»   » ಡಬ್ ಸ್ಮಾಶ್ ಸ್ಟಾರ್ ಆದ ಸರಳ ಸುಂದರಿ ಸಂಗೀತ ಭಟ್

ಡಬ್ ಸ್ಮಾಶ್ ಸ್ಟಾರ್ ಆದ ಸರಳ ಸುಂದರಿ ಸಂಗೀತ ಭಟ್

Posted By:
Subscribe to Filmibeat Kannada

ಡಬ್ ಸ್ಮಾಶ್ ಮಾಡುವುದು ಈಗ ಅನೇಕರ ಹವ್ಯಾಸ ಆಗಿ ಬಿಟ್ಟಿದೆ. ತಮ್ಮ ಮೆಚ್ಚಿನ ಸಿನಿಮಾ ಹಾಡು, ಡೈಲಾಗ್ ಗಳ ಡಬ್ ಸ್ಮಾಶ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನಪ್ರಿಯತೆ ಗಳಿಸುವ ಹಂಬಲ ಅನೇಕರಿಗೆ ಇದೆ. ಇನ್ನು ಕೆಲವರಂತು ಡಬ್ ಸ್ಮಾಶ್ ಮೂಲಕ ಸಿನಿಮಾ ಅವಕಾಶ ಸಿಗಬಹುದು ಎಂಬ ಆಸೆ ಹೊಂದಿರುತ್ತಾರೆ. ಆದರೆ ಕನ್ನಡದ ಒಬ್ಬ ನಟಿ ಕೂಡ ತನ್ನ ಡಬ್ ಸ್ಮಾಶ್ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಆದರೆ, ಈಗಾಗಲೇ ಸಿನಿಮಾ ನಟಿ ಆಗಿರುವ ಸಂಗೀತ ಭಟ್ ಕೂಡ ಡಬ್ ಸ್ಮಾಶ್ ಮಾಡುವುದರಲ್ಲಿ ಎತ್ತಿದ ಕೈ. ಅವರ ಇನ್ಟಾಗ್ರಾಮ್ ಖಾತೆಯಲ್ಲಿ ನೋಡಿದರೆ ಸಿಕ್ಕಾಪಟ್ಟೆ ಡಬ್ ಸ್ಮಾಶ್ ವಿಡಿಯೋಗಳು ಕಣ್ಣಿಗೆ ಕಾಣಿಸುತ್ತದೆ. ರವಿಚಂದ್ರನ್, ರಮೇಶ್, ಸುದೀಪ್ ಅವರ ಸಿನಿಮಾಗಳ ಹಾಡುಗಳಿಗೆ ಸಂಗೀತ ಡಬ್ ಸ್ಮಾಶ್ ಮಾಡಿದ್ದಾರೆ. ಸಿನಿಮಾದಲ್ಲಿ ಹೊಸ ಹೊಸ ಪಾತ್ರಗಳಲ್ಲಿ ನಟಿಸುವ ಸಂಗೀತ ಭಟ್ ಇಲ್ಲಿಯೂ ಅಷ್ಟೆ ಚೆನ್ನಾಗಿ ನಟಿಸಿದ್ದಾರೆ. ತಮ್ಮ ಮುದ್ದು ಮುಖದಲ್ಲಿ ಸಖತ್ ಎಕ್ಸ್ ಪ್ರೆಶನ್ ನೀಡಿದ್ದಾರೆ.

ಸ್ಯಾಂಡಲ್ ವುಡ್ ನ ಸಂಗೀತ ಫುಲ್ ಬ್ಯುಸಿ

ಅಂದಹಾಗೆ, 'ಪ್ರೀತಿ ಗೀತಿ ಇತ್ಯಾದಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಸಂಗೀತ ಭಟ್ 'ಎರಡನೇ ಸಲ' ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿದರು. ಸದ್ಯಕ್ಕೆ 'ಅಳಿದು ಉಳಿದವರು' ಮತ್ತು ಬಾಲು ನಾಗೇಂದ್ರ ಜೊತೆ ಒಂದು ಸಿನಿಮಾವನ್ನು ಅವರು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ತನ್ನ ಬೆಲ್ಲಿ ಪಿಯರ್ಸಿಂಗ್ ಮೂಲಕ ಕೂಡ ಈ ನಟಿ ಸುದ್ದಿ ಮಾಡಿದ್ದರು.

English summary
kannada actress Sangeetha Bhat dubsmash videos are very popular in instagram.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X