For Quick Alerts
  ALLOW NOTIFICATIONS  
  For Daily Alerts

  ನಟಿ ಪಾರುಲ್ ಯಾದವ್ ಗೆ ಪ್ಯಾರ್ ಗೆ ಆಗ್ಬುಟೈತಾ? ಯಾರ ಜೊತೆ?

  By Harshitha
  |

  ''ಪ್ಯಾರ್ ಗೆ ಆಗ್ಬುಟೈತೆ...ನಮ್ದು ಕೆ ಪ್ಯಾರ್ ಗೆ ಆಗ್ಬುಟೈತೆ...'' - ನಟ ಕೋಮಲ್ ಹಾಗೂ ಪಾರುಲ್ ಯಾದವ್ ಅಭಿನಯದ 'ಗೋವಿಂದಾಯ ನಮಃ' ಚಿತ್ರದ ಈ ಹಾಡನ್ನ ನೀವು ಕೇಳದೆ ಇರಲು ಸಾಧ್ಯವೇ ಇಲ್ಲ. ಯಾಕಂದ್ರೆ, 2012 ರಲ್ಲಿ ಈ ಹಾಡು ಚಾರ್ಟ್ ಬಸ್ಟರ್.!

  ಈಗ 'ಪ್ಯಾರ್ ಗೆ...' ಹಾಡನ್ನ ನಾವು ಗುನುಗಲು ಕಾರಣ ನಟಿ ಪಾರುಲ್ ಯಾದವ್. [ಒಡೆಯರ್ 'ಜೆಸ್ಸಿ'ಗೆ 'ವಿನ್ನೈತಾಂಡಿ ವರುವಾಯ' ಸ್ಫೂರ್ತಿ ಕೊಟ್ಟಿತೆ?]

  'ಗೋವಿಂದಾಯ ನಮಃ' ಬೆಡಗಿ ಪಾರುಲ್ ಯಾದವ್ ಗೆ ಪ್ಯಾರ್ ಆಗ್ಬಿಟಿದ್ಯಂತೆ. ಹಾಗಂತ ನಾವು ಹೇಳ್ತಿಲ್ಲ. ಇಡೀ ಗಾಂಧಿನಗರದ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ.

  ಹಾಗಾದ್ರೆ, ಪಾರುಲ್ ಲವ್ ಮಾಡುತ್ತಿರುವ ಹುಡುಗ ಯಾರು? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ...ಉತ್ತರ ನಿಮಗೆ ಸಿಗಲಿದೆ.

  ಪಾರುಲ್ ಯಾದವ್ ಮತ್ತು ಪವನ್ ಒಡೆಯರ್

  ಪಾರುಲ್ ಯಾದವ್ ಮತ್ತು ಪವನ್ ಒಡೆಯರ್

  'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರು ನಟಿ ಪಾರುಲ್ ಯಾದವ್. ಇದೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದವರು ಪವನ್ ಒಡೆಯರ್. ಈಗ ಅದೇ ಪವನ್ ಒಡೆಯರ್ ಜೊತೆ 'ಜೆಸ್ಸಿ' ಚಿತ್ರದಲ್ಲಿ ಪಾರುಲ್ ಆಕ್ಟ್ ಮಾಡುತ್ತಿದ್ದಾರೆ. ['ಜೆಸ್ಸಿ' ನಮ್ಮಲ್ಲಿ ಮಾತ್ರವಲ್ಲ, ತಮಿಳು-ತೆಲುಗಲ್ಲೂ ಕಮಾಲ್ ಮಾಡ್ತಾಳೆ]

  ಪವನ್ ಒಡೆಯರ್ ಹಾಗೂ ಪಾರುಲ್ ನಡುವೆ ಸಂಥಿಂಗ್ ಸಂಥಿಂಗ್?

  ಪವನ್ ಒಡೆಯರ್ ಹಾಗೂ ಪಾರುಲ್ ನಡುವೆ ಸಂಥಿಂಗ್ ಸಂಥಿಂಗ್?

  ಒಟ್ಟೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಎಂಬ ಕಾರಣಕ್ಕೋ ಏನೋ, ನಟಿ ಪಾರುಲ್ ಯಾದವ್ ಹಾಗೂ ನಿರ್ದೇಶಕ ಪವನ್ ಒಡೆಯರ್ ನಡುವೆ ಲವ್ವಿ ಡವ್ವಿ ಇದೆ ಎಂಬ ವದಂತಿ ಹಬ್ಬಿದೆ.

  ನಟಿ ಪಾರುಲ್ ಯಾದವ್ ಏನಂತಾರೆ?

  ನಟಿ ಪಾರುಲ್ ಯಾದವ್ ಏನಂತಾರೆ?

  ''ನಾವಿಬ್ಬರೂ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಗೆಳೆತನ ಇದೆ. ಇದೇ ಕಾರಣಕ್ಕೆ ಸೆಟ್ ನಲ್ಲಿ ಫ್ರೆಂಡ್ಲಿ ಆಗಿರುತ್ತೀವಿ'' ಅಂತ 'ವಿಜಯ ಕರ್ನಾಟಕ ಪತ್ರಿಕೆಗೆ ಪಾರುಲ್ ಯಾದವ್ ಹೇಳಿಕೆ ನೀಡಿದ್ದಾರೆ.

  ಸುದ್ದಿ ಹರಡಲು ಕಾರಣ?

  ಸುದ್ದಿ ಹರಡಲು ಕಾರಣ?

  ''ಎರಡೆರಡು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿರುವುದರಿಂದ ಹೀಗೆ ಸುದ್ದಿ ಹರಡಿರಬಹುದು'' ಎನ್ನುತ್ತಾರೆ ಪಾರುಲ್ ಯಾದವ್.

  ಯಶಸ್ಸಿನ ದೊಡ್ಡ ಪಾಲು ಪವನ್ ಗೆ ಸಲ್ಲಬೇಕು!

  ಯಶಸ್ಸಿನ ದೊಡ್ಡ ಪಾಲು ಪವನ್ ಗೆ ಸಲ್ಲಬೇಕು!

  ''ಧನುಷ್ ಹಾಗೆ ಪೃಥ್ವಿರಾಜ್ ಜೊತೆ ನಟಿಸಿದರೂ, ನಾನು ಮೊದಲು ಬಣ್ಣ ಹಚ್ಚಿದ್ದು ಪವನ್ ಚಿತ್ರದಲ್ಲಿ. ಹೀಗಾಗಿ ಜೀವನದಲ್ಲಿ ಏನೇ ಸಾಧನೆ ಮಾಡಿದರೂ, ನನ್ನ ಯಶಸ್ಸಿನ ದೊಡ್ಡ ಪಾಲು ಪವನ್ ಗೆ ಸಲ್ಲುತ್ತದೆ'' ಅಂತಾರೆ ಪಾರುಲ್ ಯಾದವ್.

  'ಜೆಸ್ಸಿ' ಚಿತ್ರದಲ್ಲಿ ಪಾರುಲ್

  'ಜೆಸ್ಸಿ' ಚಿತ್ರದಲ್ಲಿ ಪಾರುಲ್

  ನಿರ್ದೇಶಕ ಪವನ್ ಒಡೆಯರ್ ಸೂಚನೆಯಂತೆ 'ಜೆಸ್ಸಿ' ಚಿತ್ರಕ್ಕಾಗಿ 9 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ನಟಿ ಪಾರುಲ್ ಯಾದವ್.

  ಸದ್ಯದಲ್ಲೇ ತೆರೆಗೆ 'ಜೆಸ್ಸಿ'

  ಸದ್ಯದಲ್ಲೇ ತೆರೆಗೆ 'ಜೆಸ್ಸಿ'

  'ಜೆಸ್ಸಿ' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿ ಬಿಡುಗಡೆಗೆ ಸಿದ್ಧವಾಗಿದೆ. ರಿಲೀಸ್ ಡೇಟ್ ಇನ್ನೂ ಫೈನಲ್ ಆಗಿಲ್ಲ.

  English summary
  Is Kannada Actress Parul Yadav in Love? 'No' says 'Govindaya Namah' girl. Parul Yadav has cleared the air with regard to her love affair with Director Pawan Wadeyar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X