»   » ಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ ಚಾನ್ಸ್ ಪಡೆದ ಮಯೂರಿ

ಕನ್ನಡದ ಬಿಗ್ ಸ್ಟಾರ್ ಚಿತ್ರದಲ್ಲಿ ಚಾನ್ಸ್ ಪಡೆದ ಮಯೂರಿ

Posted By:
Subscribe to Filmibeat Kannada

'ಕೃಷ್ಣಲೀಲಾ' ಖ್ಯಾತಿಯ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬ್ಯುಸಿಯಾಗುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ. 'ಕರಿಯ-2' ಚಿತ್ರದ ನಂತರ 'ಗರ್ಲ್ ನಾಟ್ ಸಿನ್' ಎಂಬ ಇಂಗ್ಲೀಷ್ ಮ್ಯೂಸಿಕ್ ಆಲ್ಬಂನಲ್ಲಿ ಮಯೂರಿ ಹೆಚ್ಚೆ ಹಾಕಿದ್ದರು.

ಈ ಮಧ್ಯೆ ಕನ್ನಡದ ಬಿಗ್ ಪ್ರಾಜೆಕ್ಟ್ ಗಳಲ್ಲಿ ಮಯೂರಿ ನಟಿಸುತ್ತಿದ್ದು, ಈಗ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಖ್ಯಾತ ಸಾಹಸ ನಿರ್ದೇಶಕ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಬಹುಶಃ ಇದು ಮಯೂರಿ ಅವರ ಕನಸು ಕೂಡ ಆಗಿತ್ತು.

ಈ ಬಹುದಿನಗಳ ಆಸೆ ನೆರವೇರಿದ್ದು, ಸ್ಯಾಂಡಲ್ ವುಡ್ ಚಕ್ರವರ್ತಿಯ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಹಾಗಿದ್ರೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತೊಡಗಿಕೊಂಡಿರುವ ಮಯೂರಿ ಯಾವೆಲ್ಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ನೋಡೋಣ. ಮುಂದೆ ಓದಿ.....

ಶಿವಣ್ಣ ಸಿನಿಮಾದಲ್ಲಿ ನಟನೆ

ಶಿವರಾಜ್ ಕುಮಾರ್ ನಟಿಸಿ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಲಿರುವ ರುಸ್ತಂ ಚಿತ್ರದಲ್ಲಿ ನಟಿ ಮಯೂರಿ ನಟಿಸಲಿದ್ದಾರೆ. ಈಗಾಗಲೇ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದು, ಮುಖ್ಯ ಪಾತ್ರವೊಂದಕ್ಕೆ ಮಯೂರಿ ಕೂಡ ರುಸ್ತುಂ ಸೇರಿಕೊಂಡಿದ್ದಾರೆ.

ಶಿವಣ್ಣ ಜೊತೆಯಲ್ಲಿ ಅಭಿನಯಿಸುವುದು ಮೈಲಿಗಲ್ಲು.!

ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ನನಗೆ ಈ ಸಿನಿಮಾ ಮೈಲಿಗಲ್ಲಾಗುವುದು ಎಂದು ಸಂತಸ ಹಂಚಿಕೊಂಡಿದ್ದಾರೆ ಮಯೂರಿ.

ಜಗ್ಗೇಶ್ ಚಿತ್ರದಲ್ಲಿ ಮಯೂರಿ

ಶಿವರಾಜ್ ಕುಮಾರ್ ಸಿನಿಮಾ ಹೊರತು ಪಡಿಸಿದರೇ, ನವರಸ ನಾಯಕ ಜಗ್ಗೇಶ್ ಅಭಿನಯದ 8 ಎಂಎಂ ಚಿತ್ರದಲ್ಲಿ ಮಯೂರಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಕೂಡ ವಿಶೇಷ ಪಾತ್ರ ನಿಭಾಯಿಸುತ್ತಿದ್ದಾರೆ.

ಮಯೂರಿ 'ಆಟಕ್ಕುಂಟು ಲೆಕ್ಕಕ್ಕಿಲ್ಲ'

ಇನ್ನು ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಅಭಿನಯದ 'ಆಟಕ್ಕುಂಟು ಲೆಕ್ಕಕ್ಕಿಲ್ಲ' ಚಿತ್ರದಲ್ಲೂ ಮಯೂರಿ ನಟಿಸುತ್ತಿದ್ದಾರೆ. ಈ ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು, ಮಯೂರಿ ಅವರ ಗೆಟಪ್ ಗಳು ಗಮನ ಸೆಳೆಯುತ್ತಿದೆ.

ನನ್ನ ಪ್ರಕಾರದಲ್ಲೂ ಇದ್ದಾರೆ

ವಿನಯ್ ಎಂಬ ನವ ನಿರ್ದೇಶಕನ 'ನನ್ನ ಪ್ರಕಾರ' ಚಿತ್ರದಲ್ಲಿ ಮಯೂರಿ ನಟಿಸುತ್ತಿದ್ದಾರೆ. ಜೊತೆಗೆ ಪ್ರಿಯಾಮಣಿ, ಕಿಶೋರ್ ಹಾಗೂ ವಿಹಾನ್ ಗೌಡ ಕೂಡ ಅಭಿನಯಿಸ್ತಿದ್ದಾರೆ. ಜಿ.ವಿ.ಕೆ ಕಂಬೈನ್ಸ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗ್ತಿದ್ದು, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದೆ.

'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ಸರ್ಪ್ರೈಸ್

ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ ನಟಿ ಮಯೂರಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಇದು ಥಿಯೇಟರ್ ಗೆ ಹೋದವರಿಗೆ ಸರ್ಪ್ರೈಸ್ ಆಗಬಹುದು. ಅವರ ಪಾತ್ರವೇನು ಎಂಬುದು ಅಷ್ಟೇ ಸರ್ಪ್ರೈಸ್ ಆಗಿರಲಿ. ಚಿತ್ರಮಂದಿರಕ್ಕೆ ಹೋಗಿ ನೋಡಿ.

English summary
Ravi Varma is on a brisk casting for his debut venture Rustum, and after Shraddha Srinath, the next to come on board is Mayuri Kyatari.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X