»   » ಹಾಸನದಲ್ಲಿ ಮಣ್ಣಿನ ಮಗನ ವಿರುದ್ದ ಮಣ್ಣಿನ ಮಗಳು?

ಹಾಸನದಲ್ಲಿ ಮಣ್ಣಿನ ಮಗನ ವಿರುದ್ದ ಮಣ್ಣಿನ ಮಗಳು?

By: ಉದಯರವಿ
Subscribe to Filmibeat Kannada

ನಟಿ ಶ್ರುತಿ ಅವರು ಕಳೆದ ವರ್ಷ ನಾನಾ ವೈಯಕ್ತಿಕ ಕಾರಣಗಳಿಂದಾಗಿ ಬಹಳಷ್ಟು ಸುದ್ದಿ ಮಾಡಿದವರು. ಶ್ರುತಿ ಅವರ ಎರಡನೇ ಮದುವೆಯನ್ನು ಕೌಟುಂಬಿಕ ನ್ಯಾಯಾಲಯ ಅಸಿಂಧುಗೊಳಿಸಿದ್ದು, ಬಳಿಕ ಅವರು ಪರಿತಪಿಸಿದ್ದು ಎಲ್ಲವನ್ನೂ ಅವರ ಅಭಿಮಾನಿಗಳು ನೋಡಿದ್ದರು.

ಈಗ ಶ್ರುತಿ ಅವರು ಆ ಎಲ್ಲಾ ಕಹಿ ಘಟನೆಗಳಿಂದ ಹೊರಬಂದಿದ್ದಾರೆ. ಹದಿನಾರನೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಅವರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. [ಲೋಕಸಭೆ ಚುನಾವಣೆ ಅಖಾಡಕ್ಕೆ ರಂಗಾಯಣ ರಘು?]

Actress Shruti

ಮಾಜಿ ಪ್ರಧಾನಿ ಹಾಸನದ ಹಾಲಿ ಸಂಸದ ಎಚ್.ಡಿ.ದೇವೇಗೌಡ ಅವರ ಭದ್ರ ಕೋಟೆ ಹಾಸನ ಲೋಕಸಭಾ ಕ್ಷೇತ್ರ. ಈ ಕೋಟೆಯನ್ನು ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಸಾಲದಕ್ಕೆ ಈ ಬಾರಿಯ ಚುನಾವಣೆ ದೇವೇಗೌಡರ ಕೊನೆಯ ಸಮರ ಎಂದೇ ಭಾವಿಸಲಾಗಿದೆ.

ಇನ್ನು ಶ್ರುತಿ ಅವರ ತಾಯಿಯ ತವರೂರು ಹೊಳೆನರಸಿಪುರ. ದೇವೇಗೌಡರ ಹುಟ್ಟೂರು ಹೊಳೆನರಸಿಪುರ. ಇಬ್ಬರೂ ಹೊಳೆನರಸಿಪುರದವರು ಎಂಬುದನ್ನು ಬಿಟ್ಟರೆ ಇನ್ಯಾವುದೇ ವಿಚಾರದಲ್ಲೂ ಸಾಮ್ಯತೆ ಕಾಣುವುದಿಲ್ಲ. ಬಿಜೆಪಿ ಮುಖಂಡರು ಶ್ರುತಿ ಅವರ ಜೊತೆ ಈಗಾಗಲೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂಬುದು ಲೇಟೆಸ್ಟ್ ಸಮಾಚಾರ.

ಕೊನೆಯ ಘಳಿಗೆಯಲ್ಲಿ ಬಿಜೆಪಿಯಿಂದ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಶ್ರುತಿ ಅವರ ಹೆಸರಂತೂ ಕೇಳಿಬಂದಿದೆ. ಒಟ್ಟಾರೆಯಾಗಿ ಶ್ರುತಿ ಅವರಿಗೆ ಸೀಟು ಸಿಕ್ಕಿ ಒಂದು ವೇಳೆ ಗೆದ್ದುಬಿಟ್ಟರೆ ಪವಾಡವೇ ನಡೆದುಬಿಡುತ್ತದೆ.

English summary
If sources are to be believed, Kannada actor Shruti (38) has been approached by the BJP to contest from the Hassan Lok Sabha Election 2014. Shruti's mother is from Holenarasipura, the same town from which H D Deve Gowda hails, the sitting MP from Hassan, will contest the poll from his constituency this time too. The battle is seen as son of soil Vs daughter of soil.
Please Wait while comments are loading...