»   » ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

ಮದುವೆ ಬಳಿಕ ಮೊದಲ ಹುಟ್ಟುಹಬ್ಬ ಆಚರಿಸಿಕೊಂಡ ರಾಧಿಕಾ ಪಂಡಿತ್!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರಿಗೆ ಇಂದು (ಮಾರ್ಚ್ 7) ಹುಟ್ಟುಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ರಾಧಿಕಾ, ಪ್ರತಿ ವರ್ಷದಂತೆ ತಮ್ಮ ಬರ್ತ್ ಡೇ ಯನ್ನ ಅಭಿಮಾನಿಗಳ ಜೊತೆ ಆಚರಿಸಿಕೊಂಡರು.[ಪತ್ನಿ ಜೊತೆ ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ಹುಟ್ಟುಹಬ್ಬದ ಸಂಭ್ರಮ]

ವಿಶೇಷ ಅಂದ್ರೆ, ರಾಕಿಂಗ್ ಸ್ಟಾರ್ ಯಶ್ ಅವರನ್ನ ಮದುವೆಯಾದ ಮೇಲೆ ರಾಧಿಕಾ ಪಂಡಿತ್ ಸೆಲೆಬ್ರೇಟ್ ಮಾಡಿಕೊಳ್ತಿರುವ ಮೊದಲ ಹುಟ್ಟುಹಬ್ಬವಿದು. ಹೀಗಾಗಿ, ಮೊಗ್ಗಿನ ಮನಸ್ಸಿಗೆ ತುಂಬಾ ಸ್ಪೆಷಲ್ ಅಂತಾನೇ ಹೇಳ್ಬಹುದು. ಹಾಗಾದ್ರೆ, ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಅಂತ ಮುಂದೆ ನೋಡಿ....

ಗಂಡನ ಮನೆಯಲ್ಲಿ ರಾಧಿಕಾ ಬರ್ತ್ ಡೇ

ಮದುವೆಯ ಬಳಿಕ ಮೊದಲ ಹುಟ್ಟುಹಬ್ಬವನ್ನ ಆಚರಿಸಿಕೊಂಡ ಸ್ಯಾಂಡಲ್ ವುಡ್ ಸಿಂಡ್ರೆಲಾ, ತಮ್ಮ ಗಂಡನ ಮನೆಯಲ್ಲಿ ಮೊದಲ ಬಾರಿಗೆ ಜನಮದಿನ ಸಂಭ್ರಮಿಸಿದರು. ಪ್ರತಿ ವರ್ಷದಂತೆ ತಮ್ಮ ಅಭಿಮಾನಿಗಳು ತಂದ್ದಿದ್ದ ಕೇಕ್ ಕತ್ತರಿಸಿ ಎಂಜಾಯ್ ಮಾಡಿದ್ರು.[ಪ್ರೀತಿಯ ಪತಿ ಯಶ್ ಹುಟ್ಟುಹಬ್ಬಕ್ಕೆ ಮುದ್ದು ಮಡದಿ ರಾಧಿಕಾ ವಿಶಸ್]

ಮೂರು ಕಡೆ ಬರ್ತ್ ಡೇ ಆಚರಣೆ

ಇಷ್ಟು ದಿನ ಅಭಿಮಾನಿಗಳ ಜೊತೆ, ಅಪ್ಪ-ಅಮ್ಮನ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದ ರಾಧಿಕಾ ಪಂಡಿತ್, ಈ ಬಾರಿ ಮೂರು ಕಡೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರಂತೆ. ಹೌದು, ಅಪ್ಪ-ಅಮ್ಮನ ಮನೆ, ಅಭಿಮಾನಿಗಳ ಜೊತೆ ಮತ್ತು ಅತ್ತೆ-ಮಾವನ ಮನೆಯಲ್ಲಿ ಖುಷಿಯಿಂದ ಆಚರಿಸಿಕೊಂಡಿದ್ದಾರೆ.['ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ]

ಅಭಿಮಾನಿಗಳಿಗೆ ಗಿಡ ಕೊಟ್ಟ ರಾಕಿಂಗ್ ದಂಪತಿ!

ಇನ್ನೂ ರಾಧಿಕಾ ಪಂಡಿತ್ ಅವರಿಗೆ ವಿಶ್ ಮಾಡಲು ಬಂದ್ದಿದ್ದ ಅಭಿಮಾನಿಗಳಿಗೆ, ರಾಕಿಂಗ್ ದಂಪತಿ ಕನಕಾಂಬರ ಹೂವಿನ ಗಿಡ ಕೊಟ್ಟು ಸಂತಸ ಪಟ್ಟಿದ್ದಾರೆ.

ಬರ್ತ್ ಡೇ ಅಂದ್ರೆ ತುಂಬಾ ಇಷ್ಟ!

ಅಂದ್ಹಾಗೆ, ರಾಧಿಕಾ ಪಂಡಿತ್ ಅವರಿಗೆ ಬರ್ತ್ ಡೇ ಆಚರಣೆ ಅಂದ್ರೆ ತುಂಬಾ ಇಷ್ಟ. ಯಾಕಂದ್ರೆ ಕೇಕ್ ಕಟ್ ಮಾಡೋದು, ಬಲೂನ್ಸ್, ಹ್ಯಾಪಿ ಬರ್ತ್ ಡೇ ಅಂತಾ ಹಾಡು ಹೇಳೊದು ಅಂದ್ರೆ ಮೊದಲಿಂದಲೂ ತುಂಬಾ ಇಷ್ಟವಂತೆ.

ಬೆಳ್ಳಿತೆರೆಗೆ ಕಮ್ ಬ್ಯಾಕ್!

ಇನ್ನೂ ಮದುವೆಯ ಬಳಿಕ, ಸೈಲೆಂಟ್ ಆಗಿರುವ ರಾಧಿಕಾ ಪಂಡಿತ್ ಅವರು, ಸದ್ಯದಲ್ಲೇ ಸಿನಿಮಾ ಮಾಡಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸದ್ಯ, ಹೊಸ ಚಿತ್ರದ ಮಾತುಕತೆಯಲ್ಲಿದ್ದು, ಆದಷ್ಟೂ ಬೇಗ ಸಿನಿಮಾ ಅನೌನ್ಸ್ ಮಾಡಲಿದ್ದಾರಂತೆ.

English summary
Kannada Actress Radhika Pandit celebrates her 33rd birthday on March 7th. Born to an ultimate traditional Pandit's family, Radhika Pandit completed her schooling from Cluny Convent High School and later pursued a Bachelor of Commerce, at the Mount Carmel College, Bangalore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada