Just In
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Automobiles
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟಿ ಜಯಮಾಲಾಗೆ ಒಲಿದ 'ಮಂತ್ರಿ' ಅದೃಷ್ಟ: ಬೆಲ್ಲ ಸವಿದು ಸಂಭ್ರಮ

'ಗಿರಿ ಕನ್ಯೆ', 'ಶಂಕರ್ ಗುರು' ಸೇರಿದಂತೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ನಟಿ ಜಯಮಾಲಾ ಮನೆ ಬಾಗಿಲಿಗೆ ಅದೃಷ್ಟ ಹುಡುಕಿಕೊಂಡು ಬಂದಿದೆ.
ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಸದಸ್ಯೆ ಆಗಿರುವ ನಟಿ ಜಯಮಾಲಾಗೆ ಇದೇ ಮೊದಲ ಬಾರಿಗೆ ಮಂತ್ರಿ ಸ್ಥಾನ ಲಭಿಸಿದೆ. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಯಾಬಿನೆಟ್ ಗೆ ನಟಿ ಜಯಮಾಲಾ ಸೇರ್ಪಡೆ ಆಗಲಿದ್ದಾರೆ.
ನಾಲ್ಕು ವರ್ಷಗಳಿಂದ ವಿಧಾನ ಪರಿಷತ್ ಸದಸ್ಯೆ ಆಗಿ ಕಾರ್ಯ ನಿರ್ವಹಿಸಿರುವ ರೀತಿಯನ್ನು ಪರಿಗಣಿಸಿ ಕಾಂಗ್ರೆಸ್ ಪಕ್ಷದ ವರಿಷ್ಟರು ಜಯಮಾಲಾ ರವರಿಗೆ ಸಚಿವ ಸ್ಥಾನ ಕೊಡಲು ಮನಸ್ಸು ಮಾಡಿದ್ದಾರೆ.
ಸಂಪುಟ ಸೇರ್ಪಡೆ ಆಗುತ್ತಿರುವುದಕ್ಕೆ ಹರ್ಷಿತರಾದ ಜಯಮಾಲಾ, ಮನೆಯಲ್ಲಿ ಬೆಲ್ಲ ಸವಿದು ಸಂಭ್ರಮಿಸಿದರು. ''ನಾಲ್ಕು ವರ್ಷಗಳಿಂದ ನಾನು ಕೆಲಸ ಮಾಡಿರುವುದನ್ನು ಪಕ್ಷದ ವರಿಷ್ಟರು ನೋಡಿದ್ದಾರೆ. ಮತ್ತೆ ಯೋಗ ಕೂಡ ಇರಬಹುದು. ನಾನು ಅದರಲ್ಲಿಯೂ ನಂಬಿಕೆ ಇಟ್ಟುಕೊಂಡಿದ್ದೇನೆ. ಖಾತೆ ಯಾವುದೇ ಕೊಟ್ಟರೂ, ಅದಕ್ಕೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ'' ಎನ್ನುತ್ತಾರೆ ನಟಿ ಜಯಮಾಲಾ
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ 8 ಜೆಡಿಎಸ್ ಶಾಸಕರ ಪರಿಚಯ
''ನನ್ನ ಹೃದಯಕ್ಕೆ ಹತ್ತಿರವಾಗಿರುವುದು ಹೆಣ್ಮಕ್ಳು. ಈ ದೇಶದಲ್ಲಿ ಇರುವ ಮಹಿಳೆಯರ ಸ್ಥಿತಿ-ಗತಿ ಬಗ್ಗೆ ಅಧ್ಯಯನ ಮಾಡಿರುವೆ. ರಾಜ್ಯದ ಹೆಣ್ಣಿನ ಸಶಕ್ತಿಕರಣದ ಬಗ್ಗೆ ನನಗೆ ಅತ್ಯಂತ ಕಾಳಜಿ ಇದೆ. ಎಲ್ಲಿ ಕೂತರೂ ನಾನು ಹೆಣ್ಣನ್ನು ಪ್ರತಿನಿಧಿಸುತ್ತಾ ಹೋಗುವೆ. ಹೆಣ್ಣಿಗೆ ಒಳ್ಳೆಯ ಸ್ಥಾನಮಾನ, ರಕ್ಷಣೆ ಸಿಗಬೇಕು ಅನ್ನೋದು ನನ್ನ ಅಂತರಾತ್ಮದ ಆಸೆ. ಆದ್ರೆ, ಪಕ್ಷ ಯಾವುದೇ ಖಾತೆ ಕೊಟ್ಟರೂ, ಅದನ್ನ ಪ್ರಸಾದ ಅಂತ ತಿಳಿದುಕೊಂಡು ನಿಷ್ಟೆಯಿಂದ ಕೆಲಸ ಮಾಡುವೆ'' ಎನ್ನುವ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಗ್ಗೆ ತಮಗಿರುವ ಆಸಕ್ತಿಯನ್ನು ಜಯಮಾಲಾ ಹೊರಹಾಕಿದರು.
ಸಚಿವ ಸ್ಥಾನ ಗಿಟ್ಟಿಸಿಕೊಂಡವರ ಫೈನಲ್ ಲಿಸ್ಟ್ ಇಲ್ಲಿದೆ ನೋಡಿ
1959 ರಲ್ಲಿ ಜನಿಸಿದ ನಟಿ ಜಯಮಾಲಾ ಕನ್ನಡ, ತೆಲುಗು, ತಮಿಳು, ತುಳು ಹಾಗೂ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ 'ತಾಯಿ ಸಾಹೇಬ' ಚಿತ್ರದ ಮೂಲಕ ನಿರ್ಮಾಪಕಿ ಆದ ಜಯಮಾಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ರಾಜಕೀಯ ರಂಗ ಪ್ರವೇಶ ಮಾಡಿದ ಜಯಮಾಲಾ ವಿಧಾನ ಪರಿಷತ್ ಸದಸ್ಯೆ ಆದರು. ಈಗ ಮಂತ್ರಿ ಪಟ್ಟಕ್ಕೇರಿದ್ದಾರೆ.