For Quick Alerts
  ALLOW NOTIFICATIONS  
  For Daily Alerts

  'ನೆಮ್ಮದಿಯಾಗಿ ಸಾಯಲು ಸಿದ್ಧ' ಎಂದ ಆ ನಟಿ ಯಾರು?

  By ಸೋನು ಗೌಡ
  |

  ನಿರ್ದೇಶಕ ಆರ್.ಜಿ.ವಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ 'ಇದೀಗ ನಾನು ನೆಮ್ಮದಿಯಾಗಿ ಸಾಯಲು ಸಿದ್ಧ' ಎಂದು ಕನ್ನಡದ ಗ್ಲಾಮರ್ ಬೊಂಬೆ ಸದ್ಯಕ್ಕೆ ಲೀಡ್ ನಲ್ಲಿರುವ ನಟಿ ಪಾರುಲ್ ಯಾದವ್ ಅವರು ಆನಂದ ಭಾಷ್ಪ ಸುರಿಸಿದ್ದಾರೆ. ಅಲ್ಲದೇ ಇದೇ ಮೊದಲನೇ ಬಾರಿಗೆ ಬಾಲಿವುಡ್ ಕ್ಷೇತ್ರಕ್ಕೆ ಎಂಟ್ರಿ ಕೂಡ ಪಡೆದುಕೊಳ್ಳುತ್ತಿದ್ದಾರೆ.

  ಇದೇನಪ್ಪಾ ಇವರು ಅದ್ಯಾವಾಗ ಸೈಕಲ್ ಗ್ಯಾಪ್ ನಲ್ಲಿ ಬಾಲಿವುಡ್ ಗೆ ಎಂಟ್ರಿ ಕೊಟ್ರು ಅಂತ ನೀವು ತಲೆ ಕೆರೆದುಕೊಳ್ಳಬೇಡಿ. ಅವರು ಹಿಂದಿ ಫಿಲ್ಮ್ ನಲ್ಲಿ ನಟಿಸ್ತಾ ಇಲ್ಲ. ಬದ್ಲಾಗಿ ಅವರು ನಟಿಸಿರುವ 'ಕಿಲ್ಲಿಂಗ್ ವೀರಪ್ಪನ್' ಹಿಂದಿ ಭಾಷೆಯಲ್ಲೂ ತೆರೆ ಕಾಣುತ್ತಿರುವುದರಿಂದ, ಅವರ ಅಭಿನಯದಿಂಧ ಬಾಲಿವುಡ್ ಕ್ಷೇತ್ರದಲ್ಲಿ ಮುಂದೆ ಅವಕಾಶ ದೊರಕಲು ಅವರಿಗೆ ಇದೊಂದು ಅಡಿಪಾಯ ಆದ್ರೂ ಆಗಬಹುದು.['ಜೆಸ್ಸಿ' ಪ್ರಿಯತಮೆಗೆ ರೊಮ್ಯಾಂಟಿಕ್ ಚಿತ್ರದಲ್ಲಿ, ನಟಿಸೋದು ಇಷ್ಟವಂತೆ!]

  ಅಂದಹಾಗೆ ನಟಿ ಪಾರುಲ್ ಯಾದವ್ ಅವರು ಇದೇ ಮೊದಲ ಬಾರಿಗೆ ಬಿಟೌನ್ ನಲ್ಲಿ ಕಾಣಿಸಿಕೊಂಡಿರುವುದರಿಂದ, ಕೊಂಚ ಎಕ್ಸೈಟ್ ಆಗುತ್ತಿದ್ದಾರಂತೆ. ಜೊತೆಗೆ ಅಷ್ಟು ದೊಡ್ಡ ಬಾಲಿವುಡ್ ಸಾಗರದಲ್ಲಿ ಕಾಣಿಸಿಕೊಳ್ಳುವುದು ಅವರಿಗೆ ಒಂಥರಾ ಹೊಸ ಅನುಭವಾಗುತ್ತಿದೆಯಂತೆ.

  ನಟಿ ಪಾರುಲ್ ಯಾದವ್ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದು, ಅದೇನೆಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ ಕ್ಲಿಕ್ ಮಾಡಿ..

  ಸಖತ್ ಎಕ್ಸೈಟ್ ಆಗಿದ್ದೇನೆ!!

  ಸಖತ್ ಎಕ್ಸೈಟ್ ಆಗಿದ್ದೇನೆ!!

  "ನನ್ನ ಸಿನಿ ಕೆರಿಯರ್ ನಲ್ಲಿ ನಾನು ರಿಯಲ್ ಕಥೆಯನ್ನಾಧರಿಸಿದ ಚಿತ್ರದಲ್ಲಿ ನಟಿಸುತ್ತಿರುವುದು ಇದೇ ಮೊದಲು. ಜೊತೆಗೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದೇನೆ.

  ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಈ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಸದ್ಯಕ್ಕೆ ಮಾಧ್ಯಮಗಳಿಗೂ ಸರಿಯಾದ ಮಾಹಿತಿ ಅಥವಾ ಅರಿವು ಇಲ್ಲ.[ಟ್ರೈಲರ್: ದೊಡ್ಡ ಯುದ್ಧ ಗೆಲ್ಲ ಬೇಕು ಅಂದ್ರೆ, ಸಣ್ಣ ಸಣ್ಣ ಯುದ್ದ ಸೋಲಬೇಕು]

  ಕಿಲ್ಲಿಂಗ್ ವೀರಪ್ಪನ್' ಒಳ್ಳೆ ಕಲೆಕ್ಷನ್ ಮಾಡಬಹುದು!

  ಕಿಲ್ಲಿಂಗ್ ವೀರಪ್ಪನ್' ಒಳ್ಳೆ ಕಲೆಕ್ಷನ್ ಮಾಡಬಹುದು!

  'ಪೊಲೀಸರ ಕೈಯಿಂದ ಎನ್ ಕೌಂಟರ್ ಆದ ಕುಖ್ಯಾತ ಕಾಡುಗಳ್ಳ, ದಂತಚೋರ ವೀರಪ್ಪನ್ ಅವರ ನಿಜ ಜೀವನಚರಿತ್ರೆಯಾಧರಿತ ಕಥೆ ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಬಹುದು. ಜೊತೆಗೆ ಬಾಲಿವುಡ್ ನಲ್ಲಿ ನನಗೆ ಅವಕಾಶ ದೊರಕಲು ಇದೊಂದು ಒಳ್ಳೆ ಅವಕಾಶ ಕೂಡ ಆಗಬಹುದು'

  ಬಾಲಿವುಡ್ ಕ್ಷೇತ್ರದಲ್ಲಿ ಮಿಂಚುವ ಮಹದಾಸೆ.

  ಬಾಲಿವುಡ್ ಕ್ಷೇತ್ರದಲ್ಲಿ ಮಿಂಚುವ ಮಹದಾಸೆ.

  ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ನಾನು ಸ್ವಲ್ಪಮಟ್ಟಿಗೆ ಗುರುತಿಸಿಕೊಳ್ಳುವ ನಟಿಯಾದರು ಕೂಡ ನನಗೆ ಬೇರೆ ಭಾಷೆಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ. ಅದರಲ್ಲೂ ಬಾಲಿವುಡ್ ಕ್ಷೇತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬುದು ನನ್ನ ಮಹದಾಸೆ. ಆದ್ದರಿಂದ ಈ ನನ್ನ ಆಸೆಗೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಾಕ್ಸಾಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದರೆ ಬಾಲಿವುಡ್ ನಲ್ಲಿ ಒಂದು ಒಳ್ಳೆ ಅವಕಾಶ ಪಡೆಯುವ ಚಾನ್ಸ್ ಸಿಗಬಹುದು ಅಂತಾರೆ ಈ ಬೆಡಗಿ.

  'ಕಿಲ್ಲಿಂಗ್ ವೀರಪ್ಪನ್' ಚಿತ್ರದ ತಾರಾಗಣ

  'ಕಿಲ್ಲಿಂಗ್ ವೀರಪ್ಪನ್' ಚಿತ್ರದ ತಾರಾಗಣ

  ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು 'ಕಿಲ್ಲಿಂಗ್ ವೀರಪ್ಪನ್' ವಿಶೇಷ ಕಾರ್ಯಪಡೆ ತಂಡದ ಬುದ್ದಿವಂತ ಸ್ಪೆಷಲ್ ಆಫೀಸರ್ ಎಸ್ ಪಿ ಸೆಂತಮಾರೈ ಕಣ್ಣನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುತ್ತುಲಕ್ಷ್ಮಿಯಾಗಿ ನಟಿ ಯಜ್ಞಾ ಶೆಟ್ಟಿ ಕಾಣಿಸಿಕೊಂಡರೆ, ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್ ಕಾಣಿಸಿಕೊಂಡಿದ್ದಾರೆ.

  ಕನ್ನಡಿಗರೆಂದರೆ ನನಗೆ ಇಷ್ಟ

  ಕನ್ನಡಿಗರೆಂದರೆ ನನಗೆ ಇಷ್ಟ

  'ನನಗೆ ಕರ್ನಾಟಕದ ಕನ್ನಡಿಗರೆಂದರೆ ತುಂಬಾ ಇಷ್ಟ ಅವರೇ ನನ್ನನ್ನು ಇಲ್ಲಿಯವರೆಗೂ ಕರೆತಂದಿದ್ದು, ಅಂತೆಯೇ ಬಾಲಿವುಡ್ ಮಂದಿಗೂ ನನ್ನ ಅಭಿನಯ ಇಷ್ಟ ಆಗಬಹುದು 'ಕಿಲ್ಲಿಂಗ್ ವೀರಪ್ಪನ್' ಚಿತ್ರ ಬಾಲಿವುಡ್ ನಲ್ಲಿ ನನಗೆ ಬ್ರೇಕ್ ನೀಡಬಹುದು.

  ನಟನೆಗೆ ಭಾಷೆ ಮುಖ್ಯ ಅಲ್ಲ!

  ನಟನೆಗೆ ಭಾಷೆ ಮುಖ್ಯ ಅಲ್ಲ!

  ನಟನೆ ಮಾಡಲು ಕೇವಲ ಭಾಷೆ ಮುಖ್ಯವಾಗುವುದಿಲ್ಲ, ಬದ್ಲಾಗಿ ನಾವು ಮಾಡುವ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿ, ಅವರ ಮನಗೆದ್ದರೆ ಸಾಕು ಅಂತ ಪಾರುಲ್ ಅನಿಸಿಕೆ ವ್ಯಕ್ತಪಡಿಸುತ್ತಾರೆ.

  ಬನ್ಸಾಲಿ ಹಾಗೂ ವಿಶಾಲ್ ಜೊತೆ ಕೆಲಸ ಮಾಡಲು ಇಷ್ಟ

  ಬನ್ಸಾಲಿ ಹಾಗೂ ವಿಶಾಲ್ ಜೊತೆ ಕೆಲಸ ಮಾಡಲು ಇಷ್ಟ

  'ನನಗೇನಾದ್ರೂ ಮುಂದಿನ ದಿನಗಳಲ್ಲಿ ಬಾಲಿವುಡ್ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ನಾನು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ವಿಶಾಲ್ ಭಾರದ್ವಾಜ್ ಅವರೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತೇನೆ ಯಾಕೆಂದರೆ ಸಖತ್ ರೊಮ್ಯಾಂಟಿಕ್ ಸಿನಿಮಾ ಮಾಡುವುದರಲ್ಲಿ ಅವರಿಬ್ಬರದೂ ಎತ್ತಿದ ಕೈ.

  ಇನ್ನು ನಾನು ಸಾಯಲು ಸಿದ್ದ

  ಇನ್ನು ನಾನು ಸಾಯಲು ಸಿದ್ದ

  ಇನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿದ್ದಕ್ಕೆ ತುಂಬಾ ಖುಷಿ ಇದೆ ಅವರು ತುಂಬಾ ಸೂಕ್ಷ್ಮ ಹಾಗೂ ಅವರಿಗೆ ಎಲ್ಲವೂ ನ್ಯಾಚುರಲ್ ಆಗಿರಬೇಕು. ಮತ್ತೆ ಅವರಿಗೆ ಈಗೋ ಅಂತೂ ಇಲ್ಲವೇ ಇಲ್ಲ ತುಂಬಾ ಡೌನ್ ಟು ಅರ್ಥ್ ನೇಚರ್ ಇದು ನಟ-ನಟಿಯರಿಗೆ ಕಂಫರ್ಟೇಬಲ್ ಫೀಲ್ ತಂದು ಕೊಡುತ್ತದೆ. 'ಇದೀಗ ನಾನು ನೆಮ್ಮದಿಯಾಗಿ ಸಾಯಲು ಸಿದ್ಧ' ಎಂದು ವರ್ಮಾ ಅವರ ಜೊತೆ ಕೆಲಸ ಮಾಡಲು ಸಿಕ್ಕ ಸಂತೋಷವನ್ನು ಈ ಥರ ವ್ಯಕ್ತಪಡಿಸಿದ್ದಾರೆ.

  'ಪಿ.ಕೆ', 'ಬಾಹುಬಲಿ' ಯಂತ ಚಿತ್ರದಲ್ಲಿ ನಟಿಸುವಾಸೆ

  'ಪಿ.ಕೆ', 'ಬಾಹುಬಲಿ' ಯಂತ ಚಿತ್ರದಲ್ಲಿ ನಟಿಸುವಾಸೆ

  ಅಮೀರ್ ಖಾನ್ ನಟಿಸಿದ 'ಪಿ.ಕೆ' ಹಾಗೂ ನಿರ್ದೇಶಕ ರಾಜ ಮೌಳಿ ಅವರ ಐತಿಹಾಸಿಕ ಕಥೆಯುಳ್ಳ 'ಬಾಹುಬಲಿ' ಯಂತ ಚಿತ್ರದಲ್ಲಿ ನಟಿಸುವ ಆಸೆ ಇದೆ. ನಾನು ಈ ಎರಡು ಸಿನಿಮಾಗಳನ್ನು ನೋಡಿ ಸಖತ್ ಎಂಜಾಯ್ ಮಾಡಿದ್ದೀನಿ.

  ಬಿಗ್ ಬಿ, ಮಾಧುರಿ ನನ್ನ ಫೇವರೆಟ್ ಸ್ಟಾರ್

  ಬಿಗ್ ಬಿ, ಮಾಧುರಿ ನನ್ನ ಫೇವರೆಟ್ ಸ್ಟಾರ್

  ಬಾಲಿವುಡ್ ನಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ನಟಿ ಕಮ್ ಡಾನ್ಸರ್ ಮಾಧುರಿ ದೀಕ್ಷಿತ್ ಅವರು ನನ್ನ ಫೇವರೆಟ್ ಸ್ಟಾರ್ಸ್ ಜೊತೆಗೆ ಇತ್ತೀಚೆಗೆ ಫರಾನ್ ಅಕ್ತರ್ ಹಾಗೂ ಕಂಗನಾ ರಾಣಾವತ್ ಅವರು ಇಷ್ಟ ಆಗ್ತಾರೆ. ಅದರಲ್ಲೂ ಕಂಗನಾ ಅವರು ನನಗೆ ಸಖತ್ ಸ್ಪೂರ್ತಿ ಕೊಡುವ ನಟಿ. ನಟಿ ಕರೀನಾ ಕಪೂರ್ ಕೂಡ ನನಗೆ ಇಷ್ಟ.

  English summary
  Leading Kannada actress Parul Yadav, who is making her Bollywood entry with Ram Gopal Varma’s multi-lingual movie “Killing Veerappan”, hopes it would give her good offers in the Hindi film world. Parul said she is happy to work with a director like Varma who is meticulous and everything is natural about him, making actors comfortable. “I would happily die after having worked with Varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X