»   » ಡಿಫ್ರೆಂಟ್ ಸಿನಿಮಾ, ಡಿಫ್ರೆಂಟ್ ಕಾನ್ಸೆಪ್ಟ್ ನಲ್ಲಿ ಬರ್ತಾರೆ ರಚಿತಾ ರಾಮ್

ಡಿಫ್ರೆಂಟ್ ಸಿನಿಮಾ, ಡಿಫ್ರೆಂಟ್ ಕಾನ್ಸೆಪ್ಟ್ ನಲ್ಲಿ ಬರ್ತಾರೆ ರಚಿತಾ ರಾಮ್

Posted By:
Subscribe to Filmibeat Kannada

ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಈಗ ಸಖತ್ ಬ್ಯುಸಿ ಆಗಿದ್ದಾರೆ. ಸಾಲು ಸಾಲು ಕಮರ್ಷಿಯಲ್ ಸಿನಿಮಾಗಳಲ್ಲಿ ಅಭಿನಯಿಸಿ ಹಿಟ್ ಕೊಟ್ಟ ನಂತರ ರಚಿತಾ ಬೇರೆ ರೀತಿಯ ಚಿತ್ರಗಳಲ್ಲಿ ಅಭಿನಯಿಸಬೇಕು ಎನ್ನುವ ನಿರ್ಧಾರ ಮಾಡಿದ್ದಾರೆ.

ಅದೇ ಕಾರಣಕ್ಕೆ ಬೇರೆ ಭಾಷೆಯಿಂದ ಸಿನಿಮಾಗಳ ಆಫರ್ ಬಂದರು ಕೂಡ 'ನಾನು ಮರ ಸುತ್ತೋ ಹೀರೋಯಿನ್ ಆಗಲ್ಲ' ಅಂದಿದ್ದರು ರಚಿತಾ. 'ಪುಷ್ಪಕವಿಮಾನ' ಚಿತ್ರದಲ್ಲಿ ಅಭಿನಯಿಸಿ ನಾನು ಕಮರ್ಷಿಯಲ್ ಚಿತ್ರಗಳಿಗೆ ಮಾತ್ರವಲ್ಲದೆ ಬೇರೆ ರೀತಿಯ ಸಿನಿಮಾಗಳಲ್ಲಿಯೂ ಅಭಿನಯಿಸಬಲ್ಲೇ ಎನ್ನುವುದನ್ನು ನಿರೂಪಿಸಿದ್ದರು. 'ಪುಷ್ಪಕವಿಮಾನ' ಸಿನಿಮಾ ಆದ ಮೇಲೆ ರಚಿತಾ ಯಾವ ರೀತಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಅಂತ್ತಿದ್ದ ಅಭಿಮಾನಿಗಳ ಮುಂದೆ ಡಿಂಪಲ್ ಕ್ವೀನ್ ಹೊಸ ರೀತಿಯ ಸಿನಿಮಾಗಳ ಮೂಲಕ ಎದುರಾಗುತ್ತಿದ್ದಾರೆ. ಮುಂದೆ ಓದಿ...

ಮತ್ತೆ ಬೆಳ್ಳಿಪರದೆ ಮೇಲೆ ಕಮಾಲ್ ಮಾಡಲಿದೆಯಾ ದಚ್ಚು-ರಚ್ಚು ಜೋಡಿ?

ರಚ್ಚು ಕೈನಲ್ಲಿವೆ ಸಾಕಷ್ಟು ಸಿನಿಮಾ

ನಟಿ ರಚಿತಾ ರಾಮ್ ಕೈನಲ್ಲಿ ಸದ್ಯ ಸಾಕಷ್ಟು ಆಫರ್ ಗಳಿವೆ. ಸಿನಿಮಾಗಳ ಜೊತೆಯಲ್ಲಿ ರಚಿತಾ ರಿಯಾಲಿಟಿ ಶೋ ನಲ್ಲಿಯೂ ತೀರ್ಪುಗಾರರಾಗಿ ಭಾಗಿಯಾಗಿದ್ದಾರೆ. ಸದ್ಯ ಕನ್ನಡ ಸಿನಿಮಾರಂಗದಲ್ಲಿ ರಚಿತಾ ರಾಮ್ ರಿಗೆ ಸಖತ್ ಡಿಮ್ಯಾಂಡ್ ಇದೆ.

'ರಿಷಭ ಪ್ರಿಯ' ಟೀಂ ಜೊತೆ ಸಿನಿಮಾ

ವೃಷಭ ಪ್ರಿಯ ಕಿರುಚಿತ್ರವನ್ನು ನಿರ್ಮಾಣ ಮಾಡಿದ್ದ ರಚಿತಾ ರಾಮ್ ಅದೇ ತಂಡದ ಜೊತೆಗೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಮಫ್ತಿ ಪೊಲೀಸ್ ಅಧಿಕಾರಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಚಿತಾ ರಾಮ್. ಸ್ಟೋನ್ ಮಂಕಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ರಚಿತಾ ರಾಮ್ ಜೊತೆಯಲ್ಲಿ ಕಿರಿಕ್ ಕೀರ್ತಿ ಹಾಗೂ ಸುಧಾ ಬೆಳವಾಡಿ ಸೇರಿದಂತೆ ಇನ್ನು ಅನೇಕರು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸತೀಶ್ ಜೊತೆ ರಚಿತಾ ಅಭಿನಯ

ಮಹೇಶ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಅಯೋಗ್ಯ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಪಕ್ಕಾ ಮಂಡ್ಯ ಹುಡುಗಿ ಪಾತ್ರ ನಿರ್ವಹಿಸುತ್ತಿದ್ದು ಚಿತ್ರತಂಡ ಕೆಲವೇ ದಿನಗಳಲ್ಲಿ ಮಂಡ್ಯ-ಮೈಸೂರಿನ ಸುತ್ತ ಮುತ್ತು ಚಿತ್ರೀಕರಣ ಮಾಡಲಿದೆ.

ಮಫ್ತಿ ಪೊಲೀಸ್ ಆಗಲಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್!

ದಚ್ಚುಗೆ ರಚ್ಚು ನಾಯಕ ನಟಿ

ಚಾಲೆಂಜಿಂಗ್ ಸ್ಟಾರ್ ಜೊತೆ ತಮ್ಮ ಕೆರೆಯರ್ ಪ್ರಾರಂಭ ಮಾಡಿದ ರಚಿತಾ ರಾಮ್ ಮತ್ತೊಮ್ಮೆ ದರ್ಶನ್ ಜೊತೆ ಅಭಿನಯಿಸುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಡಿ ಬಾಸ್ ಅಭಿನಯದ 51 ನೇ ಚಿತ್ರದಲ್ಲಿ ರಚಿತಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

'ಸೀತಾ ರಾಮ ಕಲ್ಯಾಣ'ಕ್ಕೆ ನಾಯಕಿ

'ಜಾಗ್ವಾರ್' ಸಿನಿಮಾದ ನಂತರ ನಿಖಿಲ್ ಕುಮಾರ್ ನಾಯಕನಾಗಿ ಅಭಿನಯಿಸುತ್ತಿರುವ 'ಸೀತಾ ರಾಮ ಕಲ್ಯಾಣ' ಚಿತ್ರಕ್ಕೆ ರಚಿತಾ ರಾಮ್ ಹೀರೋಯಿನ್ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಅಧಿಕೃತವಾಗಿ ಇನ್ನೂ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
Kannada actress Rachita Ram has been busy in movies Currently, Rachita is acting with Satish Ninasam, Darshan and Nikhil Kumar,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada