TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಹುಟ್ಟುಹಬ್ಬದ ಸಂಭ್ರಮದಲ್ಲಿ ಮಾಲಾಶ್ರೀ ಪುತ್ರಿ
ಕನಸಿನ ರಾಣಿ ಎಂದೇ ಖ್ಯಾತಿ ಗಳಿಸಿರುವ ನಟಿ ಮಾಲಾಶ್ರೀ ಈಗ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಸದ್ಯಕ್ಕೆ ತಮ್ಮ ಹೋಮ್ ಬ್ಯಾನರ್ ಸಿನಿಮಾಗಳ ನಿರ್ಮಾಣದ ಕೆಲಸ ಹಾಗೂ ತಮ್ಮ ಕುಟುಂಬದ ಜೊತೆಗೆ ಖುಷಿಯಾಗಿ ಇದ್ದಾರೆ.
ನಟಿ ಮಾಲಾಶ್ರೀ ಹಾಗೂ ಹಾಗೂ ನಿರ್ಮಾಪಕ ರಾಮು ಕುಟುಂಬದಲ್ಲಿ ನಿನ್ನೆ ಮರೆಯಲಾಗದ ದಿನವಾಗಿದೆ. ಕಾರಣ, ಫೆಬ್ರವರಿ 2 ಈ ದಂಪತಿ ಅಪ್ಪ ಅಮ್ಮ ಆದ ದಿನ. ರಾಮು ಹಾಗೂ ಮಾಲಾಶ್ರೀ ಅವರ ಅರಮನೆಗೆ ಯುವರಾಣಿ ಬಂದ ದಿನ.
ರೋಮಿಯೋ ಡ್ಯಾನ್ಸ್ ಮಾಡಿದ ಅಂಬರೀಶ್-ಮಾಲಾಶ್ರೀ
ನಿನ್ನೆ ಮಾಲಾಶ್ರೀ ಪ್ರೀತಿಯ ಮಗಳ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗಿದೆ. ಮಾಲಾಶ್ರೀ ಮಗಳಿಗೆ ಅಭಿಮಾನಿಗಳ ಶುಭ ಹಾರೈಕೆ ತಲುಪಿದೆ. ಟ್ವಿಟ್ಟರ್ ನಲ್ಲಿ ಸಾಕಷ್ಟು ಫ್ಯಾನ್ಸ್ ವಿಶ್ ಮಾಡಿದ್ದಾರೆ. ಮುಂದೆ ಓದಿ...
ಅನನ್ಯ ಹುಟ್ಟುಹಬ್ಬ
ಮಾಲಾಶ್ರೀ ಹಾಗೂ ರಾಮು ಇಬ್ಬರು ಚಿತ್ರರಂಗದಲ್ಲಿ ಇದ್ದರೂ ಅವರ ಕುಟುಂಬದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಅಂದಹಾಗೆ, ಮಾಲಾಶ್ರೀ ಪುತ್ರಿಯ ಹೆಸರು ಅನನ್ಯ. ನಿನ್ನೆ ಅನನ್ಯ ತಮ್ಮ ಹುಟ್ಟುಹಬ್ಬವನ್ನು ಆಚಸಿಕೊಂಡಿದ್ದಾರೆ. ಮಾಲಾಶ್ರೀ ತಮ್ಮ ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿಯೂ ಶುಭಾಶಯ ತಿಳಿಸಿದ್ದಾರೆ.
|
ಟ್ವಿಟ್ಟರ್ ನಲ್ಲಿ ಶುಭಾಶಯ
ಮಾಲಾಶ್ರೀ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ''ನನ್ನ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು. ಹೆಣ್ಣು ಮಕ್ಕಳು ಬೆಳೆಯುತ್ತ ನಮ್ಮ ಆಪ್ತ ಸ್ನೇಹಿತೆ ಆಗುತ್ತಾರೆ. ಆ ರೀತಿಯ ಮಗಳನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ.'' ಎಂದು ಮಾಲಾಶ್ರೀ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಬ್ಬರು ಮಕ್ಕಳು
ಆರತಿಗೆ ಒಬ್ಬಳು, ಕೀರ್ತಿಗೆ ಒಬ್ಬ ಎನ್ನುವ ಹಾಗೆ ಮಾಲಾಶ್ರೀ ಹಾಗೂ ರಾಮು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅನನ್ಯ ಹಿರಿಯ ಪುತ್ರಿಯಾಗಿದ್ದಾರೆ. ಆರ್ಯನ್ ಎಂಬ ಮಗ ಕೂಡ ಇದ್ದಾನೆ. ಅನನ್ಯ ಸದ್ಯ ತಮ್ಮ 18ನೇ ವರ್ಷದ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಆರ್ಯನ್ ಆಕೆಗಿಂತ ವಯಸ್ಸಿನಲ್ಲಿ ಚಿಕ್ಕವನು.
ಇತ್ತೀಚಿಗೆ ನಟಿಸಿದ್ದು
ಮಾಲಾಶ್ರೀ ಇತ್ತೀಚಿಗೆ ನಟಿಸಿದ್ದ ಸಿನಿಮಾ ಅಂದರೆ 'ಉಪ್ಪಿ ಹುಳಿ ಖಾರ'. ಈ ಸಿನಿಮಾ 2017 ರಲ್ಲಿ ಬಿಡುಗಡೆಯಾಗಿತ್ತು. ಇಲ್ಲಿ ಕನಸಿನ ರಾಣಿ ಪೊಲೀಸ್ ಆಫೀಸರ್ ಆಗಿ ನಟಿಸಿದ್ದರು. ಈ ಸಿನಿಮಾದ ನಂತರ ಮಾಲಾಶ್ರೀ ಸದ್ಯಕ್ಕೆ ಯಾವ ಸಿನಿಮಾದಲ್ಲಿಯೂ ನಟಿಸಿಲ್ಲ. ಆ ಚಿತ್ರಕ್ಕೂ ಹಿಂದೆ ನಟಿಸಿದ್ದ 'ಗಂಗಾ' ಮಾಲಾಶ್ರೀ ಅವರಿಗೆ ರಾಜ್ಯ ಪ್ರಶಸ್ತಿ ತಂದು ಕೊಟ್ಟಿತ್ತು.