»   » ಡಾ.ವಿಷ್ಣುವರ್ಧನ್ ಮೇಲೆ ಆಗಿತ್ತು ಅಟ್ಯಾಕ್: ಲೀಲಾವತಿ

ಡಾ.ವಿಷ್ಣುವರ್ಧನ್ ಮೇಲೆ ಆಗಿತ್ತು ಅಟ್ಯಾಕ್: ಲೀಲಾವತಿ

Written By:
Subscribe to Filmibeat Kannada

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಶತ್ರುಗಳ ಕಾಟ ಇತ್ತು. ಅವರ ಮೇಲೆ ಅಟ್ಯಾಕ್ ಕೂಡ ಆಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನ ಹಿರಿಯ ನಟಿ ಲೀಲಾವತಿಯವರು ಬಿಚ್ಚಿಟ್ಟಿದ್ದಾರೆ.

ನಿನ್ನೆ (ಅಕ್ಟೋಬರ್-3೦) ಹಿರಿಯ ನಟಿ ಲೀಲಾವತಿ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಡಾ.ವಿಷ್ಣು ಸೇನಾ ಸಮಿತಿ ಸಹಭಾಗಿತ್ವದಲ್ಲಿ ಅಭಿನವ ಭಾರ್ಗವ ಡಾ.ವಿಷ್ಣುವರ್ಧನ್ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸಮಾರಂಭದಲ್ಲಿ ನಟಿ ಲೀಲಾವತಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಸೇರಿದಂತೆ ಹಲವರು ಭಾಗಿಯಾಗಿದ್ದರು.[ಹಿರಿಯ ನಟಿ ಲೀಲಾವತಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ]

ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಲೀಲಾವತಿಯವರು, ಡಾ.ವಿಷ್ಣುವರ್ಧನ್ ಅವರ ಬಗ್ಗೆ ಗೊತ್ತಿಲ್ಲದ ಕೆಲ ಸಂಗತಿಗಳ ಜೊತೆ ಬೆಚ್ಚಿಬೀಳಿಸುವಂತಹ ಮಾಹಿತಿಯನ್ನ ಹಂಚಿಕೊಂಡರು....ಮುಂದೆ ಓದಿ

ನನಗಿಂತ ಹೆಚ್ಚು ನೋವು ವಿಷ್ಣುಗಿತ್ತು

''ಜೀವನದಲ್ಲಿ ನನಗೆ ತುಂಬಾ ನೋವುಗಳಿದೆ ಅಂತ ತಿಳಿದುಕೊಂಡಿದ್ದೆ, ಆದ್ರೆ ಡಾ.ವಿಷ್ಣುವರ್ಧನ್ ಅವರು ನನಗಿಂತ ಹೆಚ್ಚು ಕಷ್ಟ ಪಟ್ಟಿದ್ದಾರೆ''.-ಲೀಲಾವತಿ

ನನ್ನನ್ನು ತಾಯಿಯಂತೆ ಕಾಣುತ್ತಿದ್ದರು

''ವಿಷ್ಣುವರ್ಧನ್ ಜೊತೆ ನಾನು ಹಲವು ಸಿನಿಮಾಗಳನ್ನ ಮಾಡಿದ್ದೇನೆ. ಅವರು ತಮ್ಮ ತಾಯಿಯನ್ನ ಕಳೆದುಕೊಂಡಾಗ, ನೀವೇ ನನ್ನ ತಾಯಿ ಎಂದು ನನಗೆ ಮಾತೃಸ್ಥಾನ ಕೊಟ್ಟಿದ್ದರು. ಸ್ವಂತ ತಾಯಿಯಂತೆ ಕಾಣುತ್ತಿದ್ದರು. ಈಗ ಇಂತಹ ಮಗನ ಹೆಸರಿನಲ್ಲಿ ಪ್ರಶಸ್ತಿ ಸಿಕ್ಕಿರುವುದು ತುಂಬಾ ಸಂತೋಷವಾಗಿದೆ''-ಲೀಲಾವತಿ

ವಿಷ್ಣುವರ್ಧನ್ ಗೂ ಶತ್ರು ಕಾಟ

ಅಭಿಮಾನಿಗಳ ಹೃದಯವಂತ, ಸಂಕಷ್ಟದಲ್ಲಿದ್ದವರಿಗೆ ಆಪ್ತಮಿತ್ರ, ಕನ್ನಡ ಚಿತ್ರರಂಗದ ಯಜಮಾನ ಅಂತೆಲ್ಲಾ ಕರೆಸಿಕೊಳ್ಳುವ ವಿಷ್ಣುದಾದಾಗೆ, ಶತ್ರುಗಳ ಕಾಟ ಇತ್ತು. ಅಷ್ಟೇ ಅಲ್ಲ ವಿಷ್ಣುವರ್ಧನ್ ಮೇಲೆ ಅಟ್ಯಾಕ್ ಕೂಡ ಆಗಿತ್ತು ಎಂಬ ಸ್ಪೋಟಕ ಮಾಹಿತಿಯನ್ನ ಹಿರಿಯ ನಟಿ ಲೀಲಾವತಿಯರು ಬಿಚ್ಚಿಟ್ಟಿದ್ದಾರೆ.

ವಿಷ್ಣು ಮೇಲೆ ಅಟ್ಯಾಕ್

''ಒಮ್ಮೆ ಚಿತ್ರದುರ್ಗದಲ್ಲಿ ಕಾರ್ಯಕ್ರವೊಂದನ್ನ ಮುಗಿಸಿ ವಾಪಸ್ ಬರುವಾಗ, ಅಭಿಮಾನಿಯ ರೀತಿಯಲ್ಲಿ ಶುಭಾಶಯ ಹೇಳಲು ಕಾರು ಹತ್ತಿರ ಬಂದ ದುಷ್ಕರ್ಮಿಗಳು, ವಿಷ್ಣುವರ್ಧನ್ ಅವರಿಗೆ ಚಾಕುವಿನಿಂದ ಗಾಯಗೊಳಿಸಿ ಪರಾರಿಯಾಗಿದ್ದರು'' ಎಂದು ಲೀಲಾವತಿ ಅವರು ಹೇಳಿಕೊಂಡರು.

'ಕನ್ನಡದ ಕಂದ'ನಿಗೆ ವಿಷ್ಣು ಸಹಾಯ

''ನಟ ವಿನೋದ್ ರಾಜ್ ಅಭಿನಯಿಸಿದ್ದ 'ಕನ್ನಡದ ಕಂದ' ಚಿತ್ರವನ್ನ ಬಿಡುಗಡೆ ಮಾಡುವುದಕ್ಕಾಗಿ, ವಿನೋದ್ ರಾಜ್ ಹಾಗೂ ಚಿತ್ರತಂಡ ಕಷ್ಟ ಪಡುತ್ತಿದ್ದ ಸಂಧರ್ಭದಲ್ಲಿ ವಿಷ್ಣುವರ್ಧನ್ ಅವರು ಸಹಾಯ ಮಾಡಿದ್ದರು'' ಎಂದು ನಟ ವಿನೋದ್ ರಾಜ್ ವೇದಿಕೆಯಲ್ಲಿ ನೆನಸಿಕೊಂಡರು.

ಬೆಂಗಳೂರಲ್ಲೇ ಸ್ಮಾರಕವಾಗಲಿ

ಇನ್ನೂ, ವಿಷ್ಣುವರ್ಧನ್ ಅವರ ಸ್ಮಾರಕ್ಕ ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಲೀಲಾವತಿಯವರು ''ವಿಷ್ಣುಸ್ಮಾರಕದ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ಬೆಂಗಳೂರಿನಲ್ಲೇ ಸ್ಮಾರಕವಾದ್ರೆ ಒಳ್ಳೆಯದು'' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ರು.

English summary
Veteran Actress Leelavathi To Honor dr vishnuvardhan award From Kannada Sahithya Parishath With Vishnu Sena Samithi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada