»   » ಹಾರರ್ ಚಿತ್ರದಲ್ಲಿ 7 ತಿಂಗಳ ಗರ್ಭಿಣಿಯಾಗಿ ಪ್ರಿಯಾಂಕ ಉಪೇಂದ್ರ

ಹಾರರ್ ಚಿತ್ರದಲ್ಲಿ 7 ತಿಂಗಳ ಗರ್ಭಿಣಿಯಾಗಿ ಪ್ರಿಯಾಂಕ ಉಪೇಂದ್ರ

Posted By:
Subscribe to Filmibeat Kannada

ಇದೇನಿದು ಅಂತ ಗಾಬರಿಯಾದ್ರ, ಅಂದಹಾಗೆ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರು ರಿಯಲ್ ಆಗಿ ಅಲ್ಲ ರೀಲ್ ನಲ್ಲಿ 7 ತಿಂಗಳ ಗರ್ಭಿಣಿ. ಇವರ ಮುಂದಿನ ಹಾರರ್ ಚಿತ್ರ 'ಮಮ್ಮಿ-ಸೇವ್ ಮಿ' ಯಲ್ಲಿ ಇವರು ತುಂಬು ಗರ್ಭಿಣಿಯಾಗಿದ್ದಾರೆ.

'ಉಪ್ಪಿ 2' ಚಿತ್ರದ ಭರ್ಜರಿ ಯಶಸ್ಸಿನ ನಂತರ ಇದೀಗ ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ನಿರ್ಮಾಣ ಬಿಟ್ಟು ಮತ್ತೆ ತಮ್ಮ ಹಳೇ ಫಾರ್ಮ್ ಗೆ ಮರಳಿದ್ದಾರೆ. ಇದೀಗ ತಮ್ಮ ನೆಚ್ಚಿನ ನಟನಾ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

Kannada Actress Priyanka Upendra to play Pregnant Women role

ಅಂದಹಾಗೆ ಪ್ರಿಯಾಂಕ ಉಪೇಂದ್ರ ಸದ್ಯಕ್ಕೆ ಎರಡು ಪ್ರಾಜೆಕ್ಟ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಹೊಸ ನಿರ್ದೇಶಕ ಲೋಹಿತ್ ಹೆಚ್ ಆಕ್ಷನ್-ಕಟ್ ಹೇಳುತ್ತಿರುವ ಹಾರರ್ ಚಿತ್ರ 'ಮಮ್ಮಿ-ಸೇವ್ ಮಿ' ಶೂಟಿಂಗ್ ಪ್ರಾರಂಭವಾಗಲಿದೆ. [ಪ್ರಿಯಾಂಕ ಉಪೇಂದ್ರಗೆ ಬಯಸದೆ ಬಂದ ಭಾಗ್ಯ]

'ಮಮ್ಮಿ ಸೇವ್ ಮಿ' ಚಿತ್ರ ಕಳೆದ ವರ್ಷ ಪ್ರಿಯಾಂಕ ಉಪೇಂದ್ರ ಅವರ ಹುಟ್ಟುಹಬ್ಬದಂದು ಸೆಟ್ಟೇರಿತ್ತು. ಇದೀಗ ಸೆಪ್ಟೆಂಬರ್ 9 ರಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ನಿರ್ದೇಶಕ ಲೋಹಿತ್ ಹೆಚ್ ತಿಳಿಸಿದ್ದಾರೆ.

ನಿರ್ದೇಶಕ ಲೋಹಿತ್ ಹೆಚ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ವಿಭಿನ್ನ ಕಥೆಯನ್ನಾಧರಿಸಿದ 'ಮಮ್ಮಿ ಸೇವ್ ಮಿ' ಚಿತ್ರದ ಬಗ್ಗೆ ಬೆಂಗಾಲಿ ಬೆಡಗಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

Kannada Actress Priyanka Upendra to play Pregnant Women role

ಇಲ್ಲಿ 'ಮಮ್ಮಿ' ಎನ್ನುವ ಪದ ಕಂಡಾಗಲೇ ತಿಳಿಯುವುದೇನೆಂದರೆ ಇದೊಂಥರಾ ಭಾವನೆಗಳನ್ನು ಆಧರಿಸಿದ ಚಿತ್ರ, ಜೊತೆಗೆ ಹಾರರ್ ಸಿನಿಮಾವಂತೆ. ಆದರೆ ಈ ಮೊದಲು ಬಂದಂತಹ ಹಾರರ್ ಸಿನಿಮಾ ಥರ ಅಲ್ಲಾ ಬದಲಾಗಿ ಡಿಫರೆಂಟ್ ಕಥೆಯಾಧರಿಸಿದ ಚಿತ್ರ ಅಂತಾರೆ ಬೆಂಗಾಲಿ ಬೆಡಗಿ ಪ್ರಿಯಾಂಕ.

ಇನ್ನೇನು ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು 'ಮಮ್ಮಿ ಸೇವ್ ಮಿ ಚಿತ್ರದ' ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ನಿರ್ದೇಶಕ ಲೋಹಿತ್ ಅವರಿಗೆ ಇದು ಮೊದಲ ಪ್ರಯತ್ನವಾಗಿದ್ದರು ಕೂಡ ತಮ್ಮ ಕೆಲಸದ ಬಗ್ಗೆ ಬಹಳ ನಂಬಿಕೆ ಇರಿಸಿಕೊಂಡಿದ್ದಾರೆ.

ಒಟ್ನಲ್ಲಿ ವಿಭಿನ್ನ ಕಥೆಯಾದ 'ಉಪ್ಪಿ 2' ಮೆಚ್ಚಿದ ಜನ ಪ್ರಿಯಾಂಕ ಅವರ 'ಮಮ್ಮಿ ಸೇವ್ ಮಿ' ಚಿತ್ರವನ್ನು ಕೂಡ ಗಾಂಧಿನಗರದ ಮಂದಿ ಮೆಚ್ಚಬಹುದೇನೋ.

English summary
Having successfully wrapped up the production of Uppi2, Priyanka Upendra is back at what she does best, acting. She is all set to start shooting for her next Movie 'Mummy - Save Me', a horror flick directed by Newcomer Lohith H.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada