»   » ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾದ ಕನ್ನಡತಿ ಮೇಘನಾ ರಾಜ್

ಕನ್ನಡದಲ್ಲಿ ಸಿಕ್ಕಾಪಟ್ಟೆ ಬಿಜಿಯಾದ ಕನ್ನಡತಿ ಮೇಘನಾ ರಾಜ್

Posted By:
Subscribe to Filmibeat Kannada

''ಕನ್ನಡತಿಯರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಅವಕಾಶ ಸಿಗುವುದಿಲ್ಲ. ಎಲ್ಲಾ ಪರಭಾಷಾ ನಟೀಮಣಿಯರು ವಕ್ಕರಿಸಿಕೊಳ್ಳುತ್ತಾರೆ'' ಎನ್ನುವುದು ಈಗ ಹಳೇ ಸುದ್ದಿ. ಈಗೇನಿದ್ರೂ ಕನ್ನಡಿಗರಿಗೆ ಕನ್ನಡ ಚಿತ್ರರಂಗದಲ್ಲಿಯೇ ಹೆಚ್ಚಿನ ಅವಕಾಶ.

ನಾವು ಈ ಪೀಠಿಕೆ ಹಾಕಲು ಮುಖ್ಯ ಕಾರಣ, ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಸಖತ್ ಬಿಜಿಯಾಗಿರುವ ನಟಿ. ಆಕೆ ಯಾರು ಅಂತ ನಿಮಗೆ ಗೊತ್ತಿದ್ಯಾ. ಇಲ್ಲ ಅಂದ್ರೆ ನಾವ್ ಹೇಳ್ತೀವಿ ಕೇಳಿ. 'ರಾಜ ಹುಲಿ' ಖ್ಯಾತಿಯ ಮೇಘನಾ ರಾಜ್ ಇದೀಗ ಗಾಂಧಿನಗರದಲ್ಲಿ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. [ತೆರೆಗೆ ಸಿದ್ಧವಾಗಿದೆ ವಿಜಯ ರಾಘವೇಂದ್ರ 'ವಂಶೋದ್ಧಾರಕ']

Kannada Actress Meghana Raj busy with 5 kannada films

ಸುಂದರ್ ರಾಜ್-ಪ್ರಮೀಳಾ ಜೋಷಾಯ್ ದಂಪತಿಗಳ ಮುದ್ದಿನ ಮಗಳು ಮೇಘನಾ ರಾಜ್ ಇದೀಗ ಕನ್ನಡ ಚಿತ್ರರಂಗದಲ್ಲಿ ಭರಪೂರ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಈಕೆಯೂ ಪರಭಾಷಾ ನಟಿಯಾಗಿ ಖ್ಯಾತಿ ಹೊಂದಿದ್ದು, ಇತ್ತೀಚೆಗೆ ಕನ್ನಡ ಇಂಡಸ್ಟ್ರಿಯಲ್ಲಿ ಸ್ವಲ್ಪ ಜಾಸ್ತಿನೇ ಸೌಂಡ್ ಮಾಡ್ತಾ ಇದ್ದಾರೆ. [ಎಚ್.ಎಂ.ರೇವಣ್ಣ ಪುತ್ರನ ಜೊತೆ ಮೇಘನಾ ರೋಮ್ಯಾನ್ಸ್]

ಅಚ್ಚ ಕನ್ನಡದ ಹುಡುಗಿ ಮೇಘನಾ ರಾಜ್ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಒಟ್ಟಿಗೆ ಐದು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಚಿರಂಜೀವಿ ಸರ್ಜಾಗೆ ಜೋಡಿಯಾಗಿರುವ 'ಆಟಗಾರ', ವಿಜಯ್ ರಾಘವೇಂದ್ರ ಜೊತೆ 'ವಂಶೋದ್ಧಾರಕ', 'ಅಲ್ಲಮ', 'ಭುಜಂಗ' ಹಾಗೂ 'ಲಕ್ಷ್ಮಣ' ಚಿತ್ರಗಳನ್ನ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ.

Kannada Actress Meghana Raj busy with 5 kannada films

ಈಕೆ ಕನ್ನಡದ ಹುಡುಗಿಯಾದರೂ ಮೊದಲಿಗೆ ಮಿಂಚಿದ್ದು ಮಾತ್ರ ಪಕ್ಕದ ರಾಜ್ಯವಾದ ಕೇರಳದಲ್ಲಿ. ಅಲ್ಲಿಯ ಪ್ರೇಕ್ಷಕರ ಮನ ಗೆದ್ದು, ಮೊದಲ ಬಾರಿಗೆ ಲೂಸ್ ಮಾದ ಯೋಗೇಶ್ ಅಭಿನಯದ 'ಪುಂಡ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟರು. [ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

ತದನಂತರ ಮೇಘನಾ ರಾಜ್ ಯಶ್ ಜೊತೆ 'ರಾಜಾ ಹುಲಿ' ಅಂತಹ ಹಿಟ್ ಚಿತ್ರ ನೀಡಿದರು. ಈಗ ಒಟ್ಟೊಟ್ಟಿಗೆ 5 ಚಿತ್ರಗಳಲ್ಲಿ ಬಿಜಿಯಾಗಿ ಲಕ್ಕಿ ಕ್ವೀನ್ ಅನಿಸಿಕೊಳ್ಳುತ್ತಿದ್ದಾರೆ.

English summary
Kannada actress Meghana Raj is busy in Sandalwood with 5 Kannada films such as 'Aatagara', 'Vamshodharaka', 'Allama', 'Bhujanga' and 'Lakshmana'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada