»   » 'ಜೆಸ್ಸಿ'ಯಲ್ಲಿ ಪಾರುಲ್ ಯಾವ ತರ ಕಾಣಿಸಿಕೊಂಡಿದ್ದಾರೆ?

'ಜೆಸ್ಸಿ'ಯಲ್ಲಿ ಪಾರುಲ್ ಯಾವ ತರ ಕಾಣಿಸಿಕೊಂಡಿದ್ದಾರೆ?

Posted By:
Subscribe to Filmibeat Kannada

'ಪ್ಯಾರ್ಗೆ ಆಗ್ಬುಟ್ಟೈತೆ' ಹುಡುಗಿ ಪಾರುಲ್ ಯಾದವ್ ಅವರಿಗೆ ಈ ವರ್ಷ ಅತ್ಯಂತ ಯಶಸ್ವಿ ವರ್ಷವಂತೆ ಯಾಕೆಂದರೆ, 'ಕಿಲ್ಲಿಂಗ್ ವೀರಪ್ಪನ್' ಸಿನಿಮಾದ ಯಶಸ್ಸಿನ ನಂತರ ಇದೀಗ ಮತ್ತೆ 'ಜೆಸ್ಸಿ' ಎಂಬ ರೋಮ್ಯಾಂಟಿಕ್ ಚಿತ್ರದ ಮೂಲಕ ಕಮಾಲ್ ಮಾಡಲಿದ್ದಾರೆ.

ಮುಂಬೈ ಮೂಲದ ನಟಿ ಪಾರುಲ್ ಯಾದವ್ ಅವರು 'ಗೋವಿಂದಾಯ ನಮಃ' ಚಿತ್ರದ ಮೂಲಕ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಮನೆಮಾತಾದರು. ತದನಂತರ ದುನಿಯಾ ವಿಜಿ ಅವರ 'ಶಿವಾಜಿನಗರ', ಸುದೀಪ್ ಅವರ ಜೊತೆ 'ಬಚ್ಚನ್', ಉಪೇಂದ್ರ ಅವರ 'ಉಪ್ಪಿ-2' ಹಾಗೂ 'ಆಟಗಾರ' ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದರು.['ಜೆಸ್ಸಿ' ಮೂಲಕ ಮತ್ತೊಂದು ಹಿಟ್ ನೀಡ್ತಾರಾ ಪವನ್ ಒಡೆಯರ್?]


ಇದೀಗ ಮತ್ತೆ ಪವನ್ ಒಡೆಯರ್ ಅವರ ಜೊತೆ ಲವ್ ಸ್ಟೋರಿ ಕಥೆಯಾಧರಿತ 'ಜೆಸ್ಸಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಈ ಬಾರಿ ಪಾರುಲ್ ಯಾದವ್ ಅವರು 'ಜೆಸ್ಸಿ' ಚಿತ್ರದಲ್ಲಿ ವಿಭಿನ್ನ ಪಾತ್ರ ವಹಿಸುತ್ತಿದ್ದಾರೆ.[ನಟಿ ಪಾರುಲ್ ಯಾದವ್ ಗೆ ಪ್ಯಾರ್ ಗೆ ಆಗ್ಬುಟೈತಾ? ಯಾರ ಜೊತೆ?]


'ಜೆಸ್ಸಿ' ಚಿತ್ರದಲ್ಲಿ ತನ್ನ ಪಾತ್ರ ಬಹಳ ವಿಭಿನ್ನವಾಗಿದೆ ಎನ್ನುವ ನಟಿ ರೋಮ್ಯಾಂಟಿಕ್ ಲವ್ ಸ್ಟೋರಿ ಬಗ್ಗೆ ಏನೇನು ಹೇಳಿದ್ದಾರೆ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ..


'ಜೆಸ್ಸಿ'ಯಲ್ಲಿ ವಿಭಿನ್ನ ಪಾತ್ರ

'ಪವನ್ ಒಡೆಯರ್ ಅವರು ನನಗೆ 'ಜೆಸ್ಸಿ'ಯಲ್ಲಿ ಪಾತ್ರ ನೀಡಿದಾಗ ಬಹಳ ಸಂತಸವಾಯಿತು. ನನಗೆ ಮೊದಲ ದೊಡ್ಡ ಹಿಟ್ ನೀಡಿದ ನಿರ್ದೇಶಕರು 'ಜೆಸ್ಸಿ'ಯಲ್ಲಿ ನೀಡಿದ ಪಾತ್ರ ಕೂಡ ನನಗೆ ಬಹಳ ಇಷ್ಟವಾಯಿತು. ಇಂತಹ ಪಾತ್ರವನ್ನು ಬೇರೆ ಯಾವ ನಿರ್ದೇಶಕರು ಚಿಂತಿಸಿಲ್ಲ' ಎಂದು ಪಾರುಲ್ ನುಡಿಯುತ್ತಾರೆ.[ಒಡೆಯರ್ 'ಜೆಸ್ಸಿ'ಗೆ 'ವಿನ್ನೈತಾಂಡಿ ವರುವಾಯ' ಸ್ಫೂರ್ತಿ ಕೊಟ್ಟಿತೆ?]


'ಜೆಸ್ಸಿ' ತ್ರಿಕೋನ ಪ್ರೇಮಕಥೆ

ಪವನ್ ಒಡೆಯರ್ ನಿರ್ದೇಶನದ 'ಜೆಸ್ಸಿ' ತ್ರಿಕೋನ ಪ್ರೇಮಕಥೆಯಾಧರಿತ ಚಿತ್ರವಾಗಿದ್ದು, ಚಿತ್ರದಲ್ಲಿ ನಟಿ ಪಾರುಲ್ ಯಾದವ್ ಅವರು ಬ್ರಾಹ್ಮಣ ಕುಟುಂಬದ ಸಂಪ್ರದಾಯಬದ್ಧ ಹುಡುಗಿ 'ನಂದಿನಿ' ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ.['ನೆಮ್ಮದಿಯಾಗಿ ಸಾಯಲು ಸಿದ್ಧ' ಎಂದ ಆ ನಟಿ ಯಾರು?]


ನಂದಿನಿ ಬಗ್ಗೆ

ಚಿತ್ರದಲ್ಲಿ ನಂದಿನಿ ಹೆಚ್ಚು ಮಾತನಾಡದ ಬ್ರಾಹ್ಮಣ ಹುಡುಗಿ. ಯಾರೂ ಅವರ ಜೊತೆ ಹರಟೆ ಹೊಡೆಯಲು ಇಚ್ಛಿಸುವುದಿಲ್ಲ. ಆದರೆ ಮದುವೆಯ ಬಗ್ಗೆ ಹಲವಾರು ಕನಸುಗಳನ್ನು ಇಟ್ಟುಕೊಂಡಿರುವ ಮುಗ್ದ ಹುಡುಗಿ.['ಜೆಸ್ಸಿ' ಪ್ರಿಯತಮೆಗೆ ರೊಮ್ಯಾಂಟಿಕ್ ಚಿತ್ರದಲ್ಲಿ, ನಟಿಸೋದು ಇಷ್ಟವಂತೆ!]


ನೈಜ ಪಾತ್ರದಲ್ಲಿ ಪಾರುಲ್

'ಜೆಸ್ಸಿ' ಚಿತ್ರದಲ್ಲಿ ಪಾರುಲ್ ಯಾದವ್ ಅವರು ನೈಜತೆಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ. ನಾಯಕಿ ನಂದಿನಿ ತನ್ನ ಪೋಷಕರನ್ನು ಹೆಚ್ಚು ಪ್ರೀತಿಸುತ್ತಾಳೆ. ಯಾವುದೇ ತರಲೆ ಅವಳಿಗೆ ಇಷ್ಟವಾಗೋದಿಲ್ಲ. ನಿಜ ಜೀವನದಲ್ಲಿ ನಾನು ಇದೇ ರೀತಿಯ ನೇಚರ್ ಇಟ್ಟುಕೊಂಡಿರುವುದರಿಂದ ನನಗೆ ಈ ಪಾತ್ರ ನಿರ್ವಹಿಸಲು ಯಾವುದೇ ತೊಂದರೆಯಾಗಲಿಲ್ಲ ಎನ್ನುತ್ತಾರೆ ಪಾರುಲ್ ಯಾದವ್.


ಈ ವರ್ಷ ಬೇರೆ ಸಿನಿಮಾ ಒಪ್ಪಿಕೊಂಡಿಲ್ಲ

ಸದ್ಯಕ್ಕೆ 'ಜೆಸ್ಸಿ' ಬಿಡುಗಡೆಗೆ ಎದುರು ನೋಡುತ್ತಿರುವ ನಟಿ ಪಾರುಲ್ ಯಾದವ್ ಅವರಿಗೆ ರೋಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಅಂದರೆ ತುಂಬಾ ಇಷ್ಟವಂತೆ ಅದಕ್ಕಾಗಿಯೇ ಈ ವರ್ಷ ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ ಅಂತಾರೆ ಪಾರುಲ್.


ಮಾರ್ಚ್ 25 ರಿಲೀಸ್

ಧನಂಜಯ್, ರಘು ದೀಕ್ಷಿತ್ ಹಾಗೂ ಪಾರುಲ್ ಯಾದವ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಜೆಸ್ಸಿ' ಸಿನಿಮಾ ಮಾರ್ಚ್ 25 ರಂದು ಭರ್ಜರಿಯಾಗಿ ತೆರೆ ಕಾಣುತ್ತಿದೆ.


English summary
Kannada Actress Parul Yadav after the success of 'Killing Veerappan' now looking forward to the release of her much anticipated Kannada Movie 'Jessie'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada