»   » 2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?

2016: ಗೂಗಲ್ ನಲ್ಲಿ ಅತಿ ಹೆಚ್ಚು ಸುದ್ದಿಯಾಗಿದ್ದ ಕನ್ನಡದ ನಟಿ ಯಾರು.?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಹಲವು ನಟಿಯರು ವಿವಿಧ ಕಾರಣಗಳಿಗೆ ಸುದ್ದಿಯಾಗಿದ್ದಾರೆ. ಕೆಲವರು ಕಾಂಟ್ರವರ್ಸಿಯಿಂದ ಗಮನ ಸೆಳೆದರೆ, ಮತ್ತೆ ಕೆಲವರು ಗಾಸಿಪ್, ಲವ್, ಮದುವೆ ಅಂತ ಹೆಚ್ಚು ಸೌಂಡ್ ಮಾಡಿದ್ದಾರೆ.

ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ನಟಿಯರಲ್ಲಿ ನಿರೀಕ್ಷೆಯಂತೆ ಕನ್ನಡದ ಟಾಪ್ ನಟಿಯರು ಸ್ಥಾನ ಪಡೆದಿದ್ದಾರೆ. ಆದ್ರೆ, ಅಚ್ಚರಿ ಏನಪ್ಪಾ ಅಂದ್ರೆ, ಈ ನಟಿಯರು ಕಡಿಮೆ ಚಿತ್ರಗಳಲ್ಲಿ ಅಭಿನಯಿಸಿದ್ದರು, ಹೆಚ್ಚು ಹುಡುಕಲ್ಪಟ್ಟಿದ್ದಾರೆ.[2016ರ ಅತ್ಯುತ್ತಮ ಚಿತ್ರ-ನಟ-ನಟಿ-ನಿರ್ದೇಶಕರನ್ನ ಆಯ್ಕೆ ಮಾಡಿ!]

2016 ರಲ್ಲಿ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಮದುವೆಯಾಗಿದ್ದೇ ದೊಡ್ಡ ಸುದ್ದಿ. ರಮ್ಯಾ ಸಿನಿಮಾಗಿಂತ ರಾಜಕೀಯದಲ್ಲೇ ಹೆಚ್ಚು ಬ್ಯುಸಿ. ಡಿಂಪಲ್ ಕ್ವೀನ್ ರಚಿತಾ ರಾಮ್ ಒಂದೇ ಚಿತ್ರದಲ್ಲಿ ಅಭಿನಯಿಸಿದ್ದು ವಿಶೇಷ. ಭಟ್ಟರ 'ಪರಪಂಚ'ದಲ್ಲಿ ಬಂದು ಹೋದ ರಾಗಿಣಿ ಮತ್ತೆ ಕಾಣಿಸಲೇ ಇಲ್ಲ. ಆದ್ರೂ ಇವರೆಲ್ಲ ಗೂಗಲ್ ನಲ್ಲಿ ಟಾಪ್ ನಟಿಯರು. ಗೂಗಲ್ ನಲ್ಲಿ ಈ ವರ್ಷ ಹೆಚ್ಚು ಬಾರಿ ಯಾವ ನಟಿ ಹುಡುಕಲ್ಪಟ್ಟಿದ್ದಾರೆ ಎಂದು 'cineloka.co.in' ಬಿಡುಗಡೆ ಮಾಡಿದೆ.

ಗೂಗಲ್ ಅತಿ ಹೆಚ್ಚು ಹುಡುಕಲ್ಪಟ್ಟ ನಟಿ ರಮ್ಯಾ!

ಸ್ಯಾಂಡಲ್ ವುಡ್ ನಿಂದ ದೂರವಿದ್ದರೂ ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಜನರು ನಟಿ ಹಾಗೂ ರಾಜಕಾರಣಿ ರಮ್ಯಾ ಅವರನ್ನ ಹುಡುಕಿದ್ದಾರೆ.[2016ರ ಅತ್ಯುತ್ತಮ ಕನ್ನಡ ನಟ ಯಾರು? ನಿಮ್ಮ ಆಯ್ಕೆ?]

ಗೂಗಲ್ ನಲ್ಲಿ ರಮ್ಯಾ ಟಾಪ್

2016ರಲ್ಲಿ ರಮ್ಯಾ ಅಭಿನಯಿಸಿದ್ದು ಒಂದೇ ಚಿತ್ರದಲ್ಲಿ. ಡಾ.ವಿಷ್ಣುವರ್ಧನ್ ಅವರ 201ನೇ ಸಿನಿಮಾ ಅಂತಾನೇ ಬಿಂಬಿತವಾಗಿದ್ದ 'ನಾಗರಾಹಾವು'. ಅದನ್ನ ಬಿಟ್ಟರೇ, ರಮ್ಯಾ ರಾಜಕೀಯದಲ್ಲೇ ಹೆಚ್ಚು ಬ್ಯುಸಿಯಾಗಿದ್ದರು. ಅದ್ರಲ್ಲೂ ಪಾಕಿಸ್ತಾನವನ್ನ ಹೊಗಳಿ ಹೇಳಿಕೆ ನೀಡಿದ್ದ ರಮ್ಯಾ, ವಿದೇಶ ಮಟ್ಟದಲ್ಲಿ ಸುದ್ದಿಯಾಗಿದ್ದರು.[ 2016 ರಲ್ಲಿ ಭರವಸೆ ಮೂಡಿಸಿದ ಯುವನಟ ಯಾರು?]

ರಾಗಿಣಿ ದ್ವಿವೇದಿ

ಸ್ಯಾಂಡಲ್ ವುಡ್ ನ ಗ್ಲಾಮರ್ ಡಾಲ್ ರಾಗಿಣಿ, ಈ ವರ್ಷ ಕಾಣಿಸಿಕೊಂಡಿದ್ದು ಒಂದೇ ಚಿತ್ರದಲ್ಲಿ. ಯೋಗರಾಜ್ ಭಟ್ ನಿರ್ದೇಶನದ ಪರಪಂಚದಲ್ಲಿ ಸೊಂಟ ಬಳುಕಿಸಿದ್ದ ರಾಗಿಣಿ, ಮತ್ತೆ ಯಾವ ಸಿನಿಮಾದಲ್ಲೂ ದರ್ಶನವಾಗಲೇ ಇಲ್ಲ. ಆದ್ರೆ, ಫಿಟ್ನೆಸ್ ವಿಚಾರದಲ್ಲಿ ಸ್ಲಿಮ್ ಆದ ರಾಗಿಣಿ ಈ ವರ್ಷ ಹೆಚ್ಚು ಸುದ್ದಿ ಮಾಡಿದರು. ಅದನ್ನ ಬಿಟ್ಟು, ಹೊಸ ಸಿನಿಮಾಗಳಲ್ಲಿ ನಾಯಕಿಯಾಗುವ ಮೂಲಕ ಗಮನ ಸೆಳೆದರು. ಇನ್ನೂ ಉಳಿದಂತೆ ಕೆಪಿಎಲ್ ಕ್ರಿಕೆಟ್ ನಲ್ಲೂ ಕಾಣಿಸಿಕೊಂಡಿದ್ದರು. ಹೀಗಾಗಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಕನ್ನಡದ ನಟಿಯರ ಪೈಕಿ ರಾಗಿಣಿಗೆ ಎರಡನೇ ಸ್ಥಾನ.[2016: ಈ ವರ್ಷದ ಅತ್ಯುತ್ತಮ ನಾಯಕಿ ಯಾರು?]

ರಚಿತಾ ರಾಮ್

'ಬುಲ್ ಬುಲ್' ರಚಿತಾ ರಾಮ್ ಕೂಡ ಅಷ್ಟೇ ಈ ವರ್ಷ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿಲ್ಲ. 'ಚಕ್ರವ್ಯೂಹ' ಚಿತ್ರದಲ್ಲಿ ನಾಯಕಿಯಾಗಿದ್ದ ಡಿಂಪಲ್ ಕ್ವೀನ್, 'ಜಗ್ಗುದಾದ' ಹಾಗೂ 'ಮುಕುಂದ ಮುರಾರಿ' ಚಿತ್ರಗಳಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದರು. ತದ ನಂತರ ಕಿರುತೆರೆಗೆ ಕಾಲಿಟ್ಟ ರಚಿತಾ 'ಕಿಕ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು. ಹೀಗೆ ಸೂಪರ್ ಸ್ಟಾರ್ ನಟರ ಪಾಲಿನ ಲಕ್ಕಿ ಎನಿಸಿಕೊಂಡಿರುವ ರಚಿತಾ ಗೂಗಲ್ ಹುಡುಕಾಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಅಮೂಲ್ಯ

ಚಂದನವನದ ಬೇಬಿ ಡಾಲ್ ಅಮೂಲ್ಯ ಅವರು ಈ ವರ್ಷ ಗೂಗಲ್ ನಲ್ಲಿ ಅತಿ ಹೆಚ್ಚು ಶೋಧಕ್ಕೋಳಗಾಗಿದ್ದಾರೆ. ಅಮೂಲ್ಯ ಈ ವರ್ಷ ಅಭಿನಯಿಸಿದ್ದು ಎರಡು ಚಿತ್ರ. 'ಮದುವೆಯೆ ಮಮತೆಯ ಕರೆಯೋಲೆ' ಹಾಗೂ 'ಕೃಷ್ಣ-ರುಕ್ಕು'. ಆದರೂ, ನಮ್ಮ ಸ್ಯಾಂಡಲ್ ವುಡ್ ಚಿತ್ರಪ್ರೇಮಿಗಳು ಅಮೂಲ್ಯ ಅವರ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ತೋರಿದ್ದಾರೆ. ಗೂಗಲ್ ಸರ್ಚ್ ನಲ್ಲಿ ಅಮೂಲ್ಯ ನಾಲ್ಕನೇ ಸ್ಥಾನ.

ರಾಧಿಕಾ ಪಂಡಿತ್

ಈ ವರ್ಷ ಸಿನಿಮಾಗಳಿಗಿಂತ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾದ ನಟಿ ರಾಧಿಕಾ ಪಂಡಿತ್. ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ಆಗಸ್ಟ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಾಧಿಕಾ, ಡಿಸೆಂಬರ್ 9 ರಂದು ಮದುವೆಯಾದರು. ಇನ್ನೂ ಈ ವರ್ಷ ಬಿಡುಗಡೆಯಾದ 'ಜೂಮ್', 'ದೊಡ್ಮನೆ ಹುಡ್ಗ', 'ಸಂತು ಸ್ಟ್ರೈಟ್ ಫಾರ್ವಾರ್ಡ್' ಚಿತ್ರಗಳಲ್ಲಿ ರಾಧಿಕಾ ಪಂಡಿತ್ ನಾಯಕಿಯಾಗಿದ್ದರು. ಹೀಗಾಗಿ ಈ ವರ್ಷ ಅತಿ ಹೆಚ್ಚು ಗೂಗಲ್ ಆದ ನಟಿಯರ ಪೈಕಿ ರಾಧಿಕಾ ಅವರಿಗೆ ಐದನೇ ಸ್ಥಾನ.

ಚಿತ್ರಕೃಪೆ: cineloka.co.in

English summary
kannada Actress Ramya Most Googled for the Year 2016. Here Are The Most Googled Kannada Actress list Of 2016.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada