For Quick Alerts
  ALLOW NOTIFICATIONS  
  For Daily Alerts

  ಸ್ವೀಟಿ ನನ್ನ ಜೋಡಿ ಎನ್ನಲಿರುವ ಲವ್ಲಿ ಲವ್ಲಿ ರಾಧಿಕಾ

  |

  ನಟಿ ರಾಧಿಕಾ ಮತ್ತೆ ಬಣ್ಣಹಚ್ಚಲಿರುವ ಚಿತ್ರದ ಹೆಸರು ಬಹಿರಂಗವಾಗಿದೆ. ಅಷ್ಟೇ ಅಲ್ಲ, ಚಿತ್ರದ 'ಫೋಟೋ ಶೂಟ್' ಕೂಡ ಮುಗಿದಿದೆ. ನಿರ್ದೇಶಕಿ ವಿಜಯಲಕ್ಷ್ಮೀ ಸಿಂಗ್ ಇತ್ತೀಚಿಗಷ್ಟೇ ಚಿತ್ರ ಮಾಡುವುದಾಗಿ ಹೇಳಿದ್ದರು. ಚಿತ್ರಕ್ಕೆ 'ಸ್ವೀಟಿ' ಎಂದು ನಾಮಕರಣ ಮಾಡಲಾಗಿದ್ದು 'ನನ್ನ ಜೋಡಿ' ಎಂಬ ಟ್ಯಾಗ್ ಲೈನ್ ಚಿತ್ರಕ್ಕಿದೆ. ಚಿತ್ರವನ್ನು ತುಂಬಾ ಅದ್ದೂರಿಯಾಗಿ ಮಾಡಲು ರಾಧಿಕಾ ನಿರ್ಧರಿಸಿದ್ದಾರೆ. ಈ ಮೊದಲು ಕೇವಲ ವದಂತಿಗಳ ಹಂತದಲ್ಲಿದ್ದ ಈ ಚಿತ್ರವೀಗ ಮುಹೂರ್ತಕ್ಕೆ ಸಜ್ಜಾಗುತ್ತಿದೆ.

  ರಾಧಿಕಾ ನಟನೆಯ 'ಸ್ವೀಟಿ' ಚಿತ್ರವು ಇದೇ ತಿಂಗಳು 17ಕ್ಕೆ (17 ಅಕ್ಟೋಬರ್ 2012) ರಂದು ಮುಹೂರ್ತ ಆಚರಿಸಿಕೊಳ್ಳಲಿದೆ. ಈ ಚಿತ್ರದ 'ಟೈಟಲ್' ಬದಲಾಗುವ ಸಾಧ್ಯತೆಯಿದ್ದು ಮುಹೂರ್ತಕ್ಕೆ ಮುನ್ನ ನಿರ್ಧಾರವಾಗಲಿದೆಯಂತೆ. ಈ ಮೊದಲೇ ಹೇಳಿದಂತೆ ಚಿತ್ರಕ್ಕೆ ನಾಯಕರು ಆದಿತ್ಯ. ಇದು ಸಂಪೂರ್ಣವಾಗಿ 'ಔಟ್ ಅಂಡ್ ಔಟ್' ಕಮರ್ಷಿಯಲ್ ಸಿನಿಮಾ ಅಂದಿದ್ದಾರೆ ನಟಿ ಹಾಗೂ ನಿರ್ಮಾಪಕಿ ರಾಧಿಕಾ. ಅಂದಹಾಗೆ ಚಿತ್ರದ ಹೆಸರು ಭರ್ಜರಿ ಬೇಟೆ ಚಿತ್ರದ 'ಸ್ವೀಟಿ ನನ್ನ ಜೋಡಿ... ಹಾಡಿನ ತುಣುಕು.

  ಯಾವುದೇ ವಿಷಯದಲ್ಲಿ ರಾಜಿಯಾಗದೇ ಬಹು ಅದ್ದೂರಿಯಾಗಿ ಸಿನಿಮಾವನ್ನು ತೆರೆಗೆ ತರಲು ನಿರ್ಧರಿಸಿರುವ ರಾಧಿಕಾ, ಶೂಟಿಂಗ್ ಗಾಗಿ ಬಹಳಷ್ಟು ಸುಂದರ ತಾಣಗಳಿಗೆ ಹೋಗಲಿದ್ದಾರಂತೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಲಿದ್ದು ಹಾಡುಗಳು ಸಖತ್ತಾಗಿ ಇರಲಿವೆ ಎಂದಿದ್ದಾರೆ ರಾಧಿಕಾ. ಚಿತ್ರವು ನಾಯಕಿ ಪ್ರಧಾನವಾಗಿದ್ದರೂ ನಾಯಕ ಆದಿತ್ಯರದೂ ಕೂಡ ಪ್ರಮುಖ ಪಾತ್ರವಂತೆ. ಮತ್ತೆ ಬಣ್ಣಹಚ್ಚಲಿರುವ ರಾಧಿಕಾಗೆ ಈ ಚಿತ್ರ 'ಗ್ರಾಂಡ್ ಸೆಕೆಂಟ್ ಇನ್ನಿಂಗ್ಸ್' ನೀಡುವಂತೆ ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

  ಆಶ್ಚರ್ಯವೆಂಬಂತೆ, ರಾಧಿಕಾರ ಮೊದಲ ಇನ್ನಿಂಗ್ಸ್ ನ ಕೊನೆಯ ಚಿತ್ರವಾದ 'ಈಶ್ವರ್' ನಾಯಕರಾಗಿ ನಟಿಸಿದ್ದೂ ಕೂಡ ಇದೇ ಆದಿತ್ಯ. ಇದೀಗ ಎರಡನೇ ಇನ್ನಿಂಗ್ಸ್ ನಲ್ಲಿ ಕೂಡ ರಾಧಿಕಾರ ಮೊದಲ ಚಿತ್ರಕ್ಕೆ ಆದಿತ್ಯರೇ ಹೀರೋ. ಅದೇನೇ ಇರಲಿ, ನಾಯಕಿ ಹಾಗೂ ತಂಗಿಯಾಗಿ ನಟಿಸಿ ಬಹಳಷ್ಟು ಕನ್ನಡ ಸಿನಿಪ್ರೇಕ್ಷಕರ ಪ್ರಶಂಸೆ ಪಡೆದಿರುವ ರಾಧಿಕಾಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅವರೆಲ್ಲರಿಗೂ, ಬಂದಿರುವ ಈ ಸುದ್ದಿ 'ಮೈಸೂರ್ ಪಾಕ್'.

  ಮೊದಲ ಚಿತ್ರವಾಗಿ ರಾಧಿಕಾ 'ನೀಲ ಮೇಘ ಶ್ಯಾಮ' ಚಿತ್ರದಲ್ಲಿ ಸೃಜನ್ ಲೋಕೇಶ್ ಜೊತೆ ಬಣ್ಣಹಚ್ಚಿದ್ದರೂ ಮೊದಲಿಗೆ ಬಿಡುಗಡೆಯಾದ ರಾಧಿಕಾರ ಚಿತ್ರ ವಿಜಯರಾಘವೇಂದ್ರ ಜೊತೆ ನಟಿಸಿದ 'ನಿನಗಾಗಿ'. ನಂತರ ಬಹಳಷ್ಟು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದ ರಾಧಿಕಾ, ಮದುವೆ ನಂತರ ನಟನೆಯಿಂದ ದೂರ ಸರಿದಿದ್ದರು. ಇತ್ತೀಚಿಗೆ ಯಶ್-ರಮ್ಯಾ ಜೋಡಿಯ 'ಲಕ್ಕಿ' ಚಿತ್ರದ ಮೂಲಕ ನಿರ್ಮಾಪಕಿಯಾಗಿ ಪ್ರವೇಶಿಸಿದ್ದ ಅವರು ಸದ್ಯದಲ್ಲೇ ಮತ್ತೆ ಸ್ವೀಟಿ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Kannada Actress Radhika's| upcoming movie name is titled as 'Sweety'. Director Vijayalakshmi Singh to directs this movie and Hero is Aditya. This movie to launch on this month 17th (17th October 2012) and starts shooting the next day itself. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X