»   » ದಂಡುಪಾಳ್ಯ ಬಳಿಕ 'ಹಂತಕಿ'ಯಾದ ಪೂಜಾ ಗಾಂಧಿ

ದಂಡುಪಾಳ್ಯ ಬಳಿಕ 'ಹಂತಕಿ'ಯಾದ ಪೂಜಾ ಗಾಂಧಿ

Posted By:
Subscribe to Filmibeat Kannada
ನಟಿ ಪೂಜಾ ಗಾಂಧಿ ಈಗ ಸಾಕಷ್ಟು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಯಶಸ್ವಿ 'ಮುಂಗಾರು ಮಳೆ' ನಂತರ ಇತ್ತೀಚಿನ ದಂಡುಪಾಳ್ಯದ ಯಶಸ್ಸಿನ ನಡುವೆ ಸಿಕ್ಕ ಸಿಕ್ಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದ ಪೂಜಾ ಗಾಂಧಿ, ಯಾವ ಚಿತ್ರವೂ ಹಿಟ್ ಆಗದೇ ಕಂಗಾಲಾಗಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. 'ದಂಡುಪಾಳ್ಯ'ದ ಯಶಸ್ಸಿನ ನಂತರ ಪೂಜಾ ಗಾಂಧಿಗೆ ಭಾರಿ ಬೇಡಿಕೆ ಬಂದಿದೆ. ಅವರು ಸಿನಿಮಾಗಳ ಆಯ್ಕೆಯಲ್ಲಿ ಮೊದಲಿಗಿಂತ ಬುದ್ಧಿವಂತರಾಗಿದ್ದಾರೆ.

'ದಂಡುಪಾಳ್ಯ'ದ ನಂತರ ಬಂದ ಆಫರ್ ಗಳಲ್ಲಿ ಪೂಜಾ ಗಾಂಧಿ ಒಪ್ಪಿಕೊಂಡಿದ್ದಕ್ಕಿಂತ ರಿಜೆಕ್ಟ್ ಮಾಡಿದ್ದೇ ಹೆಚ್ಚು. ಮೊದಲಿನಂತೆ ನಾಯಕ ಪ್ರಧಾನ ಚಿತ್ರಗಳನ್ನು ಒಪ್ಪಿಕೊಂಡು ಮರಸುತ್ತುವ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಪೂಜಾ ಗಾಂಧಿ ಈಗ ಸುತಾರಾಂ ಒಪ್ಪಿಕೊಳ್ಳುತ್ತಿಲ್ಲ. ನಾಯಕಿ ಪ್ರಧಾನ ಪಾತ್ರಗಳಿಗೆ ಮಾತ್ರ ಈಗ ಅವರು ಮನ್ನಣೆ ಕೊಡುತ್ತಿರುವುದು ಚಿತ್ರಗಳ 'ಟೈಟಲ್' ನೋಡಿದರೇ ಸ್ಪಷ್ಟವಾಗುತ್ತದೆ.

ಇತ್ತೀಚಿಗೆ ಪೂಜಾ ಗಾಂಧಿ ಸಹಿ ಮಾಡಿರುವ ಚಿತ್ರಗಳ 'ಟೈಟಲ್' ಕಡೆ ಒಮ್ಮೆ ಕಣ್ಣು ಹಾಯಿಸಿ ನೋಡಿ...ಅವು 'ಸುಭದ್ರ', 'ಅಂಜಲಿ', ಹಾಗೂ ಇದೀಗ ಹೊಸ ಚಿತ್ರ 'ಹಂತಕಿ'. ಎಲ್ಲವೂ ನಾಯಕಿ ಪ್ರಧಾನ ಚಿತ್ರಗಳ ಹೆಸರುಗಳೇ. ಇದೀಗ ಸಹಿ ಮಾಡಿರುವ 'ಹಂತಕಿ' ಚಿತ್ರದಲ್ಲಿ ಪೂಜಾ ಗಾಂಧಿ ಜೊತೆ ಡೈಲಾಗ್ ಕಿಂಗ್ ಸಾಯಿಕುಮಾ್ ಕೂಡ ನಟಿಸಲಿದ್ದಾರೆ. ಆದರೂ ಹೆಸರು ನೋಡಿ ಹೇಳುವುದಾದರೆ ಅದು ಪೂಜಾ ಗಾಂಧಿ ಚಿತ್ರವೇ!

ಬರಲಿರುವ ಈ 'ಹಂತಕಿ' ಚಿತ್ರದ ನಿರ್ದೇಶಕರು ದಾವೂದ್. ಈ ಚಿತ್ರದ ನಿರ್ಮಾಣವನ್ನೂ ಮಾಡಲಿರುವ ದಾವೂದ್ ಈ ಮೊದಲು ಒಂದೆರಡು ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಹೊಂದಿರುವವರು. ಇದೀಗ ದಾವೂದ್ ಚಿತ್ತ ಪೂಜಾ ಗಾಂಧಿ ಸುತ್ತ ಸುತ್ತುತ್ತಿದೆ. ಆದರೆ 'ಹಂತಕಿ' ಚಿತ್ರದ ಮುಹೂರ್ತ ಡಿಸೆಂಬರ್ ಅಂತ್ಯದಲ್ಲಿ ನೆರವೇರಲಿದೆ ಎನ್ನಲಾಗುತ್ತಿದೆ. ಅಂದಹಾಗೆ,  ದಂಡುಪಾಳ್ಯ-2  ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸ ರಾಜು ಪೂಜಾ ಗಾಂಧಿ ಬಿಟ್ಟು ಬೇರೆ ನಟಿಯನ್ನು ಹುಡುಕುತ್ತಿದ್ದಾರೆ. (ಒನ್ ಇಂಡಿಯಾ ಕನ್ನಡ)

English summary
Kannada Actress Pooja Gandhi to act in movie 'Hanthaki'. This movie to direct and produce by Dawood. But, it will launch after December as the news sources are reviled. After Dandupalya movie Success, Pooja Gandhi Selecting only Heroine oriented Movies like Subhadra, Anjali and Hanthaki. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada