»   » ರಾಜ್ಯ ಪ್ರಶಸ್ತಿ ನಟಿ ಪದ್ಮಾ ಕುಮುಟ ಹೃದಯಾಘಾತದಿಂದ ನಿಧನ

ರಾಜ್ಯ ಪ್ರಶಸ್ತಿ ನಟಿ ಪದ್ಮಾ ಕುಮುಟ ಹೃದಯಾಘಾತದಿಂದ ನಿಧನ

Posted By:
Subscribe to Filmibeat Kannada

ರಾಜ್ಯ ಪ್ರಶಸ್ತಿ ವಿಜೇತ ಪದ್ಮಾ ಕುಮುಟಾ (58) ಹೃದಯಾಘಾತದಿಂದ ನಿಧನರಾಗಿದ್ದಾರೆ. ಸೋಮವಾರ ಬೆಂಗಳೂರಿನಲ್ಲಿ ಧಾರವಾಹಿಯೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಹೃದಯಾಘಾತ ಸಂಭವಿಸಿ ನಟಿ ಪದ್ಮಾ ಕುಮುಟಾ ಕೊನೆಯುಸಿರೆಳೆದಿದ್ದಾರೆ.

ರಂಗಭೂಮಿ ಹಾಗೂ ಚಲನಚಿತ್ರ ನಟಿಯಾಗಿದ್ದ ಪದ್ಮಾ ಕುಮುಟ ಅವರು, ಇತ್ತೀಚೀನ ದಿನಗಳಲ್ಲಿ ಹೆಚ್ಚು ಧಾರವಾಹಿಗಳಲ್ಲಿ ಅಭಿನಯಿಸುತ್ತಿದ್ದರು. ಸೋಮವಾರ ಕೂಡ ಶೃತಿ ನಾಯ್ಡು ಅವರ 'ಮಹಾನದಿ' ಸೀರಿಯಲ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಇದ್ದಕ್ಕಿದ್ದ ಹಾಗೆ ಉಸಿರಾಟದ ತೊಂದರೆಯಿಂದಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.[ಚಿತ್ರೀಕರಣದ ವೇಳೆ ಹೃದಯಾಘಾತ: ಹಿರಿಯ ನಟಿ ಪದ್ಮಾ ಕುಮುಟ ನಿಧನ]

Kannada Actress Padma Kumuta No More

1975 ರಲ್ಲಿ ತೆರೆಕಂಡಿದ್ದ 'ಚೋಮನದುಡಿ' ಚಿತ್ರ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಉಳಿದಂತೆ 'ಬಯಲುದಾರಿ', 'ಅರಿವು', 'ಫಲಿತಾಂಶ', 'ಅವಸ್ಥೆ', 'ಮೌನಗೀತೆ', 'ದೇವತಾ ಮನುಷ್ಯ', 'ಶಿವ ಮೆಚ್ಚಿದ ಕಣ್ಣಪ್ಪ', 'ಕಳ್ಳ ಮಳ್ಳ', 'ಸೋಲಿಲ್ಲದ ಸರದಾರ', 'ಬೇವು ಬೆಲ್ಲ', 'ಶ್ರೀ ಮಂಜುನಾಥ', 'ಲಕ್ಕಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.

English summary
Senior actress of Kannada film industry, Padma Kumuta, died due to heart attack in Bengaluru on March 6th, 2017. She was in industry since over 30 years and was acclaimed theater artist too.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada