»   » 'ಜೀರ್ಜಿಂಬೆ..ಜೀರ್ಜಿಂಬೆ' ಎನ್ನುತ್ತಿದ್ದಾರೆ ಬೆಳದಿಂಗಳ ಬಾಲೆ ಸುಮನ್

'ಜೀರ್ಜಿಂಬೆ..ಜೀರ್ಜಿಂಬೆ' ಎನ್ನುತ್ತಿದ್ದಾರೆ ಬೆಳದಿಂಗಳ ಬಾಲೆ ಸುಮನ್

Posted By:
Subscribe to Filmibeat Kannada

ಒಂದು ಕಾಲದಲ್ಲಿ 'ಬೆಳದಿಂಗಳ ಬಾಲೆ'ಯಾಗಿ ಎಲ್ಲರ ಮನಗೆದ್ದಿದ್ದ ನಟಿ ಸುಮನ್ ನಗರ್ಕರ್ ಅವರು ಸುಮಾರು ಒಂದು ದಶಕದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರ 'ರೆ..' ಚಿತ್ರದ ಮೂಲಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದರು.

'ರೆ...' ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸುಮನ್ ಅವರು ಇದೀಗ ಮತ್ತೆ ಮಕ್ಕಳ ಚಿತ್ರವೊಂದರಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ವಾಪಸಾಗಿದ್ದಾರೆ. ಹೌದು 'ಜೀರ್ಜಿಂಬೆ' ಎಂಬ ಮಕ್ಕಳ ಚಿತ್ರದಲ್ಲಿ ಸುಮನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.['ಬೆಳದಿಂಗಳ ಬಾಲೆ' ಪ್ರತ್ಯಕ್ಷ; ಮತ್ತೆ ತೆರೆಮೇಲೆ ಸುಮನ್ ನಗರ್ಕರ್]


Kannada Actress Suman Nagarkar in Kannada movie 'Jeerjimbe'

'ಪುಟ್ಟ ಹುಡುಗಿಯೊಬ್ಬಳು ಸೈಕಲ್ ತುಳಿಯಲು ಕಲಿಯುವ ಹಾಗೂ ಅದಕ್ಕಾಗಿ ಶ್ರಮಿಸುವ ಕಥೆ ಇರುವ ಸಿಂಪಲ್ ಮತ್ತು ಸುಂದರ ಚಿತ್ರವೇ 'ಜೀರ್ಜಿಂಬೆ'. 'ಚಿತ್ರದ ಪಾತ್ರ ಯಾವುದೇ ಇರಲಿ ಅದರಲ್ಲಿ ಒಂದು ಅರ್ಥವಿದ್ದು, ಅದಕ್ಕೆ ಜೀವ ತುಂಬಬಲ್ಲೆ ಅಂತ ಅನಿಸಿದ್ರೆ ಅದೆಷ್ಟೇ ಸಣ್ಣ ಪಾತ್ರವಾದರೂ ಸರಿ. ನಾನು ಆ ಚಿತ್ರದಲ್ಲಿ ಅಭಿನಯಿಸುತ್ತೇನೆ' ಎನ್ನುತ್ತಾರೆ ನಟಿ ಸುಮನ್ ನಗರ್ಕರ್.


ನವ ಪ್ರತಿಭೆ ಕಾರ್ತಿಕ್ ಸರಗೂರು ನಿರ್ದೇಶನ ಮಾಡಿರುವ 'ಜೀರ್ಜಿಂಬೆ' ಚಿತ್ರದಲ್ಲಿ ನಟಿ ಸುಮನ್ ಅವರು ಮಕ್ಕಳ ಜೊತೆ ಚೆನ್ನಾಗಿ ಬೆರೆತು ಶೂಟಿಂಗ್ ನಲ್ಲಿ ಭಾಗವಹಿಸಿ ಎಲ್ಲವನ್ನೂ ಸುಂದರವಾಗಿ ನಡೆಸಿಕೊಟ್ಟಿದ್ದಾರೆ.


ಇನ್ನು ನಟಿ ಸುಮನ್ ಅವರು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ 'ಇಷ್ಟಕಾಮ್ಯ' ಚಿತ್ರದಲ್ಲಿ ಕೂಡ ಒಂದು ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾ ಇದೇ ವಾರ ಭರ್ಜರಿಯಾಗಿ ಎಲ್ಲಾ ಕಡೆ ತೆರೆ ಕಾಣಲಿದೆ. 'ಜೀರ್ಜಿಂಬೆ' ಚಿತ್ರದ ಪತ್ರಿಕಾಗೋಷ್ಠಿಯ ಚಿತ್ರಗಳನ್ನು ನೋಡಿ ಕೆಳಗಿನ ಸ್ಲೈಡುಗಳಲ್ಲಿ..


-
-
-
-
-
-
'ಇಷ್ಟಕಾಮ್ಯ' ಚಿತ್ರದಲ್ಲಿ 'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

'ಇಷ್ಟಕಾಮ್ಯ' ಚಿತ್ರದಲ್ಲಿ 'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

-'ಇಷ್ಟಕಾಮ್ಯ' ಚಿತ್ರದಲ್ಲಿ 'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

-'ಇಷ್ಟಕಾಮ್ಯ' ಚಿತ್ರದಲ್ಲಿ 'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

-'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

-'ಬೆಳದಿಂಗಳ ಬಾಲೆ' ಸುಮನ್ ನಗರ್ಕರ್

English summary
Kannada actress Suman Nagarkar is making a comeback to the entertainment industry after 15 long years. The actress who has returned to acting will be seen in upcoming movies 'Ishtakamya' directed by Nagathihalli Chandrashekar. Suman who is currently based in California, will be back in Bengaluru in March to shoot for Karthik Saragur's kannada venture 'Jeerjimbe'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada