For Quick Alerts
  ALLOW NOTIFICATIONS  
  For Daily Alerts

  ದೀಪಾವಳಿಗೆ ಭರ್ಜರಿ ಸುದ್ದಿ ಕೊಟ್ಟ ಮಯೂರಿ: ಕುಟುಂಬಕ್ಕೆ ಹೊಸ ವ್ಯಕ್ತಿ ಆಗಮನ

  |

  'ಕೃಷ್ಣಲೀಲಾ' ಖ್ಯಾತಿಯ ನಟಿ ಮಯೂರಿ ಮನೆಯಲ್ಲಿ ಈ ವರ್ಷ ದೀಪಾವಳಿ ಹಬ್ಬ ಅದ್ಧೂರಿ ಮತ್ತು ಸಂಭ್ರಮದಿಂದ ಕೂಡಿದೆ. ಏಕಂದ್ರೆ, ಮಯೂರಿ ತಮ್ಮ ಕುಟುಂಬಕ್ಕೆ ಹೊಸ ವ್ಯಕ್ತಿಯನ್ನು ಸ್ವಾಗತಿಸುತ್ತಿದ್ದಾರೆ. ಹೌದು, ನಟಿ ಮಯೂರಿ ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  ಸಿಹಿ ಸುದ್ದಿ ಕೊಟ್ಟ ಕೃಷ್ಣಲೀಲ ಸುಂದರಿ ಮಯೂರಿ | Filmibeat Kannada

  ಈ ವಿಷಯವನ್ನು ಸ್ವತಃ ಮಯೂರಿ ಅವರೇ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ದೀಪಾವಳಿ ಹಬ್ಬದ ವಿಶೇಷವಾಗಿ ಈ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಮಯೂರಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಮುಂದೆ ಓದಿ...

  ಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿಫೋಟೋಗಳು: ಬಹುಕಾಲದ ಗೆಳೆಯ ಅರುಣ್ ಜೊತೆ ಹಸೆಮಣೆ ಏರಿದ ನಟಿ ಮಯೂರಿ

  ಮಗು ನಿರೀಕ್ಷೆಯಲ್ಲಿ ಮಯೂರಿ ದಂಪತಿ

  ಮಗು ನಿರೀಕ್ಷೆಯಲ್ಲಿ ಮಯೂರಿ ದಂಪತಿ

  ಸ್ಯಾಂಡಲ್ ವುಡ್ ನಟಿ ಮಯೂರಿ ಮತ್ತು ಅರುಣ್ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿ ಮಯೂರಿ ಅವರ ಭರ್ಜರಿ ಫೋಟೋಶೂಟ್ ಸಹ ಮಾಡಲಾಗಿದ್ದು, ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  ಮಯೂರಿ ಮದುವೆಯಲ್ಲಿ ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?ಮಯೂರಿ ಮದುವೆಯಲ್ಲಿ ಜೆ ಕೆ ತಂದೆ-ತಾಯಿ ಕನ್ಯಾದಾನ ಮಾಡಿದ್ದೇಕೆ?

  ಜೂನ್‌ 12 ರಂದು ವಿವಾಹ

  ಜೂನ್‌ 12 ರಂದು ವಿವಾಹ

  ನಟಿ ಮಯೂರಿ ಮತ್ತು ಬಹುಕಾಲದ ಗೆಳೆಯ ಅರುಣ್ ಅವರು ಇದೇ ವರ್ಷ ಜೂನ್ 12 ರಂದು ವಿವಾಹವಾಗಿದ್ದರು. ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಮಾಂಗಲ್ಯಧಾರಣೆ ನೆರವೇರಿತ್ತು.

  ಹತ್ತು ವರ್ಷದ ಪ್ರೀತಿ

  ಹತ್ತು ವರ್ಷದ ಪ್ರೀತಿ

  ಮಯೂರಿ ಮತ್ತು ಅರುಣ್ ಇಬ್ಬರು ಸುಮಾರು ವರ್ಷದ ಸ್ನೇಹಿತರು. ಹತ್ತು ವರ್ಷದಿಂದ ಪರಸ್ಪರ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಕುಟುಂಬಸ್ಥರ ಒಪ್ಪಿಗೆ ಪಡೆದು ವೈವಾಹಿಕ ಜೀವನಕ್ಕೆ ಪ್ರವೇಶ ಮಾಡಿದ್ದರು. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಪುಟ್ಟ ಕಂದಮ್ಮನನ್ನು ಸ್ವಾಗತಿಸಲು ಮಯೂರಿ ಕುಟುಂಬ ಸಜ್ಜಾಗಿದೆ.

  'ಪೊಗರು' ಚಿತ್ರದಲ್ಲಿ ನಟನೆ

  'ಪೊಗರು' ಚಿತ್ರದಲ್ಲಿ ನಟನೆ

  ಧ್ರುವ ಸರ್ಜಾ ನಟನೆಯ ಪೊಗರು ಚಿತ್ರದಲ್ಲಿ ಮಯೂರಿ ಕೊನೆಯದಾಗಿ ನಟಿಸಿದ್ದಾರೆ. ಅದಾದ ಬಳಿಕ ಯಾವ ಹೊಸ ಚಿತ್ರಕ್ಕೂ ಒಪ್ಪಿಗೆ ನೀಡಿಲ್ಲ. ಕೃಷ್ಣಲೀಲಾ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ, ಇಷ್ಟಕಾಮ್ಯ, ನಟರಾಜ ಸರ್ವಿಸ್, ಕರಿಯ 2, 8ಎಂಎಂ ಬುಲೆಟ್, ರುಸ್ತುಂ, ನನ್ನ ಪ್ರಕಾರ ಅಂತಹ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

  English summary
  Kannada actress mayuri kyatari announces that she's expecting her first born on Deepavali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X