»   » ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.!

ಹಾಟ್ ಹುಡುಗಿ ಸಂಜನಾ ಅವರ ಮೈ ಜುಮ್ಮೆನಿಸುವ 'ಯೋಗಾಭ್ಯಾಸ'.!

Posted By:
Subscribe to Filmibeat Kannada

ತನ್ನ ಮೋಹಕ ಸೌಂದರ್ಯ, ಮಾದಕ ಮೈಮಾಟದಿಂದಲೇ ಸಂಚಲನ ಸೃಷ್ಟಿಸುವ ನಟಿ ಸಂಜನಾ ಗಲ್ರಾನಿ. ಸಂಜನಾ ಸಖತ್ ಬೋಲ್ಡ್......ಸಂಜನಾ ಸಖತ್ ಹಾಟ್....ಸಂಜನಾ ಸೂಪರ್ ಆಗಿ ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ....ಹೀಗೆ, ಸಂಜನಾ ಅವರ ಬಗ್ಗೆ ಕಾಮೆಂಟ್ ಗಳು ಕೇಳಿ ಬರುತ್ತಿರುತ್ತವೆ.

ಸಂಜನಾ ಅವರ ಈ ಫಿಟ್ನೆಸ್ ಗೆ ಕಾರಣ ಜಿಮ್, ಏರೋಬಿಕ್ ಕ್ಲಾಸ್, ಮತ್ತೊಂದು, ಮಗದೊಂದು ಇರಬಹುದು. ಆದ್ರೆ, ಸ್ವತಃ ಸಂಜನಾ ಅವರು ಹೇಳುವ ಪ್ರಕಾರ, ತಮ್ಮ ದೇಹದ ಸೌಂದರ್ಯ ಹಾಗೂ ಫಿಟ್ನೆಸ್ ಗೆ ಯೋಗ ಕಾರಣವಂತೆ.

ಹೌದು, ಸಂಜನಾ ಅವರ ಫಿಟ್ನೆಸ್ ಹಿಂದಿನ ಶಕ್ತಿ ಯೋಗ. ಸಂಜನಾ ಸ್ವಂತ ಯೋಗ ಅಕಾಡೆಮಿ ಕೂಡ ಸ್ಥಾಪಿಸಿಕೊಂಡಿದ್ದಾರೆ. ಹಾಗಿದ್ರೆ, ಸಂಜನಾ ಅವರ ಯೋಗಾಭ್ಯಾಸ ಹೇಗಿರುತ್ತೆ ಎಂಬುದನ್ನ ಚಿತ್ರಗಳ ಸಮೇತ ಮುಂದೆ ನೀಡಲಾಗಿದೆ ನೋಡಿ.....

ಸಂಜನಾ ಫಿಟ್ನೆಸ್ ಗೆ 'ಯೋಗ' ಕಾರಣ

ನಟಿ ಸಂಜನಾ ಅವರ ಫಿಟ್ನೆಸ್ ಹಿಂದಿನ ಶಕ್ತಿ 'ಯೋಗ'. ದಿನದ ಅಮೂಲ್ಯ ಕ್ಷಣ ಅಂದ್ರೆ ಅದು ಯೋಗ ಮಾಡುವ ಕ್ಷಣವಂತೆ.

ಅಭದ್ರತೆ ಕಾಡಿಲ್ಲ

ಸಂಜನಾ ಅವರು ಇಂಡಸ್ಟ್ರಿಗೆ ಬಂದು ಬಹಳ ವರ್ಷಗಳಾಗಿವೆ. ಆದ್ರೆ, ಇಲ್ಲಿಯವರೆಗೂ ಯಾವತ್ತೂ ಅವರಿಗೆ ಅಭದ್ರತೆ ಕಾಡಿಲ್ಲವಂತೆ. ಇದಕ್ಕೆ ಕಾರಣ ಯೋಗ ಎನ್ನುತ್ತಾರೆ ನಟಿ ಸಂಜನಾ.

ಜೀವನ ಯೋಗದ ಮೇಲೆ ನಿಂತಿದೆ

ಸಂಜನಾ ಅವರ ಜೀನವ ಯೋಗದ ಮೇಲೆ ನಿಂತಿದೆಯಂತೆ. ಮನಸ್ಸು, ದೇಹ, ಆತ್ಮ ಎಲ್ಲವೂ ಒಂದು ಕಡೆ ಜೋಡಣೆಯಾಗಿರಲು ಯೋಗವೇ ಕಾರಣವಂತೆ.

ಎಲ್ಲರನ್ನ ಯೋಗದತ್ತ ಸೆಳೆಯುವ ಪ್ರಯತ್ನ

ಯೋಗದಿಂದ ಮಾನಸಿಕ ಹಾಗೂ ದೈಹಿಕವಾಗಿ ಸಾಕಷ್ಟು ಬದಲಾವಣೆಯಾಗುತ್ತದೆ. ಯೋಗದ ಮೂಲಕ ಮನಶಾಂತಿ, ನೆಮ್ಮದಿ ಪಡೆಯಬಹುದು. ಇದನ್ನ ನಾನು ಪಡೆಯುತ್ತಿದ್ದೀನಿ. ಸುತ್ತಮುತ್ತಲಿನ ಜನಗಳನ್ನ ಕೂಡ ಯೋಗದ ಕಡೆಯ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರಂತೆ ಸಂಜನಾ

ಸಂಜನಾ ಯೋಗ ಅಕಾಡೆಮಿ

ಅಂದ್ಹಾಗೆ, ಸಂಜನಾ ಅವರು ತಮ್ಮದೇ ಆದ ಸ್ವಂತ ಯೋಗ ಅಕಾಡೆಮಿಯನ್ನ ಕೂಡ ಸ್ಥಾಪಿಸಿಕೊಂಡಿದ್ದಾರೆ. ಬೆಂಗಳೂರಿನ ಕೋರಮಂಗದಲ್ಲಿ ಯೋಗ ಅಕಾಡೆಮಿ ಇದೆ. ಐಷಾರಾಮಿ ಅಕಾಡೆಮಿ ಇದಾಗಿದ್ದು, ಯೋಗಕ್ಕೆ ಬೇಕಾಗಿರುವ ಪರಿಕರಗಳು, ಧ್ಯಾನಮಂದಿರ, ಪೂಜಾ ಮಂದಿರ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳಿವೆಯಂತೆ.

ಸಂಜನಾ ಅವರ ಯೋಗ ಭಂಗಿಗಳು

ನಟಿ ಸಂಜನಾ ಅವರು ಯಾವುದೇ ಅಳುಕಿಲ್ಲದೇ, ಅಂಜದೆ ಯೋಗದ ಎಲ್ಲಾ ಭಂಗಿಗಳನ್ನ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಯೋಗದಲ್ಲಿ ಸಂಜನಾ ಪರಿಣಿತಿ ಹೊಂದಿದ್ದಾರೆ.

ಸಂಜನಾ ಯೋಗ ನೋಡಿ

ನಟಿ ಸಂಜನಾ ಅವರು ಯೋಗ ಮಾಡುತ್ತಿರುವ ಒಂದು ಝಲಕ್ ನೋಡಿ.

ಎಲ್ಲರೂ ಯೋಗ ಮಾಡಿ

ತಮ್ಮ ಆರೋಗ್ಯ ಮತ್ತು ಮನಸ್ಸನ್ನ ಹತೋಟಿಯಲ್ಲಿಟ್ಟುಕೊಳ್ಳಲು ಎಲ್ಲರೂ ಯೋಗ ಮಾಡಿ, ಯೋಗಕ್ಕಿಂತ ಉತ್ತಮವಾದ ಚಿಕಿತ್ಸೆ ಮತ್ತೊಂದಿಲ್ಲ ಎನ್ನುತ್ತಾರೆ ಸಂಜನಾ.

English summary
Kannada Actress Sanjana Galrani Celebrate International Yoga Day. and She Talk About Yoga

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada