For Quick Alerts
  ALLOW NOTIFICATIONS  
  For Daily Alerts

  ಡಿಂಪಲ್ ಕೆನ್ನೆಯ ನಟಿಯರಿಗಾಗಿ ನಡೆಯುತ್ತಿದೆ 'ಭರ್ಜರಿ' ಹುಡುಕಾಟ

  By Suneetha
  |

  'ಬಹದ್ದೂರ್' ಸಿನಿಮಾ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಮತ್ತು ನಟ ಧ್ರುವ ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ಭರ್ಜರಿ' ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೀಗ ಚಿತ್ರಕ್ಕೆ ಹೊಸದಾಗಿ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅವರು ಎಂಟ್ರಿ ಕೊಟ್ಟಿದ್ದಾರೆ.

  ಅಂದಹಾಗೆ 'ಭರ್ಜರಿ' ಚಿತ್ರದಲ್ಲಿ ನಟಿ ಹರಿಪ್ರಿಯಾ ಅವರಿಗೆ ಅವಕಾಶ ಸಿಗಲು ಮುಖ್ಯ ಕಾರಣ ಏನಪ್ಪಾ ಅಂದ್ರೆ ಅವರ ಕೆನ್ನೆಯ ಮೇಲೆ ಬೀಳುವ ಡಿಂಪಲ್ ಅಂತೆ. ಈ ಇಡೀ ಸಿನಿಮಾದಲ್ಲಿ ಡಿಂಪಲ್ ಕೆನ್ನೆ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಡಿಂಪಲ್ ಕೆನ್ನೆಯ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡ ತೊಡಗಿದೆ.[ಭರ್ಜರಿ'ಗಾಗಿ 25 ಕೆಜಿ ತೂಕ ಕಳೆದುಕೊಂಡ ಧ್ರುವ ಸರ್ಜಾ]

  ನಟಿ ಹರಿಪ್ರಿಯಾ ಅವರ ಕೆನ್ನೆಯ ಮೇಲೂ ಡಿಂಪಲ್ ಬೀಳುವುದರಿಂದ ಸದ್ಯಕ್ಕೆ 'ಭರ್ಜರಿ' ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹೈದರಾಬಾದ್ ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಫೆಬ್ರವರಿ 22 ರಿಂದ 'ನೀರ್ ದೋಸೆ' ಬೆಡಗಿ ಹರಿಪ್ರಿಯ ಅವರ ಭಾಗದ ಚಿತ್ರೀಕರಣ ನಡೆಯಲಿದೆ.[ಚಿತ್ರಗಳು: 'ಭರ್ಜರಿ' ಸೆಟ್ ನಲ್ಲಿ, 'ಭರ್ಜರಿ' ಶೂಟಿಂಗ್ ಶುರುವಾಯ್ತು ನೋಡಿ..!]

  ಇನ್ನು ಕೆನ್ನೆಯ ಮೇಲೆ ಡಿಂಪಲ್ ಬೀಳುವ ಇನ್ನೊಬ್ಬ ನಟಿಗೆ ಚಿತ್ರತಂಡ ಶೋಧ ನಡೆಸಿದ್ದು, ನಟಿ ಹರಿಪ್ರಿಯಾರಂತೆ, ಅವರು ಕೂಡ 'ಭರ್ಜರಿ' ಚಿತ್ರದಲ್ಲಿ ಅತಿಥಿ ಪಾತ್ರ ವಹಿಸಲಿದ್ದಾರೆ.[ಕೂದಲೆಳೆಯ ಅಂತರದಲ್ಲಿ ಪಾರಾದ ನಟಿ ಹರಿಪ್ರಿಯಾ]

  ನಟ ಧ್ರುವ ಸರ್ಜಾ ಮತ್ತು ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ಕೂಡ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಮೊದಲು ನಟಿ ರಚಿತಾ ರಾಮ್ ಮತ್ತು ಹರಿಪ್ರಿಯಾ ಅವರು ಕಿಚ್ಚ ಸುದೀಪ್ ಅವರ ಜೊತೆ 'ರನ್ನ' ಚಿತ್ರದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದರು.

  'ರಿಕ್ಕಿ' ಸಿನಿಮಾದ ಭರ್ಜರಿ ಯಶಸ್ಸಿನಲ್ಲಿರುವ ನಟಿ ಹರಿಪ್ರಿಯಾ ಅವರು ಸದ್ಯಕ್ಕೆ 'ನೀರ್ ದೋಸೆ' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಒಟ್ನಲ್ಲಿ ಕೈತುಂಬಾ ಪ್ರಾಜೆಕ್ಟ್ ಹಿಡಿದು ಓಡಾಡುತ್ತಿರುವ ಅತ್ಯಂತ ಬ್ಯುಸಿ ನಟಿ ಯಾರು ಅಂದರೆ ಅದು ಹರಿಪ್ರಿಯಾ ಅಂತಾನೇ ಹೇಳಬಹುದು.

  English summary
  Kannada actress Hariprriya’s face seems to be moulding her career. It is because of her dimples that she has been chosen to play a significant role in Dhruva Sarja and Rachita Ram Starrer Kannada Movie 'Bharjari' directed by Chethan Kumar of Bahaddhur fame.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X