For Quick Alerts
  ALLOW NOTIFICATIONS  
  For Daily Alerts

  ರಾಗಿಣಿ ಹುಟ್ಟುಹಬ್ಬಕ್ಕೆ ಸಹೋದರ ರುದ್ರಾಕ್ಷ್ ಕೊಟ್ಟ ಗಿಫ್ಟ್ ಏನ್ಗೊತ್ತಾ.?

  By Harshitha
  |

  ಗಾಂಧಿನಗರದಲ್ಲಿ 'ತುಪ್ಪ ಬೇಕಾ ತುಪ್ಪ..' ಅಂತ ಬೊಂಬಾಟ್ ಆಗಿ ಸೊಂಟ ಬಳುಕಿಸಿದ್ದ ನಟಿ ರಾಗಿಣಿ ದ್ವಿವೇದಿ ಇದೀಗ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ಕೆಲವೇ ಕೆಲವು ಗಂಟೆಗಳು ದಾಟಿದರೆ, 28ನೇ ವಸಂತಕ್ಕೆ ನಟಿ ರಾಗಿಣಿ ಕಾಲಿಡುತ್ತಾರೆ.

  ಹೌದು, ಮೇ 24 ರಂದು ನಟಿ ರಾಗಿಣಿ ಜನ್ಮದಿನ. ಈ ಬಾರಿಯ ಬರ್ತಡೇ ನ ತಮ್ಮ ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆಗೆ ಸೆಲೆಬ್ರೇಟ್ ಮಾಡಲು ರಾಗಿಣಿ ಪ್ಲಾನ್ ಮಾಡಿದ್ದಾರೆ.

  ಹುಟ್ಟುಹಬ್ಬಕ್ಕೆ ಇನ್ನೂ ಟೈಮ್ ಇರುವಾಗಲೇ, ರಾಗಿಣಿ ದ್ವಿವೇದಿಗೆ ಅದಾಗಲೇ ಉಡುಗೊರೆಗಳು ಲಭಿಸಲಾರಂಭಿಸಿವೆ. ರಾಗಿಣಿ ದ್ವಿವೇದಿ ಹುಟ್ಟುಹಬ್ಬಕ್ಕೆ ಈ ಬಾರಿ ಮೊದಲ ಉಡುಗೊರೆ ಕೊಟ್ಟಿರುವುದು ಯಾರು ಗೊತ್ತಾ.? ಬೇರಾರೂ ಅಲ್ಲ, ರಾಗಿಣಿ ದ್ವಿವೇದಿ ಸಹೋದರ ರುದ್ರಾಕ್ಷ್ ದ್ವಿವೇದಿ.

  ಜನ್ಮದಿನಕ್ಕೂ ಎರಡು ದಿನಗಳ ಮೊದಲೇ ಸಹೋದರಿ ರಾಗಿಣಿಗೆ ಮುದ್ದಾದ ಗೊಂಬೆಯೊಂದನ್ನ ಗಿಫ್ಟ್ ಆಗಿ ಕೊಟ್ಟಿದ್ದಾರೆ ರುದ್ರಾಕ್ಷ್ ದ್ವಿವೇದಿ.

  ಇಷ್ಟು ಸಾಲದು ಅಂತ ರಾಗಿಣಿಗೆ ಶಾರ್ಕ್ ಸೂಟ್ ಒಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದಾರೆ ರುದ್ರಾಕ್ಷ್ ದ್ವಿವೇದಿ.

  ಸಹೋದರಿಗೆ ಏನೇನು ಇಷ್ಟವೋ, ಅದೆಲ್ಲವನ್ನೂ ಉಡುಗೊರೆ ರೂಪದಲ್ಲಿ ರುದ್ರಾಕ್ಷ್ ನೀಡಿದ್ದಾರೆ. ಸರ್ಪ್ರೈಸ್ ಗಿಫ್ಟ್ ಗಳನ್ನು ಕಂಡು ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ ನಟಿ ರಾಗಿಣಿ.

  'ವೀರ ಮದಕರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಗಿಣಿ, 'ಕೆಂಪೇಗೌಡ', 'ಆರಕ್ಷಕ', 'ಕಳ್ಳ ಮಳ್ಳ ಸುಳ್ಳ', 'ವಿಕ್ಟರಿ', 'ಶಿವಂ', 'ಪರಪಂಚ', 'ಕಿಚ್ಚು' ಮುಂತಾದ ಚಿತ್ರಗಳಲ್ಲಿ ರಾಗಿಣಿ ದ್ವಿವೇದಿ ಅಭಿನಯಿಸಿದ್ದಾರೆ.

  English summary
  Kannada Actress Ragini Dwivedi gets Shark suit as a gift from Rudraksh Dwivedi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X