For Quick Alerts
  ALLOW NOTIFICATIONS  
  For Daily Alerts

  'ನೀರ್ ದೋಸೆ' ಬೆಡಗಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಇಲ್ಲಿದೆ ಅವಕಾಶ!

  By Suneetha
  |

  'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅವರು ತಮ್ಮ ಅಭಿಮಾನಿಗಳಿಗೆ ಓಪನ್ ಇನ್ವಿಟೇಷನ್ ಕೊಟ್ಟಿದ್ದಾರೆ. ಅದೇನಪ್ಪಾ ಅಂದ್ರೆ, ನಟಿ ಹರಿಪ್ರಿಯಾ ಅವರು ತಮ್ಮ ಹುಟ್ಟುಹಬ್ಬವನ್ನು ಇದೇ ಗುರುವಾರ (ಅಕ್ಟೋಬರ್ 29) ದಂದು ಆಚರಿಸಿಕೊಳ್ಳುತ್ತಿದ್ದು, ಆ ದಿನ ತಮ್ಮ ಅಭಿಮಾನಿಗಳಿಗೆ ಶೂಟಿಂಗ್ ಸ್ಪಾಟ್ ನಲ್ಲಿ ತಮ್ಮೊಂದಿಗೆ ಸೆಲ್ಫಿ ತೆಗೆಯುವ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ.

  ನಟಿ ಹರಿಪ್ರಿಯಾ ಅವರು ಈಗಾಗಲೇ 'ನೀರ್ ದೋಸೆ' ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಶೂಟಿಂಗ್ ನಡುವೆಯೂ ಸ್ವಲ್ಪ ಗ್ಯಾಪ್ ನಲ್ಲಿ ಬಿಡುವು ಮಾಡಿಕೊಂಡು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಸಮಯ ಕೊಡಲು ಹಾಗೂ ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ನಿರ್ಧರಿಸಿದ್ದಾರೆ.[ನೀರ್ ದೋಸೆಗೆ ತುಂಬಿದ ತೊಂಡೆ ಹಣ್ಣಿನಂತಿರುವ ಹರಿಪ್ರಿಯಾ?]

  ನಾಳೆ (ಅಕ್ಟೋಬರ್ 29 ರಂದು, ಗುರುವಾರ) 1.30 ರಿಂದ 2.30ರ ವರೆಗೆ ಯಾರೆಲ್ಲಾ 'ಉಗ್ರಂ' ಬೆಡಗಿ ಹರಿಪ್ರಿಯ ಅವರ ಅಭಿಮಾನಿಗಳು ಇದ್ದಾರೋ, ಅವರೆಲ್ಲರೂ 'ನೀರ್ ದೋಸೆ' ಸ್ಪಾಟ್ ಗೆ ಭೇಟಿ ಕೊಟ್ಟು ಬರ್ತ್ ಡೇ ಗರ್ಲ್ ಹರಿಪ್ರಿಯ ಅವರೊಂದಿಗೆ ಸೆಲ್ಫಿ ತೆಗೆಸಿಕೊಳ್ಳಬಹುದು.

  'ನೀರ್ ದೋಸೆ' ಚಿತ್ರದ ಶೂಟಿಂಗ್ ಸ್ಪಾಟ್ ಎಲ್ಲಿ, ಏನು, ಎತ್ತ ಅಂತ ಚಿತ್ರತಂಡ ಇಂದು ಸಂಜೆ ಒಳಗಾಗಿ ತಿಳಿಸಲಿದೆ. ಆನಂತರ ಅಭಿಮಾನಿಗಳು ನಾಳೆಯ ದಿನ ಸ್ಥಳಕ್ಕೆ ಭೇಟಿ ಕೊಟ್ಟು ಹರಿಪ್ರಿಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.[ಬಿಸಿ ಬಿಸಿ 'ನೀರ್ ದೋಸೆ'ಗೆ ಮಸಾಲೆ ಹಾಕಿದ ಹರಿಪ್ರಿಯಾ]

  ನಿರ್ದೇಶಕ ವಿಜಯ್ ಪ್ರಸಾದ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ನೀರ್ ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಅವರು ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಈ ಮೊದಲು ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು 'ನೀರ್ ದೋಸೆ' ಹುಯ್ಯಲಿದ್ದಾರೆ ಅಂತ ಸುದ್ದಿಯಾಗಿತ್ತಾದರೂ, ರಮ್ಯ ನೋ ಎಂದ ಮೇಲೆ ಕೊನೆಯ ಕ್ಷಣದಲ್ಲಿ ಅದು 'ಉಗ್ರಂ' ಬೆಡಗಿ ಪಾಲಾಗಿದೆ

  ಚಿತ್ರದಲ್ಲಿ ನಟಿ ಹರಿಪ್ರಿಯಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯಲಿದ್ದಾರೆ. ನಟ ಜಗ್ಗೇಶ್ ಅವರು ಕೂಡ 'ನೀರ್ ದೋಸೆ' ಹುಯ್ಯುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದಾರೆ.

  English summary
  Kannada Actress Haripriya has offered her fans a chance to take selfies with her on the occasion of her birthday on Thursday (October 29th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X