For Quick Alerts
  ALLOW NOTIFICATIONS  
  For Daily Alerts

  'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

  By ಶಶಿಕರ ಪಾತೂರು
  |
  'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು? | FILMIBEAT KANNADA

  "ನಾನು ಮೊನ್ನೆ ಚೆನ್ನೈಗೆ ಹೋಗಿದ್ದೆ. ಅಲ್ಲಿ ನೋಡಿದ್ರೆ ಯಶ್ ಅವರ ದೊಡ್ಡ ದೊಡ್ಡ ಪೋಸ್ಟರ್ಸು.! ಒಂಥರಾ ಖುಷಿಯಾಯ್ತು.. ನಮ್ಮವರ ಪೋಸ್ಟರ್ ಅಲ್ಲಿಯೂ ಓದೋದನ್ನು ನೋಡಿ" ಎಂದರು ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್.

  ಕನ್ನಡ ನಟಿ ರಚಿತಾ ರಾಮ್ 'ಕೆ.ಜಿ.ಎಫ್' ಚಿತ್ರದ ಪೋಸ್ಟರ್ ಗಳನ್ನು ಅನ್ಯರಾಜ್ಯದಲ್ಲಿ ಕಂಡಾಗ ಆದ ಖುಷಿಯನ್ನು ಮಾಧ್ಯಮದ ಮಿತ್ರರೊಂದಿಗೆ ಆತ್ಮೀಯವಾಗಿ ಹಂಚಿಕೊಂಡರು.

  ಇನ್ನೂ ಯಶ್ ರವರ ಡೆಡಿಕೇಶನ್ ಮತ್ತು ರಾಧಿಕಾ ಕುಮಾರಸ್ವಾಮಿ ಅವರ ಬಗ್ಗೆಯೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತಗಿಳಿದರು. ಎಲ್ಲದರ ಕುರಿತ ಸಂಪೂರ್ಣ ವರದಿ ಇಲ್ಲಿದೆ, ಓದಿರಿ...

  ಯಶ್ ಡೆಡಿಕೇಶನ್ ಅದ್ಭುತ!

  ಯಶ್ ಡೆಡಿಕೇಶನ್ ಅದ್ಭುತ!

  'ಕೆ.ಜಿ.ಎಫ್' ನಂತಹ ಚಿತ್ರಕ್ಕೆ ಅಷ್ಟು ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಬಹುಶಃ ಯಶ್ ನಂಥವರಿಂದ ಮಾತ್ರ ಸಾಧ್ಯ. ಯಾಕೆಂದರೆ, ಅವರು ಎರಡು ವರ್ಷಕ್ಕೂ ಹೆಚ್ಚು ಕಾಲವನ್ನು ಅದೊಂದು ಚಿತ್ರಕ್ಕಾಗಿ ಮೀಸಲಿರಿಸಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರಾಗಿ ನಮಗೆ ಇದು ಹೆಮ್ಮೆಯ ವಿಷಯ ಎಂದರು ಡಿಂಪಲ್ ಕ್ವೀನ್ ರಚಿತಾ ರಾಮ್.

  'ಕೆ.ಜಿ.ಎಫ್' ಹವಾ: ಎಲ್ಲೆಡೆ ರಾರಾಜಿಸುತ್ತಿದೆ ರಾಕಿ ಭಾಯ್ ಕಟೌಟ್ಸ್.!

  ನಮ್ಮ ನಾಯಕಿಯರಿಗೆ ಇಂಥ ಅವಕಾಶಗಳಿಲ್ಲ

  ನಮ್ಮ ನಾಯಕಿಯರಿಗೆ ಇಂಥ ಅವಕಾಶಗಳಿಲ್ಲ

  "ಹೀರೋಗಳಿಗೇನೇ ಇಂಥ ಅವಕಾಶಗಳು ಸಿಗುವುದು ಅಪರೂಪ. ಇನ್ನು ನಾಯಕಿಯರಿಗೆ ಎಲ್ಲಿ ಸಿಗಲು ಸಾಧ್ಯ?" ಎನ್ನುವುದು ರಚಿತಾರ ನಿರಾಸೆ. ಅವರ ಈ ಹತಾಶೆಯ ಮಾತು ವ್ಯಕ್ತವಾಗಿದ್ದು "ಇಂಥ ಚಿತ್ರ ಸಿಕ್ಕರೆ ನೀವು ಕೂಡ ವರ್ಷಗಟ್ಟಲೆ ಡೆಡಿಕೇಟ್ ಆಗಿ ಕೆಲಸ ಮಾಡುತ್ತೀರಾ" ಎಂಬ ಪ್ರಶ್ನೆಗೆ. ಹೌದು, ನಾಯಕಿಯರನ್ನು ನಂಬಿ ನಮ್ಮಲ್ಲಿ ಚಿತ್ರಗಳು ನಿರ್ಮಾಣವಾಗೋದು ಕಡಿಮೆ. ಆದರೆ ತೆಲುಗಿನಲ್ಲಿ 'ಬಾಹುಬಲಿ'ಯಂಥ ಚಿತ್ರದಲ್ಲಿ ಕೂಡ ಅನುಷ್ಕಾ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅವರನ್ನು ಹೊರಗಿರಿಸಿ 'ಬಾಹುಬಲಿ' ಚಿತ್ರದ ಕಲ್ಪನೆಯೇ ಸಾಧ್ಯವಿಲ್ಲ. ಮಾತ್ರವಲ್ಲ, ಅವರ 'ರುದ್ರಮ್ಮದೇವಿ', 'ಅರುಂಧತಿ'ಯಂಥ ಚಿತ್ರಗಳು ಅಲ್ಟಿಮೇಟ್. ಆಕೆ ಕೂಡ ನಮ್ಮ ಕನ್ನಡದವರೇ ಎನ್ನುವ ಖುಷಿ ಒಳಗೆಲ್ಲೋ ಇದ್ದೇ ಇದೆ.

  'ಕೆಜಿಎಫ್' ಚಿತ್ರಕ್ಕಾಗಿ ಯಶ್ ಕೊಟ್ಟಿದ್ದು ಬರೋಬ್ಬರಿ 70 ಸಂದರ್ಶನ.!

  ರಾಧಿಕಾ ಬಗ್ಗೆಯೂ ಮೆಚ್ಚುಗೆ ಮಾತು

  ರಾಧಿಕಾ ಬಗ್ಗೆಯೂ ಮೆಚ್ಚುಗೆ ಮಾತು

  ಇನ್ನು ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ಕೂಡ ನಟನೆಗೆ ಅವಕಾಶವಿರುವ ದೊಡ್ಡ ಬಜೆಟ್ಟಿನ ಚಿತ್ರಗಳಲ್ಲಿ ನಟಿಸುತ್ತಿರುವ ಬಗ್ಗೆ ರಚಿತಾ ಅವರ ಗಮನ ಸೆಳೆಯಲಾಯಿತು. ಹೌದು, ''ನಾನು ಕೂಡ ಅದರ ಪೋಸ್ಟರ್ ನೋಡಿದ್ದೇನೆ. ಅದರ ಲುಕ್ ಕಂಡಾಗಲೆಲ್ಲ ಮೈ ರೋಮಾಂಚನಗೊಳ್ಳುವಂತಿದೆ. ಅವರು ಕೂಡ ಅಷ್ಟೇ. ಪಾತ್ರಕ್ಕಾಗಿ ಎಷ್ಟು ಸಮರ್ಪಣಾಭಾವ ಹೊಂದಿದ್ದಾರೆ ಎನ್ನುವುದು ಗಮನಾರ್ಹ. ಒಟ್ಟಿನಲ್ಲಿ ನಾಯಕಿಯರು ಕೂಡ ಅಂತಾರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಲಾರ್ಜರ್ ದ್ಯಾನ್ ಲೈಫ್ ಪಾತ್ರಗಳನ್ನು ಮಾಡಬಲ್ಲರು. ಆದರೆ ಅವರನ್ನು ನಂಬಿ ದುಡ್ಡು ಹಾಕುವಂಥ ನಿರ್ಮಾಪಕರು ಕೂಡ ಬೇಕಾಗುತ್ತಾರೆ'' ಎನ್ನುವುದು ರಚಿತಾ ಅಭಿಪ್ರಾಯ.

  5 ನಿಮಿಷದಲ್ಲಿ 'ಕೆಜಿಎಫ್' ಚಿತ್ರದ 1100 ಟಿಕೆಟ್ ಸೇಲ್ ಮಾಡಿದ ಚಿತ್ರಮಂದಿರ.!

  ಚಿತ್ರಗಳಲ್ಲಿ ರಚಿತಾ ಬಿಜಿ

  ಚಿತ್ರಗಳಲ್ಲಿ ರಚಿತಾ ಬಿಜಿ

  ರಚಿತಾ ಅವರ ನಟನೆಯ ಬಿಗ್ ಬಜೆಟ್ ಚಿತ್ರಗಳು ಇನ್ನಷ್ಟೇ ತೆರೆಗೆ ಬರಲು ಸಿದ್ಧವಾಗುತ್ತಿವೆ. ಅವುಗಳಲ್ಲಿ 'ಸೀತಾರಾಮ ಕಲ್ಯಾಣ' ಮತ್ತು ಶಿವರಾಜ್ ಕುಮಾರ್ ನಟನೆಯ ಇನ್ನೂ ಹೆಸರು ಇಡದ ಚಿತ್ರ ಹಾಗೂ ಏಪ್ರಿಲ್ ಸಿನಿಮಾಗಳು ಸೇರಿವೆ. ಪ್ರತಿಯೊಂದು ಕೂಡ ವಿಭಿನ್ನ ಹಾಗೂ ಶಿವಣ್ಣನ ಜೋಡಿಯ ಚಿತ್ರವಂತೂ ಚಾಲೆಂಜಿಂಗ್ ಪಾತ್ರ ಎಂದಿದ್ದಾರೆ ರಚಿತಾ. ಒಟ್ಟಿನಲ್ಲಿ 'ಕೆ.ಜಿ.ಎಫ್' ಚಿತ್ರ ಹಲವರ ಮಹತ್ವಾಕಾಂಕ್ಷೆಗಳ ಆರಂಭಕ್ಕೆ ಮುನ್ನುಡಿಯಾಗುತ್ತಿರುವುದರಲ್ಲಿ ಸಂದೇಹವೇ ಇಲ್ಲ.

  English summary
  Kannada Actress Rachita Ram feels proud about Yash and KGF.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X