»   » ಮಾಲಾಶ್ರೀ ಜೊತೆ 'ಘರ್ಷಣೆ'ಗೆ ಐಂದ್ರಿತಾ ರೆಡಿನಾ?

ಮಾಲಾಶ್ರೀ ಜೊತೆ 'ಘರ್ಷಣೆ'ಗೆ ಐಂದ್ರಿತಾ ರೆಡಿನಾ?

Posted By:
Subscribe to Filmibeat Kannada
ಕನ್ನಡದ 'ಕನಸಿನ ರಾಣಿ', ಆಕ್ಷನ್ ಕ್ವೀನ್ ಮಾಲಾಶ್ರೀ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಇತ್ತೀಚಿಗಷ್ಟೇ ಕೆ ಮಂಜು ನಿರ್ಮಾಣದ ಇನ್ನೂ ಹೆಸರಿಡದ ಚಿತ್ರದಲ್ಲಿ ಮಾಲಾಶ್ರೀ ನಟಿಸುವ ಸುದ್ದಿ ಬಂದಿತ್ತು. ಅದು ಹಳೆಯದಾಗುವ ಮುನ್ನವೇ ಇನ್ನೊಂದು ಚಿತ್ರ ಮಾಲಾಶ್ರೀ ಕೈ ಸೇರಿದೆ. ಅದು 'ಅದ್ದೂರಿ' ನಿರ್ಮಾಪಕ ಶಂಕರ್ ರೆಡ್ಡಿ ಹಾಗೂ ಇನ್ನೊಬ್ಬ ನಿರ್ಮಾಪಕ ಶಂಕರೇಗೌಡ ನಿರ್ಮಾಣದ 'ಘರ್ಷಣೆ' ಹೆಸರಿನ ಚಿತ್ರ.

ಈ ಚಿತ್ರದಲ್ಲಿ ಮಾಲಾಶ್ರೀ ಸಿಸಿಬಿ ಅಧಿಕಾರಿ ಪಾತ್ರದಲ್ಲಿ ನಟಿಸಲಿದ್ದಾರೆ. ಆದರೆ ಚಿತ್ರದಲ್ಲಿ ಅವರು ಸಿಸಿಬಿ ಅಧಿಕಾರಿಯ ಯೂನಿಫಾರಂ ಧರಿಸುವುದಿಲ್ಲವಂತೆ. ಆದರೆ ಮಾಲಾಶ್ರೀ ನಟಿಸುತ್ತಾರೆ ಎಂದ ಮೇಲೆ ಹೊಡಿ-ಬಡಿ ಸೌಂಡ್ ಜೋರಾಗಿ ಇದ್ದೇ ಇರುತ್ತದೆ. ಅದ್ಯಾವುದೂ ಕಡಿಮೆ ಇರವುದಿಲ್ಲ ಅಂದಿದ್ದಾರೆ ನಿರ್ಮಾಪಕದ್ವಯರು. ಈ ಚಿತ್ರದಲ್ಲಿ 'ಈ ಮೊದಲಿನ ಮಾಲಾಶ್ರೀ 'ಶಕ್ತಿ' ಚಿತ್ರದಲ್ಲಿ ನಟಿಸಿದ್ದ ರವಿಶಂಕರ್ ಕೂಡ ಇರಲಿದ್ದಾರೆ ಎಂಬುದು ವಿಶೇಷ.

ಈ ಚಿತ್ರದಲ್ಲಿ ಇನ್ನೂ ಒಂದು ವಿಶೇಷತೆ ಇರುವ ಸಾಧ್ಯತೆಯಿದೆ. ಅದು, ಕನ್ನಡದ ಮುದ್ದುಮುಖದ ಬೆಡಗಿ ಐಂದ್ರಿತಾ ರೇ ಅವರಿಗೆ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರದ ಆಫರ್ ನೀಡಲಾಗಿದೆ. ಐಂದ್ರಿತಾ ಓಕೆ ಅಂದುಬಿಟ್ಟರೆ ಮಾಲಾಶ್ರೀ ಆಕ್ಷನ್ ಜೊತೆ ಐಂದ್ರಿತಾ ತಳುಕು-ಬಳುಕನ್ನೂ ಪ್ರೇಕ್ಷಕರು ಒಂದೇ ಚಿತ್ರದಲ್ಲಿ ನೋಡಬಹುದು. ಆದರೆ ಸದ್ಯಕ್ಕೆ ಮಾಹಿತಿ ಪಕ್ಕಾ ಆಗಿಲ್ಲವಾದ್ದರಿಂದ ಕಾದು ನೋಡಬೇಕಿದೆ.

ಇನ್ನು 'ಘರ್ಷಣೆ' ಚಿತ್ರವು ಪಕ್ಕಾ ಕಮರ್ಷಿಯಲ್ ಆಕ್ಷನ್ ಚಿತ್ರವಾಗಿದ್ದು ಈ ಚಿತ್ರದಲ್ಲಿ ಮಾಲಾಶ್ರೀ ತಮ್ಮ ಎಂದಿನ ಸಾಹಸಗಳ ಜೊತೆ ಇನ್ನೂ ವಿಭಿನ್ನವಾದ ಕೆಲವು ಸಾಹಸಗಳಿಗೂ ಕೈಹಾಕಲಿದ್ದಾರೆ ಎನ್ನಲಾಗುತ್ತಿದೆ. ಮಾಲಾಶ್ರೀಗೆ ಈಗ ಮೊದಲಿಗಿಂತ ವಯಸ್ಸು ಸಹಜವಾಗಿ ಹೆಚ್ಚಾಗಿದ್ದರೂ ಮೊದಲಿನಂತೆ ಸ್ಟಂಟ್ ಮಾಡುತ್ತಾರೆ, ರಿಸ್ಕ್ ತೆಗೆದುಕೊಂಡು ಸಿನಿಮಾ ಪ್ರೀತಿ ಮೆರೆಯುತ್ತಾರೆ ಎಂಬ ನ್ಯೂಸ್ ಚಿತ್ರತಂಡಗಳಿಂದ ಹರಿದುಬರುತ್ತಿದೆ. ಅಂದಹಾಗೆ, ಘರ್ಷಣೆ ಚಿತ್ರಕ್ಕೆ ಇದೇ ಅಕ್ಟೋಬರ್ 18 ರಂದು ಮುಹೂರ್ತ. (ಒನ್ ಇಂಡಿಯಾ ಕನ್ನಡ)

English summary
Kannada Actress Malashri acts in another movie 'Gharshane' in Shankar Reddy and Shankregowda Production. This movie to Starts on 18th October 2012. 
 
Please Wait while comments are loading...