»   » ಕಿಚ್ಚ ಸುದೀಪ್ ಗೆ ದೃಷ್ಟಿ ತೆಗೆಯಬೇಕು, ಅಷ್ಟು ಸಖತ್ತಾಗಿದ್ದಾರೆ ಎಂದ ನಟಿ ಶ್ರಾವ್ಯ

ಕಿಚ್ಚ ಸುದೀಪ್ ಗೆ ದೃಷ್ಟಿ ತೆಗೆಯಬೇಕು, ಅಷ್ಟು ಸಖತ್ತಾಗಿದ್ದಾರೆ ಎಂದ ನಟಿ ಶ್ರಾವ್ಯ

Posted By:
Subscribe to Filmibeat Kannada

ಕಿಚ್ಚ ಸುದೀಪ್... ಈ ಒಂದು ಹೆಸರಿಗೆ ಕ್ಲೀನ್ ಬೌಲ್ಡ್ ಆಗಿರುವವರು ಅದೆಷ್ಟೋ ಮಂದಿ. ಅದರಲ್ಲೂ ಸುದೀಪ್ ರವರ ಹೈಯ್ಟು, ವಾಯ್ಸ್ ಹಾಗೂ ಪರ್ಸನಾಲಿಟಿಗೆ ಫಿದಾ ಆದ ಹುಡುಗಿಯರು ಲೆಕ್ಕವಿಲ್ಲದಷ್ಟು. ಇದೇ ಲಿಸ್ಟ್ ನಲ್ಲಿ 'ರೋಸ್' ಹುಡುಗಿ ಶ್ರಾವ್ಯ ಕೂಡ ಇದ್ದಾರೆ ಅಂದ್ರೆ ನೀವು ನಂಬಲೇಬೇಕು.

ಹೌದು, ನಟಿ ಶ್ರಾವ್ಯ ರವರಿಗೆ ಸುದೀಪ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ''ಸುದೀಪ್ ಎಷ್ಟು ಸಖತ್ತಾಗಿದ್ದಾರೆ ಅಂದ್ರೆ ಅವರಿಗೆ ದೃಷ್ಟಿ ತೆಗೆಯಬೇಕು'' ಎನ್ನುತ್ತಾರೆ ನಟಿ ಶ್ರಾವ್ಯ.

kannada-actress-shravya-speaks-about-kiccha-sudeep

''ಕಿಚ್ಚ ಸುದೀಪ್ ಬಗ್ಗೆ ವರ್ಣಿಸಲು ಪದಗಳೇ ಸಾಲುವುದಿಲ್ಲ. ಯಾಕಂದ್ರೆ, ಒಂದು ಹುಡುಗಿಗೆ ಡ್ರೀಮ್ ಬಾಯ್ ಹೇಗಿರ್ತಾರೆ, ಹಾಗೇ ಆರು ಅಡಿ ಉದ್ದ... ಕಂಚಿನ ಕಂಠ... ಕ್ರೇಜ್... ಎಲ್ಲವೂ ಸುದೀಪ್ ಸರ್ ಗೆ ಇದೆ. ನನಗೆ ಅನಿಸುವ ಹಾಗೆ ಸುದೀಪ್ ರವರಿಗೆ ದೃಷ್ಟಿ ತೆಗೆಯಬೇಕು. ಅಷ್ಟು ಸಖತ್ತಾಗಿದ್ದಾರೆ'' ಅಂತ ವಿಡಿಯೋ ಒಂದರಲ್ಲಿ ಶ್ರಾವ್ಯ ಹೇಳಿದ್ದಾರೆ.

ಅಲ್ಲದೇ, ಹಾಲಿವುಡ್ ಗೆ ಎಂಟ್ರಿಕೊಡುತ್ತಿರುವ ಸುದೀಪ್ ರವರಿಗೆ, ''ಈಗ ಹಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಕಂಗ್ರಾಟ್ಸ್ ಸುದೀಪ್ ಸರ್. ವೀ ಲವ್ ಯು ಸೋ ಮಚ್'' ಎಂದು ಶುಭಾಶಯ ತಿಳಿಸಿದ್ದಾರೆ ನಟಿ ಶ್ರಾವ್ಯ.

ಶ್ರಾವ್ಯ ರವರ ಈ ಮಾತುಗಳನ್ನ ಕೇಳಿದ್ಮೇಲೆ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಕಿಚ್ಚ ಸುದೀಪ್.

English summary
Kannada Actress Shravya speaks about Kiccha Sudeep. Watch video here...
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada