»   » ಮದುವೆ-ಗಂಡ ಬಗ್ಗೆ ನಟಿ ಮೇಘನಾ ರಾಜ್ ಏನಂದಿದ್ದರು ಗೊತ್ತೇ?

ಮದುವೆ-ಗಂಡ ಬಗ್ಗೆ ನಟಿ ಮೇಘನಾ ರಾಜ್ ಏನಂದಿದ್ದರು ಗೊತ್ತೇ?

Posted By:
Subscribe to Filmibeat Kannada

ಮೂಲತಃ ಕನ್ನಡತಿ ಆಗಿದ್ದರೂ ಮಾಲಿವುಡ್ ನಲ್ಲಿ ಹೆಚ್ಚು ಜನಪ್ರಿಯತೆ ಕಂಡುಕೊಂಡಿರುವ ಬೆಂಗಳೂರು ಬೆಡಗಿ ನಟಿ ಮೇಘನಾ ರಾಜ್ ಈಗ ವಿನಾಕಾರಣ ಸುದ್ದಿ ಆಗಿದ್ದಾರೆ.

ಹಾಗ್ನೋಡಿದರೆ, ನಟಿ ಮೇಘನಾ ರಾಜ್ ಗಾಸಿಪ್ ಪಂಡಿತರ ನಾಲಿಗೆ ಮೇಲೆ ನುಲಿದಾಡಿದ್ದು ಇದೇ ಮೊದಲಲ್ಲ.

ವರ್ಷಗಳ ಹಿಂದೆಯಷ್ಟೇ ಮಲೆಯಾಳಂ ಚಿತ್ರ ನಟ ಅನೂಪ್ ಮೆನನ್ ಜೊತೆ ನಟಿ ಮೇಘನಾ ರಾಜ್ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರ ಪ್ರೀತಿ-ಪ್ರೇಮ-ಪ್ರಣಯ ಹಸೆಮಣೆವರೆಗೂ ಬಂದಿದೆ ಅಂತ ಮಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿತ್ತು. [ನಟಿ ಮೇಘನಾ ರಾಜ್ ಬಗ್ಗೆ ಕೇಳಿಬಂದಿರುವ ವಂಚನೆ ಆರೋಪ ನಿಜವೇ?]

ಗಾಸಿಪ್ ಕಾಲಂಗಳಿಗೆ ಫುಲ್ ಸ್ಟಾಪ್ ಇಡಲು ನಟಿ ಮೇಘನಾ ರಾಜ್ ತಮ್ಮ ಮದುವೆ ಹಾಗೂ ಭಾವಿ ಪತಿ ಕುರಿತು ಮನಬಿಚ್ಚಿ ಮಾತನಾಡಿದ್ದರು. ಮುಂದೆ ಓದಿ....

ಡೇಟಿಂಗ್ ಗಾಸಿಪ್ ಗೆ ಉತ್ತರ!

''ನಾನು ಯಾರನ್ನೂ ಪ್ರೀತಿಸಿಲ್ಲ. ನಾನು ಮದುವೆ ಆಗಲು ಇನ್ನೂ ಐದು ವರ್ಷ ಬಾಕಿ ಇದೆ. ಸದ್ಯಕ್ಕೆ ಯಾರನ್ನೂ ಮೆಚ್ಚಿಲ್ಲ. ಮದುವೆ ಬಗ್ಗೆ ಯೋಚಿಸಿಲ್ಲ'' ಅಂತ ಎರಡು ವರ್ಷಗಳ ಹಿಂದೆ ನಟಿ ಮೇಘನಾ ರಾಜ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. [ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?]

ಚಿತ್ರರಂಗದವರನ್ನೇ ಮದುವೆ ಆಗ್ತಾರಂತೆ ಮೇಘನಾ!

''ನಾನು ಮದುವೆ ಆದರೆ ಚಿತ್ರರಂಗದ ಒಬ್ಬ ಯೋಗ್ಯ ನಟನನ್ನೇ ಮದುವೆ ಆಗುತ್ತೇನೆ'' ಅಂತ ಮೇಘನಾ ರಾಜ್ ಸಂದರ್ಶನವೊಂದರಲ್ಲಿ ಹೇಳಿದ್ದರು. [ಚಿರು ಸರ್ಜಾ-ಮೇಘನಾ ನಡುವೆ ಏನಿದೆ! ಏನಿಲ್ಲ?]

ಹೀರೋನೇ ಯಾಕೆ?

''ಚಿತ್ರರಂಗದಲ್ಲಿ ಇರುವ ವ್ಯಕ್ತಿಯನ್ನು ಮದುವೆಯಾದರೆ ನನ್ನ ವೃತ್ತಿಗೂ ಅನುಕೂಲ. ಇಬ್ಬರಿಗೂ ಫೀಲ್ಡ್ ಏನು ಎಂದು ತಿಳಿದಿರುತ್ತದೆ. ಚಿತ್ರರಂಗದಲ್ಲಿ ನಮ್ಮ ಏಳು ಬೀಳು ಹಾಗೂ ಸುಖ ದುಃಖ ಹಂಚಿಕೊಳ್ಳಲು ಸುಲಭವಾಗುತ್ತದೆ'' ಎಂಬುದು ಮೇಘನಾ ರಾಜ್ ಅಭಿಪ್ರಾಯ. [ಬೆಂಗಳೂರು 'ಸಂಪಿಗೆ' ಮೇಘನಾ, ಇದು ನಿಜನಾ?]

ಅನೂಪ್ ಮೆನನ್ ಜೊತೆಗಿನ ಗಾಸಿಪ್ ಬಗ್ಗೆ

''ಅನೂಪ್ ಮೆನನ್ ಹಾಗೂ ನನ್ನ ನಡುವೆ ಏನೂ ಇಲ್ಲ. ಆನ್ ಸ್ಕ್ರೀನ್ ನಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಚೆನ್ನಾಗಿದೆ ಎಂದ ಮಾತ್ರಕ್ಕೆ ನಿಜ ಜೀವನದಲ್ಲೂ ಪ್ರೇಮಿಗಳು ಎನ್ನಲು ಸಾಧ್ಯವೇ'' ಎಂದು ಪ್ರಶ್ನಿಸಿದ್ದರು ಮೇಘನಾ ರಾಜ್.

ಸ್ಯಾಂಡಲ್ ವುಡ್ ನಲ್ಲಿ ಚಿರಂಜೀವಿ ಸರ್ಜಾ ಜೊತೆ!

ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಫ್ರೆಂಡ್ ಶಿಪ್ ಎಕ್ಸ್ ಟ್ರಾ ಸ್ಪೆಷಲ್ ಎಂಬ ಗುಲ್ಲು ಗಾಂಧಿನಗರದಲ್ಲಿ ಇನ್ನೂ ಗಿರ ಗಿರ ಅಂತ ತಿರುಗುತ್ತಲೇ ಇದೆ. [ನಟ ಚಿರಂಜೀವಿ ಸರ್ಜಾಗೆ ನಿದಿರೆ ಬರದಿರೆ ಏನಂತೀ?]

ಈ ನಡುವೆ ಈಗ ವಿವಾದ!

ಗಾಸಿಪ್ ಕಾಲಂಗಳಲ್ಲಿ ಕೆಲ ದಿನಗಳಿಂದ ಮಾಯವಾಗಿದ್ದ ನಟಿ ಮೇಘನಾ ರಾಜ್ ಈಗ ಜನಾರ್ಧನ್ ಎಂಬ ವ್ಯಕ್ತಿಯಿಂದ ಸುದ್ದಿ ಮಾಡಿದ್ದಾರೆ. ಜನಾರ್ಧನ್ ನೀಡಿರುವ ದೂರು ಸತ್ಯಕ್ಕೆ ಎಷ್ಟು ಹತ್ತಿರ ಅಂತ ಪೊಲೀಸರೇ ತನಿಖೆ ನಡೆಸಿ ತೀರ್ಮಾನಿಸಬೇಕು.

English summary
Kannada Actress Meghana Raj is in news for wrong reasons. Quite some time back, Meghana Raj had expressed her dream on Marriage and and views about her future Husband.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada