»   » 'ಶ್ರೇಷ್ಠ ನಟಿ ಪ್ರಶಸ್ತಿ' ತಂದೆಗೆ ಅರ್ಪಿಸಿದ ಲಕ್ಕಿ ಸ್ಟಾರ್ ರಮ್ಯಾ

'ಶ್ರೇಷ್ಠ ನಟಿ ಪ್ರಶಸ್ತಿ' ತಂದೆಗೆ ಅರ್ಪಿಸಿದ ಲಕ್ಕಿ ಸ್ಟಾರ್ ರಮ್ಯಾ

Posted By:
Subscribe to Filmibeat Kannada
ಕನ್ನಡ ಚಿತ್ರರಂಗದ ಲಕ್ಕಿ ಸ್ಟಾರ್ ಹಾಗೂ ಮಂಡ್ಯ ಸಂಸದೆ ರಮ್ಯಾ ಅವರು ರಾಜ್ಯ ಪ್ರಶಸ್ತಿಯನ್ನು ತಮ್ಮ ತಂದೆಯವರಾದ ಆರ್ ಟಿ ನಾರಾಯಣ್ (ಗುಂಡಪ್ಪ) ಅವರಿಗೆ ಅರ್ಪಿಸಿದ್ದಾರೆ. ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಅಭಿನಯಕ್ಕಾಗಿ 2010-11ನೇ ಸಾಲಿನ ಶ್ರೇಷ್ಠ ನಟಿಯಾಗಿ ರಮ್ಯಾ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಟ್ವೀಟಿಸಿರುವ ರಮ್ಯಾ, "ಈ ವರ್ಷ ನಿನಗೇ ಪ್ರಶಸ್ತಿ ಎಂದು ನಮ್ಮ ತಂದೆಯವರು ಪ್ರತಿ ಬಾರಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಸಾಧ್ಯವೇ ಇಲ್ಲ ಬಿಡಿ ಎನ್ನುತ್ತಿದ್ದೆ... ಪ್ರಶಸ್ತಿಯನ್ನು ನಮ್ಮ ತಂದೆಯವರಿಗೆ ಅರ್ಪಿಸುತ್ತಿದ್ದೇನೆ" ಎಂದಿದ್ದಾರೆ. [ರಾಜ್ಯ ಪ್ರಶಸ್ತಿ ಸಂಪೂರ್ಣ ಪಟ್ಟಿ]

ಟ್ವಿಟ್ಟರ್ ನಲ್ಲಿ ರಮ್ಯಾ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು. ಈ ಬಗ್ಗೆ ಅಭಿಮಾನಿಗಳಿಗೆ ಅವರು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ. ತಮ್ಮ ಪ್ರೀತಿ ವಿಶ್ವಾಸ ಹಾರೈಕೆ ಬೆಂಬಲ ಹೀಗೆ ಮುಂದುವರಿಯಲಿ ಎಂದು ವಿನಂತಿಸಿಕೊಂಡಿದ್ದಾರೆ.

ಹತ್ತು ವರ್ಷಗಳ ಬಳಿಕ ರಾಜ್ಯ ಪ್ರಶಸ್ತಿ ಬರುತ್ತಿರುವುದಕ್ಕೆ ರಮ್ಯಾ ಸಹಜವಾಗಿಯೇ ಖುಷಿಯಾಗಿದ್ದಾರೆ. ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ರಮ್ಯಾ ಅವರು ಪಾಂಡವಪುರದ ನಲ್ಲೇನಹಳ್ಳಿಯಲ್ಲಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

<blockquote class="twitter-tweet blockquote"><p>Thank you for your wishes! I was at nallenahalli, pandavpura when I got the news. Really happy to receive the state award after 10 years!</p>— Divya Spandana/Ramya (@divyaspandana) <a href="https://twitter.com/divyaspandana/statuses/393760972638134272">October 25, 2013</a></blockquote> <script async src="//platform.twitter.com/widgets.js" charset="utf-8"></script>

English summary
Golden Girl Ramya dedicated her best actress state award to her late father R T Narayan. Ramya gets best actress award for the film Sanju Weds Geetha.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada