For Quick Alerts
  ALLOW NOTIFICATIONS  
  For Daily Alerts

  ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದ ನಟಿ ರಚಿತಾ ರಾಮ್

  |
  ದೇವೇಗೌಡ್ರು, ನಿಖಿಲ್, ರಚಿತಾ ಎಲ್ಲರೂ ಶೃಂಗೇರಿಯಲ್ಲೇ ಇದ್ದಾರೆ | Rachitha Ram | Nikhil kumarswamy

  ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ರಚಿತಾ ರಾಮ್ ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದಾರೆ. ತೆಲುಗು ಸಿನಿಮಾದಲ್ಲಿ ಬ್ಯುಸಿ ಇರುವ ರಚಿತಾ ರಾಮ್ ದಿಢೀರ್ ಶೃಂಗೇರಿಗೆ ಭೇಟಿ ನೀಡಿದ್ದಾರೆ. ಶಾರದಾಂಬೆ ಆಶೀರ್ವಾದ ಪಡೆದು ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದರು.

  ಶಾರದೆ ದರ್ಶನ ಪಡೆದು ನಂತರ ರಚಿತಾ ಹೊರನಾಡಿಗೆ ತೆರಳಲಿದ್ದಾರೆ. ಈಗಾಗಲೆ ಮಾಜಿ ಪ್ರಧಾನಿ ದೇವೇಗೌಡರು ಕುಟುಂಬದೊಂದಿಗೆ ಶೃಂಗೇರಿಯಲ್ಲಿ ವಾಸ್ತವ್ಯ ಹೂಡಿದ್ದು, ಸಹಸ್ರ ಚಂಡಿಕಾ ಯಾಗ ನಡೆಸುತ್ತಿದ್ದಾರೆ. ಇದೇ ತಿಂಗಳು 17 ರಿಂದ ಯಾಗ ನಡೆಸುತ್ತಿದ್ದು ಇಂದು ಚಂಡಿಕಾ ಯಾಗ ಪೂರ್ಣಾಹುತಿ ಕಾರ್ಯಕ್ರಮಕ್ಕೆ ಇಡೀ ಕುಟುಂಬ ಬಾಗಿಯಾಗಿದೆ.

  ಡಿಂಪಲ್ ಕ್ವೀನ್ ರಚಿತಾ ರಾಮ್ ಲಕ್ಕಿ.! ಯಾಕ್ ಗೊತ್ತಾ.?ಡಿಂಪಲ್ ಕ್ವೀನ್ ರಚಿತಾ ರಾಮ್ ಲಕ್ಕಿ.! ಯಾಕ್ ಗೊತ್ತಾ.?

  ರಚಿತಾ ರಾಮ್ ಕೂಡ ಯಾಗದಲ್ಲಿ ಪಾಲ್ಗೊಳ್ಳಲುವ ಸಲುವಾಗಿ ಶೃಂಗೇರಿಗೆ ಭೇಟಿ ನೀಡಿದ್ದಾರಾ ಎನ್ನುವ ಅನುಮಾನ ಕೂಡ ಮೂಡಿದೆ. ನಿಖಿಲ್ ಕುಮಾರ್ ಕೂಡ ಯಾಗದಲ್ಲಿ ಪಾಲ್ಗೊಳ್ಳಲು ಇಂದು ಶೃಂಗೇರಿಗೆ ಆಗಮಿಸಿದ್ದಾರೆ. ಈ ಹಿನ್ನಲೆಯಲ್ಲಿ ರಚಿತಾ ಕೂಡ ಭೇಟಿ ನೀಡಿರಬಹುದು ಎಂದು ಹೇಳಲಾಗುತ್ತಿದೆ.

  ಈಗಾಗಲೆ ಗಾಂಧಿನಗರದಲ್ಲಿ ರಚಿತಾ ಮತ್ತು ನಿಖಿಲ್ ಕುಮಾರ್ ನಡುವೆ ಸಂಥಿಂಗ್ ಈಸ್ ದೇರ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಂದಿನ ಶೃಂಗೇರಿ ಭೇಟಿ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ. ಆದರೆ ಈ ಬಗ್ಗೆ ನಿಖಿಲ್ ಆಗಲಿ ಅಥವಾ ರಚಿತಾ ಆಗಲಿ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.

  ರಚಿತಾ ಸದ್ಯ ಕನ್ನಡ ಸಿನಿಮಾಗಳ ಜೊತೆಗೆ ಮೊದಲ ಬಾರಿಗೆ ತೆಲುಗು ಸಿನಿಮಾ ಮಾಡುತ್ತಿದ್ದಾರೆ. ಸೂಪರ್ ಮಚ್ಚಿ ಸಿನಿಮಾ ಮೂಲಕ ರಚಿತಾ ಟಾಲಿವುಡ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಕನ್ನಡದಲ್ಲೂ ರಚಿತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Kannada Actress Rachita Ram Visited to Sringeri Temple. after Visit to Sringeri Temple she will also visit to Horanadu temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X