For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಅಭಿನಯದ 'ರಾಬರ್ಟ್' ಚಿತ್ರದಲ್ಲಿ ಈ ಬ್ಯೂಟಿ ಕೂಡ ಇರ್ತಾರೆ ಗುರು.!

  |

  2019 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತೂ ಹ್ಯಾಟ್ರಿಕ್ ಹಿಟ್ ಕೊಟ್ಟರು. 'ಯಜಮಾನ', 'ಕುರುಕ್ಷೇತ್ರ', 'ಒಡೆಯ' ಚಿತ್ರಗಳು ಯಶಸ್ವಿಯಾದ ಮೇಲೆ 'ದಾಸ' ದರ್ಶನ್ ಕೈಗೆತ್ತಿಕೊಂಡ ಸಿನಿಮಾ 'ರಾಬರ್ಟ್'.

  ತರುಣ್ ಸುಧೀರ್ ನಿರ್ದೇಶನ ಮಾಡುತ್ತಿರುವ 'ರಾಬರ್ಟ್' ಚಿತ್ರದ ಚಿತ್ರೀಕರಣ ಸದ್ಯ ಬಿರುಸಿನಿಂದ ಸಾಗುತ್ತಿದೆ. ಪುಣ್ಯ ಕ್ಷೇತ್ರ ವಾರಣಾಸಿಯಲ್ಲಿ 'ರಾಬರ್ಟ್' ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

  'ರಾಬರ್ಟ್' ಚಿತ್ರದಲ್ಲಿ ದರ್ಶನ್ ಜೊತೆಗೆ ಕನ್ನಡತಿ ಆಶಾ ಭಟ್ ಜೋಡಿಯಾಗಿ ನಟಿಸುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಸರ್ಪ್ರೈಸ್ ಏನು ಅಂದ್ರೆ, ಸಿನಿಮಾದಲ್ಲಿ ದರ್ಶನ್ ಗಾಗಿ ಆಶಾ ಭಟ್ ಜೊತೆಗೆ ಮತ್ತೋರ್ವ ನಾಯಕಿ ಕೂಡ ಇರಲಿದ್ದಾರೆ.

  'ರಾಬರ್ಟ್' ಚಿತ್ರಕ್ಕಾಗಿ ದರ್ಶನ್ ತ್ಯಾಗ ಮಾಡಿದ್ದೇನು?'ರಾಬರ್ಟ್' ಚಿತ್ರಕ್ಕಾಗಿ ದರ್ಶನ್ ತ್ಯಾಗ ಮಾಡಿದ್ದೇನು?

  ಯಾರಪ್ಪಾ ಆ ನಾಯಕಿ ಅಂದ್ರೆ, ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಸಿನಿಮಾದ ನಟಿ ಸೋನಲ್ ಮಂಥೆರೋ. ಹೌದು, 'ಪಂಚತಂತ್ರ' ಚಿತ್ರದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ನಟಿ ಸೋನಲ್ ಇದೀಗ 'ರಾಬರ್ಟ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

  'ಪಂಚತಂತ್ರ' ಚಿತ್ರದಲ್ಲಿನ ಸೋನಲ್ ನಟನೆ ನೋಡಿದ್ಮೇಲೆ, ನಟಿ ಸೋನಲ್ ಗೆ 'ರಾಬರ್ಟ್' ಚಿತ್ರದಲ್ಲಿ ತರುಣ್ ಸುಧೀರ್ ಅವಕಾಶ ನೀಡಿದ್ದಾರೆ. ದರ್ಶನ್ ಜೊತೆಗೆ ತೆರೆಹಂಚಿಕೊಳ್ಳುತ್ತಿರುವುದಕ್ಕೆ ಸೋನಲ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

  English summary
  Kannada Actress Sonal Monteiro plays important role in Kannada Movie Robert.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X