»   » ಕಾರು ಬಿಟ್ಟು ಮೆಟ್ರೋ ರೈಲು ಹತ್ತಿದ್ದ ತಾರೆ ರಮ್ಯಾ!

ಕಾರು ಬಿಟ್ಟು ಮೆಟ್ರೋ ರೈಲು ಹತ್ತಿದ್ದ ತಾರೆ ರಮ್ಯಾ!

Posted By:
Subscribe to Filmibeat Kannada
ಗೋಲ್ಡನ್ ಗರ್ಲ್ ರಮ್ಯಾ ಅವರಿಗೆ ಅದ್ಯಾಕೋ ಏನೋ ಇದ್ದಕ್ಕಿದ್ದಂತೆ ಮೆಟ್ರೋ ರೈಲಿನ ಮೇಲೆ ಮನಸಾಗಿದೆ. ಇದಕ್ಕಾಗಿ ಆಕೆ ತಮ್ಮ ಐಶಾರಾಮಿ (?) ಕಾರನ್ನು ಬಿಟ್ಟುಬಂದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಸಂಭ್ರಮಿಸಿದ್ದಾರೆ.

ಮೆಟ್ರೋ ರೈಲು ಪ್ರಯಾಣ ಸಖತ್ ಆಗಿದೆ ಎಂದು ಅವರು ಈ ಬಗ್ಗೆ ಟ್ವೀಟಿಸಿದ್ದಾರೆ. ಅಯ್ಯೋ ಮೆಟ್ರೋ ಎರಡನೇ ಹಂತದವರೆಗೂ ಕಾಯಕ್ಕಾಗಲ್ಲಪ್ಪಾ ಎಂದಿರುವ ಅವರು ಎಂ.ಜಿ.ರಸ್ತೆ ಹಾಗೂ ಬೈಯಪ್ಪನ ಹಳ್ಳಿ ಮಾರ್ಗವಾಗಿ ಸಂಚರಿಸಿ ಎಂಜಾಯ್ ಮಾಡಿದ್ದಾರೆ.

ಕಾರಿಗಿಂತಲೂ ಮೆಟ್ರೋ ರೈಲು ಪ್ರಯಾಣ ಆರಾಮವಾಗಿರುವುದು ಅವರ ಗಮನಕ್ಕೆ ಬಂದಿದ್ದು, ಮುಂದೊಂದು ದಿನ ತಮ್ಮ ಕಾರನ್ನೂ ಸೇಲ್ ಮಾಡಿ ಮೆಟ್ರೋದಲ್ಲೇ ಪ್ರಯಾಣಿಸುವ ನಿರ್ಧಾರಕ್ಕೂ ಬಂದಿದ್ದಾರೆ! ನೀವಿಗ ನೋಡುತ್ತಿರುವುದು ರಮ್ಯಾ ಮೆಟ್ರೋ ರೈಲು ಪ್ರಯಾಣ ಫೋಟೋ.

ಸದ್ಯಕ್ಕೆ ರಮ್ಯಾ ಅವರು ನವರಸ ನಾಯಕ ಜಗ್ಗೇಶ್ ಜೊತೆ 'ನೀರ್ ದೋಸೆ' ಸವಿಯುತ್ತಿದ್ದಾರೆ. ದಿಗಂತ್ ನಾಯಕತ್ವ ಹಾಗೂ ಕೋಡಿ ರಾಮಕೃಷ್ಣ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಚಿತ್ರೀಕರಣವನ್ನು ಮುಗಿಸಿರುವ ರಮ್ಯಾ ಸದ್ಯಕ್ಕೆ ಪ್ರಜ್ವಲ್ ದೇವರಾಜ್ ಜೊತೆ 'ದಿಲ್ ಕಾ ರಾಜಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರದ ಚಿತ್ರೀಕರಣ ಮುಗಿದ ತಕ್ಷಣ ರಜೆಯ ಮೇಲೆ ತೆರಳಲಿದ್ದಾರೆ. ಜನವರಿಯಲ್ಲಿ 14 ರಿಂದ ಪ್ರಾರಂಭವಾಗಲಿರುವ ಚಿತ್ರೀಕರಣಕ್ಕೆ ಹಾಜರಾಗುವವರೆಗೂ ರಜಾದ ಮಜ ಸವಿಯಲಿದ್ದೇನೆ" ಎಂದಿದ್ದಾರೆ ರಮ್ಯಾ. (ಒನ್ಇಂಡಿಯಾ ಕನ್ನಡ)

English summary
Kannada actress Golden Girl Ramya rides on the metro. She tweets, "Ditched my car today for a ride on the metro! My entire travel cost me 16 + 20 rupees for auto! Can't wait for phase 2, will sell my car!"
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada