For Quick Alerts
  ALLOW NOTIFICATIONS  
  For Daily Alerts

  ರೂಪಶ್ರೀ ಬಿಚ್ಚಿಟ್ಟ ಮೈತ್ರಿಯಾ ಗೌಡ 'ರಿಯಲ್' ಡ್ರಾಮಾ

  By ಹರಾ
  |

  'ಸಂಕ್ರಾಂತಿ', 'ಜಟಾಯು', 'ಚಡ್ಡಿ ದೋಸ್ತ್', 'ಸಿಗರೇಟ್' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ರೂಪಶ್ರೀ ವಿರುದ್ಧ ನಟಿ ಮೈತ್ರಿಯಾ ಗೌಡ ಹರಿಹಾಯ್ದಿದ್ದಾರೆ. ರೂಪಶ್ರೀ ವೈಯುಕ್ತಿಕ ಬದುಕಿನ ಬಗ್ಗೆ ಮೈತ್ರಿಯಾ ಗೌಡ ಕಾಮೆಂಟ್ ಮಾಡಿದ್ದಾರೆ. ಇದನ್ನೆಲ್ಲಾ ಕೇಳಿಕೊಂಡು ನಟಿ ರೂಪಶ್ರೀ ಸುಮ್ನೆ ಕೂತಿಲ್ಲ. ಮೈತ್ರಿಯಾ ಗೌಡ ಡ್ರಾಮಾ ಕಹಾನಿಯನ್ನ ಬಿಚ್ಚಿಟ್ಟಿದ್ದಾರೆ.

  ಮೈತ್ರಿಯಾ ಗೌಡ ಮಾಡಿರುವ ಆರೋಪಗಳಿಗೆ ನಟಿ ರೂಪಶ್ರೀ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಇಲ್ಲಿದೆ - ''ನಾನು ಮೈತ್ರಿಯಾ ಭೇಟಿಯಾಗಿ ಒಂದು ವರ್ಷ ಆಯ್ತು. ಅವಳನ್ನ ಒಂದು ವರ್ಷದಿಂದ ನಾನು ನೋಡೇ ಇಲ್ಲ. ಅವಳ ಜೊತೆ ಮಾತನಾಡಿಲ್ಲ. ಇಷ್ಟಾದ್ರೂ ಮೈತ್ರಿಯಾ ನನ್ನ ಬಗ್ಗೆ ಯಾಕೆ ಈ ರೀತಿ ಮಾತಾಡ್ತಿದ್ದಾಳೆ ಅನ್ನೋದೇ ಗೊತ್ತಾಗ್ತಿಲ್ಲ.'' [ನಟಿ ರೂಪಶ್ರೀಯನ್ನು ಬಾಯಿಗೆ ಬಂದಂತೆ ಬೈದ ಮೈತ್ರಿಯಾ ಗೌಡ]

  ''ಸುಮಾರು ಆರು ತಿಂಗಳ ಹಿಂದೆ ನನಗೆ ಮೈತ್ರಿಯಾ ಫೋನ್ ಮಾಡಿದ್ಲು. ಕಾರ್ತಿಕ್ ಗೌಡ ವಿರುದ್ಧ ಪೊಲೀಸ್ ಠಾಣೆಗೆ ಬಂದು ಸಾಕ್ಷಿ ಹೇಳುವಂತೆ ಕೇಳಿಕೊಂಡ್ಲು. ಕಾರ್ತಿಕ್ ಗೌಡ ನನ್ನ ಜೊತೆ ಇರೋದನ್ನ ನೀನು ಹಲವು ಬಾರಿ ನೋಡಿದ್ದೀಯಾ. ಅಷ್ಟೇ ಅಲ್ಲ ನಾನು ಕಾರ್ತಿಕ್ ನನ್ನ ನಿನಗೆ ಪರಿಚಯ ಮಾಡಿಸಿದ್ದೆ. ಇವಿಷ್ಟು ಸಂಗತಿಗಳನ್ನ ಪೊಲೀಸರಿಗೆ ಹೇಳು ಅಂತ ಕೇಳಿಕೊಂಡ್ಲು.''

  ''ಆದ್ರೆ ನಾನು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದಾಳೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾಳೆ. ಅಷ್ಟೇ ಅಲ್ಲ ಕಾರ್ತಿಕ್ ಗೌಡ ಮದ್ವೆ ಕೇಸ್ ನಲ್ಲಿ ಅವಳಿಗೆ ಸೋಲಾಗಬಹುದು. ರೇಪ್ ಆಗದಿರುವ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಹೀಗಾಗಿ ಮೈತ್ರಿಯಾ ತುಂಬಾ ಅಪ್ ಸೆಟ್ ಆಗಿದ್ದಾಳೆ. ಮತ್ತೆ ಜನರ ಅನುಕಂಪಗಿಟ್ಟಿಸಿಕೊಳ್ಳಲು ಈ ಡ್ರಾಮಾ ಮಾಡ್ತಿದ್ದಾಳೆ.'' [ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ]

  Kannada Actress Mythriya Gowda-Roopashree Cat Fight : Roopashree reaction

  ''ಮೈತ್ರಿಯಾ ಮಾಡ್ತಿರೋದೆಲ್ಲಾ ಬರೀ ಡ್ರಾಮಾ. ಅವಳ ಆರೋಪಗಳಲ್ಲಿ ಸ್ವಲ್ಪವೂ ಸತ್ಯವಿಲ್ಲ. ಇನ್ನೇನು ಕೇಸು ಮುಗಿಯುತ್ತೆ. ಕಾರ್ತಿಕ್ ಗೌಡ ಬೇರೆ ಮದ್ವೆಯಾಗಿ ಸೆಟಲ್ ಆಗ್ತಾನೆ. ನಾನು ಕೂಡ ಕೆಲವೇ ದಿನಗಳಲ್ಲಿ ಮದುವೆಯಾಗಿ ಸೆಟಲ್ ಆಗ್ತೀನಿ. ಇಬ್ಬರೂ ಲೈಫ್ ನಲ್ಲಿ ಸೆಟ್ಲ್ ಆಗ್ತಿದ್ದೀವಿ ಅನ್ನೋ ಅಸೂಯೆ ಆಕೆಗೆ. ಅದಕ್ಕೆ ಹೀಗೆಲ್ಲಾ ಮಾಡ್ತಿದ್ದಾಳೆ. ನನ್ನ ಮದುವೆಯನ್ನ ನಿಲ್ಲಿಸಿ, ನನ್ನ ಲೈಫ್ ಹಾಳು ಮಾಡುವುದಕ್ಕೋಸ್ಕರ ಆಕೆ ಮಾಡ್ತಿರೋ ನಾಟಕ ಇದು.''

  English summary
  Kannada Actress Roopashree has reacted to the media regarding Mythriya Gowda's comments on her in Facebook.
  Monday, September 21, 2015, 13:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X