮಾ ಮುಂದುವರಿಸುವುದಾಗಿ ಹೇಳಿದ್ದು, ಅದಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹಸಿರು ನಿಶಾನೆ ತೋರಿದ್ದಾರಂತೆ.[ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ']

  ಸದ್ಯಕ್ಕೆ ರಮ್ಯಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಮನಸ್ಸಿಲ್ಲ ಅನ್ನೋದು ಒಂದು ಕಡೆಯಾದರೆ, ಇನ್ನೊಂದೆಡೆ ರಾಜಕೀಯ ಕೆಲಸಗಳಿಂದಾಗಿ ಬಿಡುವು ಮಾಡಿಕೊಳ್ಳಲಾಗುತ್ತಿಲ್ಲ ಎಂದು ಅರ್ಧದಲ್ಲಿ ನಿಂತಿರುವ ಚಿತ್ರಕ್ಕೆ ಬೇರೆ ನಾಯಕಿಯನ್ನು ಕರೆತರಲು ರಮ್ಯಾ ಸೂಚನೆ ನೀಡಿದ್ದಾರೆ.

  ಇನ್ನು ಹರಿಪ್ರಿಯಾ ಅವರು ಪ್ರಜ್ವಲ್ ದೇವರಾಜ್ ಅವರ ಜೊತೆ ಇದಕ್ಕೂ ಮೊದಲು 'ಸಾಗರ್' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.ಇದೀಗ ಮತ್ತೆ 'ದಿಲ್ KA ರಾಜಾ' ಚಿತ್ರದಲ್ಲಿ ಒಂದಾಗುತ್ತಿದ್ದಾರೆ.[ಕೂದಲೆಳೆಯ ಅಂತರದಲ್ಲಿ ಪಾರಾದ ನಟಿ ಹರಿಪ್ರಿಯಾ]

  ಅಂತೂ ಇಂತೂ 'ನೀರ್ ದೋಸೆ'ಯನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಹರಿಪ್ರಿಯಾ ಅವರು ಇದೀಗ 'ದಿಲ್ KA ರಾಜಾ' ಸಿನಿಮಾವನ್ನು ಮುಗಿಸಿಕೊಡಲಿದ್ದಾರಂತೆ, ಒಟ್ನಲ್ಲಿ ಹೇಳಬೇಕೆಂದರೆ, ಸದ್ಯಕ್ಕೆ ಗಾಂಧಿನಗರದಲ್ಲಿ ಹರಿಪ್ರಿಯಾ ಅವರು ಎಲ್ಲರ ಆಪತ್ಕಾಲದ ಬಂಧು ಆಗಿದ್ದಾರೆ.

  English summary
  Kannada Actress Haripriya has bagged upcoming movie 'Dil Ka Raja', a Prajwal Devaraj starrer. Through this, Haripriya has replaced actress Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X