Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ಯೂಟ್ಯೂಬ್ ನೋಡಿ ಕಳ್ಳತನ ಕಲಿತ ಜೋಡಿ: ಶಶಿಕಲಾ ಜೊಲ್ಲೆ ಮಾಲೀಕತ್ವದ ಬ್ಯಾಂಕ್ಗೆ ಕನ್ನ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಹದಾರಿ ಮುಹೂರ್ತ: ಕಮ್ ಬ್ಯಾಕ್ ಮಾಡಿದ 'ಸಿಂಪಲ್ ಹುಡುಗಿ' ಶ್ವೇತಾ
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದವರು ನಿರ್ದೇಶಕ ಸುನಿ, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ಶ್ವೇತಾ ಶ್ರೀವಾತ್ಸವ್.
ನಿರ್ದೇಶಕ ಸುನಿ ಮತ್ತು ನಟ ರಕ್ಷಿತ್ ಶೆಟ್ಟಿಯಂತೂ ಚಂದನವನದಲ್ಲಿ ಸಿಕ್ಕಾಪಟ್ಟೆ ಬಿಜಿಯಿದ್ದಾರೆ. ಇನ್ನೂ 'ಫೇರ್ ಅಂಡ್ ಲವ್ಲಿ', 'ಕಿರಗೂರಿನ ಗಯ್ಯಾಳಿಗಳು' ಚಿತ್ರಗಳಲ್ಲಿ ನಟಿಸಿದ ಬಳಿಕ ನಟಿ ಶ್ವೇತಾ ಶ್ರೀವಾತ್ಸವ್ ಹೆಣ್ಣು ಮಗುವಿನ ತಾಯಿ ಆದರು.
ಮಗುವಿನ ಆರೈಕೆಗಾಗಿ ಮೂರು ವರ್ಷಗಳ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದ ಶ್ವೇತಾ ಶ್ರೀವಾತ್ಸವ್ ಇದೀಗ ಅಧಿಕೃತವಾಗಿ ಕಮ್ ಬ್ಯಾಕ್ ಮಾಡಿದ್ದಾರೆ. 'ರಹದಾರಿ' ಸಿನಿಮಾದ ಮುಖ್ಯ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಳ್ಳಲಿದ್ದಾರೆ.
ಸಿಂಪಲ್
ಹುಡುಗಿ
ಶ್ವೇತಾ
ಶ್ರೀವಾತ್ಸವ್
ನ
ಹುಡುಕಿಕೊಂಡು
ಬಂದಿತ್ತು
ಒಂಬತ್ತು
ಆಫರ್ಸ್.!
'ರಹದಾರಿ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗಷ್ಟೇ ನಡೆಯಿತು. 'ರಹದಾರಿ' ಸಿನಿಮಾ ಸೆಟ್ಟೇರಿದ ಖುಷಿಯಲ್ಲಿದ್ದ ಶ್ವೇತಾ ಶ್ರೀವಾತ್ಸವ್, ''ಮೂರು ವರ್ಷಗಳ ನಂತರ ಸಿನಿಮಾ ಮಾಡುತ್ತಿದ್ದೇನೆ. ತುಂಬಾ ಸಂತಸದಲ್ಲಿ ಇದ್ದೇನೆ. ನಿರ್ದೇಶಕ ಗಿರೀಶ್ ಕಥೆ ಹೇಳಿದ ರೀತಿ ನನಗೆ ತುಂಬಾ ಇಷ್ಟ ಆಯಿತು. ನಾನು ಸ್ವಲ್ಪ ಚ್ಯೂಸಿ. ನನಗೆ ಸಿಕ್ಕಿರುವ ಪಾತ್ರವನ್ನು ಹೀರೋ ಕೂಡ ಮಾಡಬಹುದಿತ್ತು. ಆದ್ರೆ, ನನಗೆ ಆ ಪಾತ್ರ ಕೊಟ್ಟಿರುವುದು ಖುಷಿ ತಂದಿದೆ'' ಎಂದರು.
ರಾಬರಿ
ಕೇಸ್
ಬೆನ್ನು
ಹತ್ತಿ
'ರಹದಾರಿ'ಯಲ್ಲಿ
ಬಂದ್ರು
ಶ್ವೇತಾ
ಶ್ರೀವಾತ್ಸವ್
ರಾಬರಿ-ಥ್ರಿಲ್ಲರ್ ರೆಟ್ರೋ ಥೀಮ್ ಹೊಂದಿರುವ ಸಿನಿಮಾ 'ರಹದಾರಿ'. ಸೂಪರ್ ಕಾಪ್ ಮತ್ತು ರಾಬರಿ ತಂಡದ ನಡೆಯುವ ಹಾವು-ಏಣಿ ಆಟವೇ ಈ ಚಿತ್ರ. ಪೊಲೀಸ್ ಪಾತ್ರದಲ್ಲಿ ಶ್ವೇತಾ ನಟಿಸಿದರೆ, ಅವರೊಂದಿಗೆ ಸುಪ್ರೀತಾ ಕೂಡ ಇರಲಿದ್ದಾರೆ.
'ರಹದಾರಿ'
ಮೂಲಕ
ಚಿತ್ರರಂಗ
ಪ್ರವೇಶಿಸಿದ
'ಸೀತಾ
ವಲ್ಲಭ'
ನಾಯಕಿ
ಈ ಹಿಂದೆ 'ಒಂದ್ ಕಥೆ ಹೇಳ್ಲಾ' ಚಿತ್ರವನ್ನ ನಿರ್ದೇಶನ ಮಾಡಿದ್ದ ಗಿರೀಶ್ ವೈರಮುಡಿ ಇದೀಗ 'ರಹದಾರಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯದಲ್ಲೇ 'ರಹದಾರಿ' ಚಿತ್ರದ ಶೂಟಿಂಗ್ ಶುರುವಾಗಲಿದೆ.