For Quick Alerts
  ALLOW NOTIFICATIONS  
  For Daily Alerts

  ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದ ಲಕ್ಕಿ ಸ್ಟಾರ್

  By Mahesh
  |
  ಮೋಹಕ ತಾರೆ, ಲಕ್ಕಿ ಸ್ಟಾರ್ ರಮ್ಯಾ ಅವರು ಈಗ 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಎಂದು ಹಾಡುತ್ತಿದ್ದಾರೆ. ಅದರೆ, ರಮ್ಯಾಗೆ ಈ ಹಾಡು ಹೇಳಿಕೊಟ್ಟಿದ್ದು ರಿಯಲ್ ಸ್ಟಾರ್ ಉಪ್ಪಿಯಂತೂ ಅಲ್ಲ. ಅಥವಾ ಇದು ಉಪೇಂದ್ರ 'ಎ' ಚಿತ್ರದ ಹಾಡು ಅಲ್ಲ. ಆದರೆ, ರಿಯಲ್ ಸ್ಟಾರ್ ಉಪ್ಪಿಯಂತೆ ರಮ್ಯಾ ಕೂಡಾ ಜಾಹೀರಾತು ಲೋಕದಲ್ಲಿ ಒಳ್ಳೆ ಬ್ಯ್ರಾಂಡ್ ವ್ಯಾಲ್ಯೂ ಉಳಿಸಿಕೊಂಡಿದ್ದಾರೆ.

  ಹೀಗಾಗಿ ಕನ್ನಡತಿ ರಮ್ಯಾಗೆ ಟಾಟಾ ಸಂಸ್ಥೆಯಿಂದ ಕರೆ ಬಂದಿದೆ. ಟಾಟಾ ಕೆಮಿಕಲ್ಸ್ ನ ಉತ್ಪನ್ನವಾದ 'ಟಾಟಾ ಸ್ಟಾಲ್' ಪರವಾಗಿ ನೀವು ರಾಷ್ಟ್ರಮಟ್ಟದಲ್ಲಿ ರಾಯಭಾರಿಯಾಗಬೇಕು ಎಂಬುದು ನಮ್ಮ ಆಫರ್ ಎಂದು ಕೇಳಿದ್ದಾರೆ. ಇದಕ್ಕೆ ರಮ್ಯಾ ಥಟ್ಟನೆ ಒಪ್ಪಿಗೆ ಸೂಚಿಸಿದ್ದಾರೆ.

  ನಿರ್ವಾತಯುಕ್ತ ಬಾಷ್ಪಿಕರಿಸಿದ ಐಯೋಡಿಜೆಡ್ ಟಾಟಾ ಉಪ್ಪು ಪರಿಶುದ್ಧತೆಯ ಪ್ರತೀಕ ಎನ್ನುತ್ತಾ 'ನೀವು ಈ ಉಪ್ಪು ಪರೀಕ್ಷಿಸಿ ನೋಡಿ?' ಎಂದು ರಮ್ಯಾ ಪ್ರಶ್ನೆ ಹಾಕುವುದನ್ನು ಸದ್ಯದಲ್ಲೇ ಕಿರುತೆರೆಯಲ್ಲಿ ನೀವು ಕಾಣಬಹುದು.

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಸೂಪರ್ ಮಾರ್ಕೆಟ್ ಹಾಗೂ ಗ್ರಾಹಕರ ಮನೆ ಮನೆಗಳಲ್ಲಿ ಉಪ್ಪಿನ ಶುದ್ಧತೆ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಶುದ್ಧತೆಯ ಪ್ರತೀಕವಾಗಿರುವ ಟಾಟಾ ಉಪ್ಪಿಗಿಂತ ರುಚಿ ಬೇರೆ ಇಲ್ಲ ಎಂದು ಗ್ರಾಹಕರಿಗೆ ರಮ್ಯಾ ಸಾರಲಿದ್ದಾರೆ.

  Tata salt is correct :o) I'm not surprised that most of you'll got it right, if it's purity it's got to be tata salt :) ಎಂದು ಈಗಾಗಲೇ ಟ್ವೀಟ್ ಮಾಡಿದ್ದ ರಮ್ಯಾ ಟಾಟಾ ಸಂಸ್ಥೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ.

  ನಮ್ಮ ಮನೆಯಲ್ಲೂ ಟಾಟಾ ಸ್ಟಾಲ್ ಬಳಕೆ ಮಾಡ್ತಾ ಇದ್ವಿ. ಆದರೆ, ಉಪ್ಪಿನ ಶುದ್ಧತೆ ಬಗ್ಗೆ ಗೊತ್ತಿರಲಿಲ್ಲ. ಟಾಟಾ ಉಪ್ಪಿನ ಶುದ್ಧತೆ ಬಗ್ಗೆ ಪರೀಕ್ಷೆ ನಡೆಸುವ ವಿಧಾನ ನೋಡಿ ಆಶ್ಚರ್ಯವಾಯಿತು. ಟಾಟಾ ಉಪ್ಪು ಹಾಗೂ ಬೇರೆ ಅಯೋಡೈಜ್ ಉಪ್ಪಿನ ನಡುವಿನ ವ್ಯತ್ಯಾಸ ತಿಳಿಯಿತು. ದಿನ ನಿತ್ಯ ಬಳಕೆಗೆ ಉಪ್ಪು ಅತ್ಯಗತ್ಯವಾದ್ದರಿಂದ ಶುದ್ಧ ಉಪ್ಪು ಬಳಸುವುದು ಅನಿವಾರ್ಯವಾಗಿದೆ ಎಂದು ರಮ್ಯಾ ಹೇಳಿದರು.

  ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ ಹಾಗೂ ಮಂಗಳೂರಿನಲ್ಲಿ ಜಾಹೀರಾತು ಹೋರ್ಡಿಂಗ್ ಗಳನ್ನು ಹಾಕಲಾಗುತ್ತದೆ. ರಮ್ಯಾ ಅವರನ್ನು ಜಾಹೀರಾತಿಗೆ ಬಳಸಿಕೊಂಡಿರುವುದು ದಕ್ಷಿಣ ಭಾರತ ಮಾರುಕಟ್ಟೆ ವಿಸ್ತರಣೆಗೆ ಸಹಕಾರಿಯಾಗಲಿದೆ ಎಂದು ಟಾಟಾ ಕೆಮಿಕಲ್ಸ್ ನ ಸಿಒಒ ಅಶ್ವಿನಿ ಹಿರಾನ್ ಹೇಳಿದರು.

  ಸುಮಾರು 70 ಮಿಲಿಯನ್ ಮನೆಗಳಲ್ಲಿ ದಿನ ನಿತ್ಯ ಟಾಟಾ ಸ್ಟಾಲ್ ಬಳಕೆಯಲ್ಲಿದ್ದು ದೇಶದ ನಂ.1 ಬ್ರ್ಯಾಂಡ್ ಆಗಿದೆ. 1983ರಲ್ಲಿ ಪರಿಚಿತವಾದ ಬ್ಯ್ರಾಂಡ್ ಶೇ 62.4ರಷ್ಟು ಮಾರುಕಟ್ಟೆ ಪಾಲು ಹೊಂದಿದೆ. ಅಂದ ಹಾಗೆ ರಿಯಲ್ ಸ್ಟಾರ್ ಉಪ್ಪಿ ಬೆಸ್ಕಾಂ ಪರ ಪ್ರಚಾರಕರಾಗಿರುವ ಸುದ್ದಿ ನಮ್ಮಲ್ಲಿ ಬಂದಿದೆ ಅದನ್ನು ಓದ್ಕೊಳ್ಳಿ

  ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

  English summary
  Tata Chemicals Ltd, the pioneers and leaders in the national branded iodized salt category today unveiled a brand new ad campaign of Tata Salt for Karnataka market, featuring the popular Kannada actress Ramya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X