For Quick Alerts
  ALLOW NOTIFICATIONS  
  For Daily Alerts

  ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪ್ರಿಯಾಮಣಿ

  By Suneetha
  |

  ಬೆಂಗಳೂರು ಹುಡುಗಿ 'ಚಾರುಲತಾ' ಖ್ಯಾತಿಯ ಕನ್ನಡ ನಟಿ ಪ್ರಿಯಾಮಣಿ ಅವರು ಈ ವರ್ಷದ ಕೊನೆಯಲ್ಲಿ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ನಾವು ನಿಮಗೆ ಈ ಮೊದಲೇ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ?.

  ಇದೀಗ ನಟಿ ಪ್ರಿಯಾಮಣಿ ಅವರು ನಿನ್ನೆ (ಮೇ 27) ತಮ್ಮ ದೀರ್ಘಕಾಲದ ಗೆಳೆಯ ಚೆನ್ನೈ ಮೂಲದ ಉದ್ಯಮಿ ಮುಸ್ತಫಾ ರಾಜ್ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.[ಹುಡುಗರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್: ಪ್ರಿಯಾಮಣಿಗೆ ಮದುವೆ]

  ಶುಕ್ರವಾರ (ಮೇ 27) ಕೆ.ಆರ್ ರಸ್ತೆ ಬನಶಂಕರಿಯಲ್ಲಿರುವ ಪ್ರಿಯಾಮಣಿ ಅವರ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭದ ಸಂಭ್ರಮ ಕಳೆಗಟ್ಟಿದ್ದು, ನಟಿ ಪ್ರಿಯಾಮಣಿ ತಮ್ಮ ಮುಸ್ತಫಾ ರಾಜ್ ಅವರು ತಮ್ಮ ಹೆತ್ತವರ ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥದ ಉಂಗುರ ಬದಲಾಯಿಸಿಕೊಂಡಿದ್ದಾರೆ.

  ಇದೀಗ ಕೊನೆಗೂ ನಿಶ್ಚಿತಾರ್ಥದ ಮೂಲಕ ಇವರಿಬ್ಬರ ಹಲವು ಕಾಲದ ಪ್ರೇಮ ಪ್ರಸಂಗಕ್ಕೆ ಅಧೀಕೃತ ಮುದ್ರೆ ಬಿದ್ದಂತಾಗಿದೆ. ಅಂದಹಾಗೆ ಇವರಿಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿದವರಾದ್ದರಿಂದ ಇವರಿಬ್ಬರ ಮದುವೆ ಯಾವ ಶೈಲಿಯಲ್ಲಿ ಜರುಗಬಹುದು ಎನ್ನುವುದು ಅಭಿಮಾನಿಗಳ ಕುತೂಹಲ.

  ಆದರೆ ತಾವಿಬ್ಬರು ರಿಜಿಸ್ಟರ್ ಮದುವೆ ಆಗುತ್ತಿರುವುದಾಗಿ ಹೇಳಿರುವ ನಟಿ ಪ್ರಿಯಾಮಣಿ ಅವರು ಎಲ್ಲರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಜೊತೆಗೆ ಬರೀ ಕುಟುಂಬಸ್ಥರ ಜೊತೆ ಮಾತ್ರ ಮದುವೆಯಾಗುತ್ತಿದ್ದು, ಸಿಂಪಲ್ ಸಮಾರಂಭ ಮಾಡಲು ನಿರ್ಧರಿಸಿದ್ದಾರಂತೆ. ಈ ವರ್ಷದ ಕೊನೆಯಲ್ಲಿ ಮದುವೆ ಮಾಡಿಕೊಳ್ಳುವ ಯೋಜನೆಯನ್ನು ಕೂಡ ಪ್ರೇಮಿಗಳು ಹಾಕಿಕೊಂಡಿದ್ದಾರೆ.

  'ರಾಮ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ ನಟಿ ಪ್ರಿಯಾಮಣಿ ತದನಂತರ ಹಲವಾರು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಇದೀಗ ದುನಿಯಾ ವಿಜಯ್ ಅವರ ಜೊತೆ ಕಾಣಿಸಿಕೊಂಡಿರುವ 'ದನ ಕಾಯೋನು' ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

  English summary
  National-award winning actress Priyamani got Engaged with her boyfriend Mustafa Raj yesterday (May 27th). Kannada Actress Priyamani is all set for a happy wedding with Mustafa Raj by the end this year. It's wedding bells for Priyamani, this year, 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X