»   » 'ಕಾಸ್ಟಿಂಗ್ ಕೌಚ್' ಬಗ್ಗೆ ಅರ್ನಬ್ ಗೋಸ್ವಾಮಿ ಮುಂದೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ?

'ಕಾಸ್ಟಿಂಗ್ ಕೌಚ್' ಬಗ್ಗೆ ಅರ್ನಬ್ ಗೋಸ್ವಾಮಿ ಮುಂದೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ?

Posted By:
Subscribe to Filmibeat Kannada

'ಅವಕಾಶಕ್ಕಾಗಿ ಮಂಚ ಏರುವ' ಅನಿವಾರ್ಯತೆ ವಿರುದ್ಧ ತೆಲುಗು ನಟಿ ಶ್ರೀರೆಡ್ಡಿ ಪ್ರತಿಭಟನೆ ನಡೆಸಿದ್ಮೇಲೆ, ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ 'ಕಾಸ್ಟಿಂಗ್ ಕೌಚ್' ಸದ್ದು ಮಾಡುತ್ತಿದೆ.

''ಕಾಸ್ಟಿಂಗ್ ಕೌಚ್'ನಿಂದ ಕೆಲಸ ಅಂತೂ ಸಿಗುತ್ತೆ. ಕಮ್ಮಿ ಅಂದರೂ ಹೊಟ್ಟೆಗೆ ರೊಟ್ಟಿ ಕೊಡ್ತಾರೆ. ಅತ್ಯಾಚಾರ ಎಸಗಿ ಪರಾರಿ ಆಗುವುದಿಲ್ಲ'' ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನೃತ್ಯ ಸಂಯೋಜಕಿ ಸರೋಜ್ ಖಾನ್ ನೀಡಿದ್ದ ಹೇಳಿಕೆ ವಿವಾದಕ್ಕೆ ಗ್ರಾಸವಾಗಿತ್ತು.

ಕಾಸ್ಟಿಂಗ್ ಪರವಾಗಿ ದನಿ ಎತ್ತಿ ಸರೋಜ್ ಖಾನ್ ಕೊಟ್ಟ ಹೇಳಿಕೆ ಸರಿಯೋ, ತಪ್ಪೋ ಎಂಬುದರ ಬಗ್ಗೆ ರಿಪಬ್ಲಿಕ್ ಟಿವಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಯಿತು. ಈ ವೇಳೆ ಅರ್ನಬ್ ಗೋಸ್ವಾಮಿ ಎದುರು ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ನಟಿ ಸಂಜನಾ ಬಿಚ್ಚಿಟ್ಟರು. ಮುಂದೆ ಓದಿರಿ...

ಸರೋಜ್ ಖಾನ್ ಗೆ ಮಾತಿನ ಮೇಲೆ ನಿಗಾ ಇಲ್ಲ.!

''ಸರೋಜ್ ಖಾನ್ ಗೆ ಇದ್ದ ಪ್ರತಿಭೆಗೆ ನಾನು ಅಭಿಮಾನಿಯಾಗಿದ್ದೆ. ಆದ್ರೆ, ಸರೋಜ್ ಖಾನ್ ಇಂದು ನನ್ನನ್ನ ಹಾಗೂ ನಾನು ಅವರ ಮೇಲೆ ಇಟ್ಟಿದ್ದ ಅಭಿಮಾನವನ್ನ ಕಳೆದುಕೊಂಡಿದ್ದಾರೆ. ಸರೋಜ್ ಖಾನ್ ಗೆ ತಮ್ಮ ಮಾತಿನ ಮೇಲೆ ನಿಗಾ ಇಲ್ಲ'' - ಸಂಜನಾ, ನಟಿ

'ಕಾಸ್ಟಿಂಗ್ ಕೌಚ್'ನಿಂದ ಕೆಲಸ ಸಿಗುತ್ತೆ: ಸರೋಜ್ ಖಾನ್ ಶಾಕಿಂಗ್ ಹೇಳಿಕೆ!

ಕಾಸ್ಟಿಂಗ್ ಕೌಚ್ ನನ್ನ ಅನುಭವಕ್ಕೂ ಬಂದಿದೆ

''ನಾನು ನನ್ನ ವೃತ್ತಿ ಬದುಕಿನಲ್ಲಿ 45 ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಈ ಪೈಕಿ ಒಂದು ಸಿನಿಮಾದಲ್ಲಿ ಮಾತ್ರ 'ಕಾಸ್ಟಿಂಗ್ ಕೌಚ್' ನನ್ನ ಅನುಭವಕ್ಕೆ ಬಂದಿದೆ. ನಾನು ಆ ಪ್ರೊಡ್ಯೂಸರ್ ಗೆ ಸರಿಯಾಗಿ ಒದ್ದು ಬಂದಿದ್ದೇನೆ'' - ಸಂಜನಾ, ನಟಿ

ಸರೋಜ್ ಖಾನ್ ಪರ ದನಿ ಎತ್ತಿದ ರಿಚಾ ಚಡ್ಡಾಗೆ ಟ್ವಿಟ್ಟರ್ ನಲ್ಲಿ ಮಂಗಳಾರತಿ.!

ಚಾಲೆಂಜ್ ಮಾಡಿದ್ದ ನಿರ್ಮಾಪಕ

''ಬ್ಯಾಂಕಾಕ್ ಗೆ ಒಬ್ಬಳೇ ಬಂದು ಶೂಟಿಂಗ್ ಮಾಡು, ಇಲ್ಲ ಅಂದ್ರೆ, ಫಿಲ್ಮ್ ಚೇಂಬರ್ ಗೆ ದೂರು ಕೊಡುತ್ತೇನೆ ಎಂದು ಆ ಪ್ರೊಡ್ಯೂಸರ್ ನನಗೆ ಚಾಲೆಂಜ್ ಮಾಡಿದ್ದರು. ಆಗ ನಾನು ನನ್ನ ತಂದೆ ಜೊತೆಗೆ ಬ್ಯಾಂಕಾಕ್ ಗೆ ತೆರಳಿ ಶೂಟಿಂಗ್ ಮುಗಿಸಿದೆ. ಬಳಿಕ ಫಿಲ್ಮ್ ಚೇಂಬರ್ ಮೆಟ್ಟಿಲೇರಿ, ಆ ನಿರ್ಮಾಪಕನಿಗೆ ತಕ್ಕ ಪಾಠ ಕಲಿಸಿದೆ. ವಾಣಿಜ್ಯ ಮಂಡಳಿಯಲ್ಲಿ ಆ ಪ್ರೊಡ್ಯೂಸರ್ (ನಾಗರಾಜ್) ನನಗೆ ಕ್ಷಮಾಪಣೆ ಕೇಳಿದರು'' - ಸಂಜನಾ, ನಟಿ

ಬಿಬಿಸಿ ವಾಹಿನಿಯಲ್ಲಿ ಬಾಲಿವುಡ್ ನ ಕರಾಳ ಮುಖ ಬಿಚ್ಚಿಡಲಿದ್ದಾರೆ ನಟಿಯರು.!

ಎಲ್ಲರೂ ಒಂದೇ ತರಹ ಇರಲ್ಲ.!

''ನಾನು ನಟಿಸಿದ 45 ಸಿನಿಮಾಗಳಲ್ಲಿ ಈ ತರಹ ಅನುಭವ ಆಗಿದ್ದು ಒಂದೇ ಒಂದು ಚಿತ್ರದಲ್ಲಿ. ಹೀಗಾಗಿ, ಎಲ್ಲ ಬೆರಳು ಒಂದೇ ತರಹ ಇರಲ್ಲ. ಕೆರೆಯಲ್ಲಿ ಒಂದು ಮೀನು ಕೊಳಕಾಗಿದ್ದರೆ, ಇಡೀ ಕೆರೆಯೇ ಕೊಳಕು ಅಂತ ಹೇಳಲು ಸಾಧ್ಯ ಇಲ್ಲ'' - ಸಂಜನಾ, ನಟಿ

ಸರೋಜ್ ಖಾನ್ ವಿರುದ್ಧ ಶ್ರೀರೆಡ್ಡಿ, ಸೋಫಿ ಚೌಧರಿ ಸಿಡಿಮಿಡಿ.!

ಮುಖ ಜಜ್ಜಿ ಬಿಡುತ್ತೇನೆ

''ಯಾವುದೇ ಪುರುಷ ನನ್ನ ಅನುಮತಿ ಇಲ್ಲದೆ, ನನ್ನನ್ನ ಮುಟ್ಟಲು ಸಾಧ್ಯ ಇಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಅವನ ಮುಖ ಜಜ್ಜಿ ಬಿಡುತ್ತೇನೆ'' ಎಂದು ಗುಡುಗಿದರು ನಟಿ ಸಂಜನಾ.

ಸೂಪರ್ ಸ್ಟಾರ್ ಗಳು ಮೌನ ವಹಿಸಿರುವುದು ಯಾಕೆ.?

''ಕಾಸ್ಟಿಂಗ್ ಕೌಚ್ ವಿರುದ್ಧ ದನಿ ಎತ್ತಿರುವ ಶ್ರೀರೆಡ್ಡಿಗೆ ನನ್ನ ಬೆಂಬಲ ಇದೆ. ಚಿತ್ರರಂಗದಲ್ಲಿ ಪ್ರತಿಭಾವಂತರು ತುಂಬಾ ಜನ ಇದ್ದಾರೆ. ಎಲ್ಲೋ ಶೇಕಡ 5 ರಷ್ಟು ಮಂದಿ 'ಕಾಸ್ಟಿಂಗ್ ಕೌಚ್' ಹೆಸರಿನಲ್ಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ ಅಷ್ಟೇ. 'ಕಾಸ್ಟಿಂಗ್ ಕೌಚ್' ಬಗ್ಗೆ ಸೂಪರ್ ಸ್ಟಾರ್ ಗಳು ಮೌನ ವಹಿಸಿರುವುದನ್ನು ನಾನು ಖಂಡಿಸುತ್ತೇನೆ'' - ಸಂಜನಾ, ನಟಿ

English summary
Kannada Actress Sanjana slams Saroj Khan for her statement on Casting Couch.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X