For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ಕೈಯಲ್ಲಿದೆ 10ಕ್ಕೂ ಹೆಚ್ಚು ಹೊಸ ಚಿತ್ರಗಳು, ಯಾವುವು?

  |

  ಸ್ಯಾಂಡಲ್ ವುಡ್ ಪಾಲಿಗೆ ಸದ್ಯ ಬ್ಯುಸಿಯೆಸ್ಟ್ ನಟಿ ಅಂದ್ರೆ ಡಿಂಪಲ್ ಕ್ವಿನ್ ರಚಿತಾ ರಾಮ್. ಸ್ಟಾರ್ ನಟರ ಪಾಲಿನ ಫೇವರಿಟ್, ಯುವ ನಟರ ಪಾಲಿನ ಅದೃಷ್ಟ ಅಂತಾನೆ ಹೇಳಬಹುದು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಮಾಡುತ್ತಿರುವ ರಚಿತಾ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

  ಡಿಂಪಲ್ ಕ್ವೀನ್ ರಚಿತಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ದಿನದಂತೆ ರಚ್ಚು ನಟಿಸುತ್ತಿರುವ ಚಿತ್ರಗಳಿಂದ ಸರ್ಪ್ರೈಸ್ ಸಹ ಸಿಕ್ಕಿವೆ. ಹೊಸ ಸಿನಿಮಾ ಸಹ ಅನೌನ್ಸ್ ಆಗಿದೆ. ಹಾಗಾದ್ರೆ, ಕನ್ನಡದ ಹುಡುಗಿ ರಚ್ಚು ಯಾವೆಲ್ಲ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ಸಣ್ಣ ವಿವರ. ಮುಂದೆ ಓದಿ....

  ಚಿತ್ರರಂಗದಲ್ಲಿ 7 ವರ್ಷ ಪೂರೈಸಿದ ರಚಿತಾ: ನಡೆದು ಬಂದ ಹಾದಿ ನೆನೆದು ಡಿಂಪಲ್ ಕ್ವೀನ್ ಭಾವುಕ ಸಂದೇಶ

  ಪ್ರೇಮ್ 'ಏಕ್ ಲವ್ ಯಾ'

  ಪ್ರೇಮ್ 'ಏಕ್ ಲವ್ ಯಾ'

  ಸ್ಟಾರ್ ನಿರ್ದೇಶಕ ಪ್ರೇಮ್ ನಿರ್ದೇಶನ ಮಾಡುತ್ತಿರುವ 'ಏಕ್ ಲವ್ ಯಾ' ಚಿತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ. ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಈ ಪೈಕಿ ರಚ್ಚು ಸಹ ಒಬ್ಬರು.

  ರಮೇಶ್ ಅರವಿಂದ್ '100'

  ರಮೇಶ್ ಅರವಿಂದ್ '100'

  ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ '100' ಎಂಬ ಚಿತ್ರದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಈಗಾಗಲೇ ಸೆನ್ಸಾರ್ ಸಹ ಮುಗಿಸಿರುವ ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 15ರ ಬಳಿಕ ಸಿನಿಮಾ ತೆರೆಕಾಣಬಹುದು.

  'ಅಯೋಗ್ಯ' ನಂತರ ಮತ್ತೆ ಒಂದಾದ ಸತೀಶ್ ನೀನಾಸಂ-ರಚಿತಾ ರಾಮ್

  ತೆಲುಗಿನಲ್ಲಿ 'ಸೂಪರ್ ಮಚ್ಚಿ'

  ತೆಲುಗಿನಲ್ಲಿ 'ಸೂಪರ್ ಮಚ್ಚಿ'

  ತೆಲುಗಿನಲ್ಲೂ ಸಹ ರಚಿತಾ ರಾಮ್ ಒಂದು ಸಿನಿಮಾ ಮಾಡ್ತಿದ್ದಾರೆ. ಕಲ್ಯಾಣ್ ದೇವ್ ನಟನೆಯ 'ಸೂಪರ್ ಮಚ್ಚಿ' ಚಿತ್ರದಲ್ಲಿ ರಚ್ಚು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುಲಿ ವಾಸು ಈ ಚಿತ್ರ ನಿರ್ದೇಶಿಸಿದ್ದು, ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  'ಲಿಲ್ಲಿ' ಫಸ್ಟ್ ಲುಕ್ ರಿಲೀಸ್

  'ಲಿಲ್ಲಿ' ಫಸ್ಟ್ ಲುಕ್ ರಿಲೀಸ್

  ವಿಜಯ್ ಎಸ್ ಗೌಡ ನಿರ್ದೇಶನ ಮಾಡುತ್ತಿರುವ ಸೈನ್ಸ್ ಫಿಕ್ಷನ್ ಸಿನಿಮಾ 'ಲಿಲ್ಲಿ' ಚಿತ್ರದಲ್ಲೂ ರಚಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ರಚ್ಚು ಬರ್ತಡೇಗೆ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದೆ.

  'ವೀರಂ'ಗೆ ನಾಯಕಿ!

  'ವೀರಂ'ಗೆ ನಾಯಕಿ!

  ಪ್ರಜ್ವಲ್ ದೇವರಾಜ್ ನಟನೆಯ 'ವೀರಂ' ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಸದ್ಯ, ಟೀಸರ್ ಮಾತ್ರ ಬಿಡುಗಡೆ ಮಾಡಿರುವ ವೀರಂ ಶೂಟಿಂಗ್ ಹಂತದಲ್ಲಿದೆ.

  ಧನಂಜಯ್ ಜೊತೆ ಡಾಲಿ

  ಧನಂಜಯ್ ಜೊತೆ ಡಾಲಿ

  ಧನಂಜಯ್ ನಟಿಸುತ್ತಿರುವ 'ಡಾಲಿ' ಚಿತ್ರಕ್ಕೆ ರಚ್ಚು ನಾಯಕಿಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರವೂ ರಚಿತಾ ಕೈಯಲ್ಲಿದೆ. ಗಣಪ ಖ್ಯಾತಿಯ ಪ್ರಭು ಶ್ರೀನಿವಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  'ಏಪ್ರಿಲ್' ಚಿತ್ರವೂ ಇದೆ

  'ಏಪ್ರಿಲ್' ಚಿತ್ರವೂ ಇದೆ

  ಚಿರಂಜೀವಿ ಸರ್ಜಾ ಜೊತೆ 'ಏಪ್ರಿಲ್' ಎಂಬ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಬೇಕಿತ್ತು. ಈ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿತ್ತು. ಇದೀಗ, ಈ ಚಿತ್ರದ ಬೆಳವಣೆಗೆ ಏನಾಗಿದೆ ಎಂಬುದು ಪ್ರಶ್ನೆಯಾಗಿದೆ.

  'ಕೋಲಮಾವು ಕೋಕಿಲಾ' ರೀಮೇಕ್

  'ಕೋಲಮಾವು ಕೋಕಿಲಾ' ರೀಮೇಕ್

  ತಮಿಳಿನಲ್ಲಿ ನಯನತಾರ ಹಾಗೂ ಯೋಗಿಬಾಬು ನಟಿಸಿದ್ದ 'ಕೋಲಮಾವು ಕೋಕಿಲಾ' ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡಲಿದ್ದು, ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ ಎಂದು ಹೇಳಲಾಗಿದೆ. ಅಧಿಕೃತವಾಗಿ ಈ ಪ್ರಾಜೆಕ್ಟ್ ಘೋಷಣೆಯಾಗಿಲ್ಲ.

  ಸತೀಶ್ ಜೊತೆ 'ಮ್ಯಾಟ್ನಿ'

  ಸತೀಶ್ ಜೊತೆ 'ಮ್ಯಾಟ್ನಿ'

  'ಅಯೋಗ್ಯ'ನ ಯಶಸ್ಸಿನ ಬಳಿಕ ಸತೀಶ್ ನಿನಾಸಂ ಜೊತೆ ರಚಿತಾ ರಾಮ್ ಮತ್ತೊಂದು ಚಿತ್ರ ಮಾಡುತ್ತಿದ್ದಾರೆ. ಸತೀಶ್ ನಟಿಸುತ್ತಿರುವ ಮ್ಯಾಟ್ನಿ ಚಿತ್ರದಲ್ಲಿ ರಚ್ಚು ನಾಯಕಿಯಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ.

  ಅಡುಗೆ ಮಾಡೋಕಂತೂ ಬರಲ್ಲ ನೆಟ್ಟುಗೆ ತಿನ್ನು ಅಂತ ಬೈತಿದ್ರು ಸುದೀಪ್ | Filmibeat Kannada
  ಹಲವು ಚಿತ್ರಗಳು ಪಟ್ಟಿಯಲ್ಲಿ

  ಹಲವು ಚಿತ್ರಗಳು ಪಟ್ಟಿಯಲ್ಲಿ

  ಇವಷ್ಟೇ ಅಲ್ಲ ರವಿಚಂದ್ರನ್ ನಟಿಸುತ್ತಿರುವ 'ರವಿ ಬೋಪಣ್ಣ' ಚಿತ್ರದಲ್ಲೂ ರಚ್ಚು ಪಾತ್ರ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ರಿಷಿ ಜೊತೆ 'ಸೀರೆ' ಎಂಬ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 'ಸಂಜಯ್ ಅಲಿಯಾಸ್ ಸಂಜು' ಚಿತ್ರವೂ ರಚ್ಚು ಬಳಿ ಇದೆ ಎಂದು ಹೇಳಲಾಗುತ್ತಿದೆ.

  English summary
  Rachita ram is the most busy actress in sandalwood. she had more then 12 movies in her hand. here is the complete list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X