»   » ಚೊಚ್ಚಲು ಮಗುವಿನ ನಿರೀಕ್ಷೆಯಲ್ಲಿ ತಾರಾ-ವೇಣು ದಂಪತಿ

ಚೊಚ್ಚಲು ಮಗುವಿನ ನಿರೀಕ್ಷೆಯಲ್ಲಿ ತಾರಾ-ವೇಣು ದಂಪತಿ

Posted By:
Subscribe to Filmibeat Kannada
ಅಚ್ಚ ಕನ್ನಡದ ನಟಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ, ವಿಧಾನ ಪರಿಷತ್ ಸದಸ್ಯೆ ಹಾಗೂ ಖ್ಯಾತ ಛಾಯಾಗ್ರಾಹಕ ಎಚ್ ಸಿ ವೇಣು ಪತ್ನಿ ತಾರಾ ತಾಯಿಯಾಗಲಿದ್ದಾರೆ.

ಈ ವಿಷಯವನ್ನು ಸ್ವತಃ ತಾರಾ ತಮ್ಮ ಪತಿ ವೇಣು ಜೊತೆಯಲ್ಲಿ ಬಂದು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದಾರೆ. ಮದುವೆಯಾಗಿ ಸಾಕಷ್ಟು ವರ್ಷಗಳು ಕಳೆದ ನಂತರ ತಾರಾ ಹಾಗೂ ವೇಣು ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಫೆಬ್ರವರಿಯಲ್ಲಿ ತಾರಾ-ವೇಣು ಮಡಿಲಿಗೆ ಪುಟ್ಟ ಕಂದಮ್ಮ ಬರಲಿದೆ.

2005, ಫೆಬ್ರವರಿಯಲ್ಲಿ ಛಾಯಾಗ್ರಾಹಕ ವೇಣುವನ್ನು ಮೆಚ್ಚಿ ಮದುವೆಯಾಗಿರುವ ತಾರಾ, ಈಗ ಕಂದನನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಡಾಕ್ಟರ್ ಕೊಟ್ಟ ಡೇಟ್ ಪ್ರಕಾರ, 2013ರ ಫೆಬ್ರವರಿ 6 ರಂದು ಮಗುವಿಗೆ ತಾರಾ ಜನ್ಮನೀಡಲಿದ್ದಾರೆ.

ಫೆಬ್ರವರಿಗೆ ಇನ್ನೇನು ನಾಲ್ಕೇ ತಿಂಗಳು, ನಂತರ ತಾರಾ 'ತಾರಮ್ಮ' ಆಗಲಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲಿ ತಾರಾ ವೇಣುವನ್ನು ಮದುವೆಯಾಗಿದ್ದಾರೆ.

ತಾರಾ ಪತಿ ವೇಣುವೀಗ ಸಹಜವಾಗಿಯೇ ಭಾರಿ ಖುಷಿಯಲ್ಲಿದ್ದಾರಂತೆ. ತಾರಾಗೆ ಹೆಚ್ಚು ಕೆಲಸ ಮಾಡಲು ಬಿಡದ ವೇಣು, ಸಿನಿಮಾಗಳಲ್ಲಿ ನಟಿಸುವುದನ್ನು ಸದ್ಯಕ್ಕೆ ನಿಲ್ಲಿಸುವುದು ಒಳ್ಳೆಯದೆಂಬ ಸಲಹೆ ನೀಡಿದ್ದಾರಂತೆ.

ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸೂರ್ಯ ನಾಯಕತ್ವದ ತಮಿಳು 'ಮಾತ್ರಾನ್' ಚಿತ್ರದಲ್ಲಿ ಸೂರ್ಯನಿಗೆ ತಾಯಿಯಾಗಿ ನಟಿಸಿದ ತಾರಾಗೆ ಈಗ ತಮಿಳು ಹಾಗೂ ತೆಲುಗು ಚಿತ್ರರಂಗದಿಂದಲೂ ಭಾರಿ ಬೇಡಿಕೆ ಬರುತ್ತಿದೆಯಂತೆ.

ಇತ್ತ, ತಾರಾ ಅಧ್ಯಕ್ಷೆಯಾದ ನಂತರ ಕರ್ನಾಟಕ ಚಲನಚಿತ್ರ ಅಕಾಡೆಮಿ ಕೆಲಸಗಳು ಅಂದುಕೊಂಡಂತೆ ನಡೆಯುತ್ತಿಲ್ಲ ಎಂದು ತಮ್ಮ ಮೇಲೆ ಮಾಡಲಾಗಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ತಾರಾ, ಪಾದರಸದಂತೆ ಓಡಾಡಲು ಸಜ್ಜಾಗಿದ್ದಾರೆ.

ಈ ಮೊದಲು ಕರ್ನಾಟಕದಲ್ಲಷ್ಟೇ ನಡೆಯುತ್ತಿದ್ದ 'ಬೆಳ್ಳಿಹೆಜ್ಜೆ' ಕಾರ್ಯಕ್ರಮವನ್ನು ತಾರಾ ದೆಹಲಿಗೂ ವಿಸ್ತರಿಸಲಿದ್ದಾರೆ. ಈ ಮೂಲಕ ತಮ್ಮ ಮೇಲಿರುವ ಆರೋಪಕ್ಕೆ ಪ್ರತ್ಯುತ್ತರ ಕೊಡಲಿದ್ದಾರೆ ತಾರಾ.

ಅದೇನೇ ಇರಲಿ, ಮುಂದಿನ ವರ್ಷ ತಾರಾ ತಾಯಿಯಾಗುತ್ತಿದ್ದಾರೆ. ತಾರಾ ಹಾಗೂ ವೇಣು ದಂಪತಿಗಳಿಗೆ ಅಭಿನಂದನೆ ಸಲ್ಲಿಸುತ್ತಿರುವ ಅವರ ಅಭಿಮಾನಿಗಳು, ಕನ್ನಡ ಸಿನಿಪ್ರೇಕ್ಷಕರೊಟ್ಟಿಗೆ ನಮ್ಮ 'ಒನ್ ಇಂಡಿಯಾ ಕನ್ನಡ'ದ ಕಡೆಯಿಂದಲೂ ಈ 'ತಾರಾ ದಂಪತಿ'ಗೆ ಕಂಗ್ರಾಟ್ಸ್... (ಒನ್ ಇಂಡಿಯಾ ಕನ್ನಡ)

English summary
Kannada Actress, Karnataka film academy president Tara is expecting. 
 National award winning actress Tara shared the NEWS with Media Persons 
 close to her in Bangalore 
 
Please Wait while comments are loading...