»   » ಚಂದನವನದ ಟಾಪ್ ವಿಲನ್ ಗಳ ಜೊತೆ ರಾಗಿಣಿ ಸಖತ್ ಸ್ಟೆಪ್

ಚಂದನವನದ ಟಾಪ್ ವಿಲನ್ ಗಳ ಜೊತೆ ರಾಗಿಣಿ ಸಖತ್ ಸ್ಟೆಪ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ತುಪ್ಪದ ಬೆಡಗಿ ರಾಗಿಣಿ ಅವರು 'ರಣಚಂಡಿಯಾಗಿ' ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹಳೇ ಸುದ್ದಿ. ಇದೀಗ ರಾಗಿಣಿ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ 'ರಣಚಂಡಿ' ಚಿತ್ರದಿಂದ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ.

ನಾಯಕಿ ಪ್ರಧಾನ ಚಿತ್ರವಾದ 'ರಣಚಂಡಿ' ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಅವರು ಚಿತ್ರದ ಒಂದು ವಿಶೇಷವಾದ ಹಾಡಿನಲ್ಲಿ ಸ್ಯಾಂಡಲ್ ವುಡ್ ಟಾಪ್ ವಿಲನ್ ಗಳ ಜೊತೆಯಲ್ಲಿ ಸಖತ್ ಸ್ಟೆಪ್ ಹಾಕಲಿದ್ದಾರಂತೆ.

Kannada Actress Ragini Dwivedi's special song with Sandalwood villains

ಇಡೀ ದಕ್ಷಿಣ ಭಾರತದ ಚಿತ್ರೋದ್ಯಮದಲ್ಲೇ ಇದೇ ಮೊದಲನೇ ಪ್ರಯತ್ನ ಎಂದು 'ರಣಚಂಡಿ' ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.['ಪುಟಾಣಿ ಪಂಟ್ರು-2' ಫಿನಾಲೆಯಲ್ಲಿ ರಾಗಿಣಿ ಬೆಲ್ಲಿ ಡ್ಯಾನ್ಸ್]

ಚುನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಜನಪ್ರಿಯ ಪಬ್ ಒಂದರಲ್ಲಿ ಈ ಹಾಡಿನ-ನೃತ್ಯದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ರಾಗಿಣಿ ದ್ವಿವೇದಿ ಅವರು 'ಖಳನಾಯಕರು ಕೂಡ ಉತ್ತಮ ನೃತ್ಯಗಾರರು, ನಾವು ಸಾಮಾನ್ಯವಾಗಿ ಸಿನಿಮಾದಲ್ಲಿ ಬಳಸುವ ತಂತ್ರಗಳನ್ನು ಮೀರಿ ಹೊಸದಾಗಿ ಏನನ್ನಾದರೂ ಮಾಡಬೇಕೆನ್ನಿಸಿ ಖಳನಾಯಕರ ಜೊತೆ ಹಾಡನ್ನು ಮಾಡಿದ್ದೇವೆ' ಎಂದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯಕ್ಕೆ ಜನಪ್ರಿಯ ಖಳನಟರಾಗಿರುವ ನಾರಾಯಣ ಸ್ವಾಮಿ, ಉಗ್ರಂ ರವಿ, ಪೆಟ್ರೋಲ್ ಪ್ರಸನ್ನ, ದಯಾನಿ ಕುಟ್ಟಪ್ಪ ಮತ್ತು ಉದಯ್ ಅವರು ನಟಿ ರಾಗಿಣಿ ದ್ವಿವೇದಿ ಅವರ ಜೊತೆಗೆ ಸಖತ್ ಸ್ಟೆಪ್ ಹಾಕಲಿದ್ದಾರೆ.[ಮತ್ತೆ ಗುನ್ನ ನೀಡೋಕೆ ಎದ್ದು ನಿಂತ ರಾಗಿಣಿ]

Kannada Actress Ragini Dwivedi's special song with Sandalwood villains

"ಸಿನಿಮಾಗಳಲ್ಲಿ ವಿಲನ್ ರೋಲ್ ಮಾಡುವವರು ಯಾವಾಗಲೂ ಹೊಡಿ, ಬಡಿ ಅನ್ನುವ ಜೊತೆಗೆ ಅವಾಚ್ಯ ಶಬ್ದಗಳಿಂದ ಬೈದಾಡುವುದು, ಮತ್ತು ಕೆಟ್ಟದಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಅವರನ್ನು ಹೊಸ ಅವತಾರದಲ್ಲಿ ನೋಡುವುದಕ್ಕೆ ವೀಕ್ಷಕರು ಇಷ್ಟಪಡುತ್ತಾರೆ ಎಂದು ನಟಿ ರಾಗಿಣಿ ಅವರು ಸ್ಪೆಷಲ್ ಡಾನ್ಸ್ ನ ಬಗ್ಗೆ ವಿವರಿಸಿದ್ದಾರೆ.[ರಾಗಿಣಿ 'ಪರಪಂಚ'ದೊಳ್ ಏನೇನೈತಿ?]

ನಿರ್ದೇಶಕ ಆನಂದ್ ಪಿ.ರಾಜು ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದು, ಸಂಗೀತ ನಿರ್ದೇಶಕ ಯು.ಪಿ ಆರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನೃತ್ಯ ನಿರ್ದೇಶಕ ಕುಲಭೂಷಣ್ ರಾಜೆ ಅರಸ್ ಅವರು ಈ ವಿಶೇಷ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ.

English summary
Actress Ragini Dwivedi-starrer Kannada movie 'Ranachandi' will have a song featuring the top Sandalwood villains dancing with the heroine, a first for any southern film industry according to the filmmakers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada