»   » ಈ ವಾರದ ವೀಕೆಂಡ್ ನಲ್ಲಿ 'ಚಂದನದ ಗೊಂಬೆ' ಜ್ಯೂಲಿ

ಈ ವಾರದ ವೀಕೆಂಡ್ ನಲ್ಲಿ 'ಚಂದನದ ಗೊಂಬೆ' ಜ್ಯೂಲಿ

Posted By:
Subscribe to Filmibeat Kannada

ಬಹುಭಾಷಾ ಖ್ಯಾತ ನಟಿ ಲಕ್ಷ್ಮಿ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಅವರು ಅನಂತ್ ನಾಗ್ ಜೊತೆ ನಟಿಸಿದ ಹಲವಾರು ರೋಮ್ಯಾಂಟಿಕ್ ಸಿನಿಮಾಗಳಿಗೆ ಪ್ರೇಕ್ಷಕರು, ಅಭಿಮಾನಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ಬಾರಿಸಿದ್ದಾರೆ.

ಅಲ್ಲದೇ, ನಟ ಸಾರ್ವಭೌಮ ಡಾ. ರಾಜ್ ಕುಮಾರ್, ಅಭಿನಯ ಭಾರ್ಗವ ವಿಷ್ಣುವರ್ಧನ್, ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಮುಂತಾದವರ ಜೊತೆ ಚಿತ್ರಗಳಲ್ಲಿ ನಟಿಸಿ ಎಲ್ಲಾ ಭಾಷೆಯ ಸಿನಿಮಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡ ಜ್ಯೂಲಿ ಲಕ್ಷ್ಮಿ ಅವರು ಹೆಂಗಳೆಯರ ಅಚ್ಚುಮೆಚ್ಚಿನ ನಟಿ.

Kannada Actress Lakshmi in Weekend with Ramesh

ಆದರೆ ಇಷ್ಟೆಲ್ಲಾ ಸಾಧನೆ ಮಾಡಿರುವ ನಟಿ ಲಕ್ಷ್ಮಿ ಅವರ ನಿಜ ಬದುಕಿನ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ ಅನಿಸುತ್ತದೆ. ಅದಕ್ಕಾಗಿ ನಟಿ ಲಕ್ಷ್ಮಿ ಅವರು ಈ ವಾರ ವೀಕೆಂಡ್ ನ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳಲಿದ್ದಾರೆ.

'ಜ್ಯೂಲಿ' ಲಕ್ಷ್ಮಿ ಅಂತಾನೇ ಖ್ಯಾತ ಪಡೆದಿರುವ ನಟಿ ಲಕ್ಷ್ಮಿ ಅವರ ಬದುಕಿನ ಸತ್ಯ ಕಥೆಗಳು ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

Kannada Actress Lakshmi in Weekend with Ramesh

ತಮಿಳು ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ಬೆಳ್ಳಿ ತೆರೆಗೆ ಕಾಲಿಟ್ಟ ನಟಿ ಲಕ್ಷ್ಮಿ ಅವರು ಮತ್ತೊಮ್ಮೆ ತಮ್ಮ ಹಳೆಯ ನೆನಪಿನಾಳಕ್ಕೆ ಜಾರಿ ಹೋಗಲಿದ್ದಾರೆ.

ಇನ್ನು ಯಾರೆಲ್ಲಾ ಲಕ್ಷ್ಮಿ ಅವರ ಕಟ್ಟಾ ಅಭಿಮಾನಿಗಳಿದ್ದೀರೊ ಎಲ್ಲರೂ ಈ ವಾರದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನು ತಪ್ಪದೇ ನೋಡಿ..

English summary
Kannada Actress Lakshmi recently attended the 'Weekend with Ramesh - 2' and shared her experiences.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada