Just In
Don't Miss!
- Automobiles
ಎಲೆಕ್ಟ್ರಿಕ್ ವಾಹನಗಳ ಖರೀದಿ ಹೆಚ್ಚಿಸಲು ಹೊಸ ಯೋಜನೆ ಚಾಲನೆ ನೀಡಿದ ಕ್ರೆಡರ್
- News
ಪ್ರಶ್ನೆ ಪತ್ರಿಕೆ ಸಮೇತ ಸಿಸಿಬಿ ಬಲೆಗೆ ಬಿದ್ದ ಲೀಕಾಸುರರು !
- Sports
ಐಎಸ್ಎಲ್: ಪ್ಲೇ ಆಫ್ ಕನಸಲ್ಲಿರುವ ಜೆಮ್ಷೆಡ್ಪುರಕ್ಕೆ ಹೈದರಾಬಾದ್ ಸವಾಲು
- Lifestyle
ಮಕರ ರಾಶಿಗೆ ಶುಕ್ರನ ಸಂಚಾರ: ಯಾವೆಲ್ಲಾ ರಾಶಿಗೆ ಶುಕ್ರದೆಸೆ
- Finance
ಮೂರನೇ ತ್ರೈಮಾಸಿಕದಲ್ಲಿ ಭಾರೀ ಲಾಭಗಳಿಸಿದ ರಿಲಯನ್ಸ್ ಇಂಡಸ್ಟ್ರೀಸ್
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮತ್ತೆ ತೆಲುಗು ಚಿತ್ರರಂಗದತ್ತ ಹೊರಟ 'ಯಜಮಾನ'ನ ಬಸಣ್ಣಿ
ನಟಿ ತಾನ್ಯ ಹೋಪ್ ಈಗ ಸ್ಯಾಂಡಲ್ ವುಡ್ ಬಸಣ್ಣಿ ಅಂತಾನೆ ಖ್ಯಾತಿ ಗಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದಲ್ಲಿ ಬಸಣ್ಣಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಕನ್ನಡ ಚಿತ್ರಪ್ರೇಕ್ಷಕರ ಮನ ಕದ್ದಿದ್ದರು ತಾನ್ಯಾ. 'ಯಜಮಾನ' ಚಿತ್ರದ ನಂತರ ತಾನ್ಯ ಸ್ಯಾಂಡಲ್ ವುಡ್ ನ ಬ್ಯುಸಿಯಸ್ಟ್ ನಟಿಯಾಗಿದ್ದಾರೆ.
ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವ ತಾನ್ಯಾ ಈಗ ಮತ್ತೆ ತೆಲುಗು ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಹೌದು, ಚಂದನವನದ ಬಹು ನಿರೀಕ್ಷೆಯ 'ಅಮರ್' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿರುವ ತಾನ್ಯಾ ಈಗ ತೆಲುಗು ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಸಿನಿ ಇಂಡಸ್ಟ್ರಿಗೆ ಶಾಕ್ ನೀಡಿರುವ ತಾನ್ಯ ಹೋಪೆ ಫ್ಯಾಮಿಲಿ ಬ್ಯಾಕ್ ಗ್ರೌಂಡ್ ಏನು?
ತೆಲುಗು ನಟ ಸಂದೀಪ್ ಕಿಶನ್ ನಾಯಕನಾಗಿ ಅಭಿನಯಿಸುತ್ತಿರುವ ಇನ್ನು ಹೆಸರಿಡದ ಸಿನಿಮಾಗೆ ಕನ್ನಡತಿ ತಾನ್ಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರಕ್ಕೆ ಮೋಹನ್ ಚೊಚ್ಚಲ ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ತಿಂಗಳು ಜೂನ್ ಮೊದಲ ವಾರದಲ್ಲಿ ಚಿತ್ರ ಸೆಟ್ಟೇರಲಿದ್ದು ಚಿತ್ರೀಕರಣ ಕೂಡ ಪ್ರಾರಂಭವಾಗಲಿದೆ.
ತಾನ್ಯಾ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದರು. ಮೊದಲು ತೆಲುಗಿನ 'ಅಪ್ಪಾಟ್ಲೋ ಒಕದುಂದೇವಾಡು' ಸಿನಿಮಾದಲ್ಲಿ ಕಾಣಿಸಿಕೊಂಡ ತಾನ್ಯಾ ನಂತರ 'ಪಟೇಲ್ ಎಸ್ ಐ ಆರ್', 'ಪೇಪರ್ ಬಾಯ್' ಸಿನಿಮಾಗಳಲ್ಲಿ ಮಿಂಚಿದ್ದಾರೆ. ಇನ್ನು 'ತದಮ್' ಮೂಲಕ ತಮಿಳು ಚಿತ್ರರಂಗದಲ್ಲೂ ಕಾಣಿಸಿಕೊಂಡಿದ್ದಾರೆ.
ಕನ್ನಡದಲ್ಲಿ 'ಯಜಮಾನ' ಚಿತ್ರ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಅಮರ್' ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಜೊತೆಗೆ ಚಿರಂಜೀವಿ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಖಾಕಿ' ಸಿನಿಮಾ ತಾನ್ಯಾ ಕೈಯಲ್ಲಿದೆ. ಇದ್ರ ಜೊತೆಗೆ ಮತ್ತೆ ತೆಲುಗು ಚಿತ್ರರಂಗದಲ್ಲೂ ಮಿಂಚುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.