For Quick Alerts
  ALLOW NOTIFICATIONS  
  For Daily Alerts

  ಪತಿಯ ಸಿನಿಮಾಗೆ ಧ್ವನಿಯಾದ ನಟಿ ಮೇಘನಾ ರಾಜ್

  |

  ನಟಿ ಮೇಘನಾ ರಾಜ್ 'ಇರುವುದೆಲ್ಲವ ಬಿಟ್ಟು' ಚಿತ್ರದ ನಂತರ ಮತ್ತೆ ತೆರೆಮೇಲೆ ಕಾಣಿಸಿಕೊಂಡಿಲ್ಲ. ನಟ ಚಿರಂಜೀವಿ ಸರ್ಜಾ ಜೊತೆ ಹಸೆಮಣೆ ಏರಿದ ಮೇಘನಾ ಈಗ ಏನು ಮಾಡುತ್ತಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇರಬಹುದು. ಆದ್ರೀಗ ಮೇಘನಾ ಈಗ ಮತ್ತೆ ಗಾಯಕಿಯಾಗಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ.

  ಹೌದು, ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಚಿತ್ರದ ಹಾಡೊಂದಕ್ಕೆ ಮೇಘನಾ ದ್ವನಿಯಾಗಿದ್ದಾರೆ. ಇದು ಚಿತ್ರದ ರೋಮ್ಯಾಂಟಿಕ್ ಹಾಡಾಗಿದ್ದು, ಮೇಘನಾ ಜೊತೆ ಗಾಯಕ ನವೀನ್ ಸಜ್ಜು ಹಾಡಿದ್ದಾರೆ. ಪತಿಯ ಡ್ಯುಯೇಟ್ ಹಾಡಿಗೆ ಮೇಘನಾ ಹಾಡುತ್ತಿರುವುದು ವಿಶೇಷವಾಗಿದೆ. ಈ ಹಿಂದೆ 'ಬಹುಪಾರಕ್' ಸೇರಿದಂತೆ ಕೆಲ ಸಿನಿಮಾದ ಹಾಡಿಗೆ ಮೇಘನಾ ಧ್ವನಿ ನೀಡಿದ್ದಾರೆ.

  ಮೊನ್ನೆ ಒಂದು, ಇವತ್ತು ಇನ್ನೊಂದು ಚಿತ್ರ ಶುರು ಮಾಡಿದ ಚಿರು ಸರ್ಜಾ

  ಚಿತ್ರದಲ್ಲಿ ಚಿರು ಸರ್ಜಾಗೆ ನಾಯಕಿಯಾಗಿ ಅಧಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈಗಾಗಲೇ 'ಸಿಂಗ' ಸಿನಿಮಾದ ಟೀಸರ್ ಮತ್ತು ಮೊದಲ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 'ಶಾನೆ ಟಾಪ್ ಆಗವ್ಳೆ..' ಹಾಡು ಮೋಡಿ ಮಾಡುತ್ತಿರುವಾಗಲೇ ಮೇಘನಾ ರಾಜ್ ಹಾಡಿರುವ ಹಾಡು ಕೂಡ ಇದೆ ತಿಂಗಳು 6 ಕ್ಕೆ ಯುಗಾದಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ.

  'ರಣಂ' ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ, ಇಬ್ಬರು ಸಾವು?

  ಅಂದ್ಹಾಗೆ 'ಸಿಂಗ' ವಿಜಯ್ ಕಿರಣ್ ನಿರ್ದೇಶನದ ಚಿತ್ರ. ನಿರ್ಮಾಪಕ ಉದಯ್ ಮೆಹ್ತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ.

  English summary
  Kannada actress Meghana Raj singing a song for her husband Chiranjeevi Sarja's 'Singa' movie. Singa movie directed by Vijay Kiran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X