Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಸ್ಪತ್ರೆ ಸೇರಿದ ನಟಿ ವಿಜಯಲಕ್ಷ್ಮಿ: ಚಿತ್ರರಂಗದ ಸಹಾಯ ಕೇಳಿದ ಸಹೋದರಿ
ಒಂದು ಕಾಲದ ಟಾಪ್ ನಟಿ ವಿಜಯಲಕ್ಷ್ಮಿ ಬದುಕಿನಲ್ಲಿ ಒಂದರ ಹಿಂದೊಂದು ಕಷ್ಟ ಬರ್ತಾನೆ ಇದೆ. ಇಷ್ಟು ದಿನ ವಿಜಯಲಕ್ಷ್ಮಿ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಕೊಡಿಸಲಾಗದಂತಹ ಕಷ್ಟದ ಪರಿಸ್ಥಿತಿಯಲ್ಲಿದ್ದರು.
ಈಗ ಸ್ವತಃ ವಿಜಯಲಕ್ಷ್ಮಿ ಅವರೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ಬಂದಿದೆ. ತೀವ್ರ ಅಸ್ವಸ್ಥರಾದ ವಿಜಯಲಕ್ಷ್ಮಿ, ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಕಡೆ ಅಕ್ಕ ಆಸ್ಪತ್ರೆಯ ಬೆಡ್ ಮೇಲೆ ಚಿಕಿತ್ಸೆ ಪಡೆಯುತ್ತಿದ್ದರೇ, ಈ ಕಡೆ ವಿಜಯಲಕ್ಷ್ಮಿ ಸಹೋದರಿ ಉಷಾದೇವಿ ಅವರು ಮಾಧ್ಯಮದ ಮುಂದೆ ಕಣ್ಣೀರಾಕಿದ್ದಾರೆ. ಚಿಕಿತ್ಸೆ ಕೊಡಿಸಲು ಆರ್ಥಿಕವಾಗಿ ಅಸಹಾಯಕರಾಗಿದ್ದೇವೆ, ಚಿತ್ರರಂಗದವರು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದಾರೆ. ಮುಂದೆ ಓದಿ....

ಸುಸ್ತು, ಹೈ ಬಿಪಿಯಿಂದ ಅಯಾಸ
ಹೈ ಬಿಪಿ ಮತ್ತು ತೀವ್ರ ಸುಸ್ತಾದ ಕಾರಣ ನಟಿ ವಿಜಯಲಕ್ಷ್ಮಿ ಅಸ್ವಸ್ಥರಾದ ಘಟನೆ ಗುರುವಾರ ನಡೆದಿದೆ. ತಕ್ಷಣ ಅವರನ್ನ ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ಸಹೋದರಿ ಉಷಾದೇವಿ ಆಕೆಯನ್ನ ಆಸ್ಪತ್ರೆಗೆ ಸೇರಿಸಿದ್ದಾರೆ. ಸದ್ಯ ಚಿಕಿತ್ಸೆ ನೀಡಿದ್ದು, ಅರಾಮಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಹಾಯ ಮಾಡಿ
''ಇಷ್ಟು ದಿನ ತಾಯಿಗೆ ಹುಷಾರಿಲ್ಲ ಅಂತ ಚಿಕಿತ್ಸೆ ಕೊಡಿಸುತ್ತಿದ್ವಿ. ಈಗ ಸಡನ್ ಆಗಿ ತಂಗಿಗೂ ಹುಷಾರಿಲ್ಲದಂತಾಗಿದೆ. ಇದ್ದ ಹಣವನ್ನೆಲ್ಲ ತಾಯಿಗೆ ಖರ್ಚು ಮಾಡಿದ್ದೇವೆ. ಈಗ ತಂಗಿಗೆ ಚಿಕಿತ್ಸೆ ಕೊಡಿಸಲು ದುಡ್ಡಿಲ್ಲ. ಈಗ ನಮಗೆ ಇಂಡಸ್ಟ್ರಿಯವರ ಸಹಾಯ ಬೇಕಿದೆ'' ಎಂದು ಉಷಾದೇವಿ ಕಣ್ಣೀರಿಟ್ಟಿದ್ದಾರೆ.
ವಿಜಯಲಕ್ಷ್ಮಿ
ಕುಟುಂಬಕ್ಕೆ
ನಟಿ
ಜಯಪ್ರದ
ಸಹೋದರ
ಕೊಟ್ಟ
ಯಮಯಾತನೆ
ಅಷ್ಟಿಷ್ಟಲ್ಲ.!

ಇಂಡಸ್ಟ್ರಿ ನೆರವಾಗಬೇಕಿದೆ
ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲ ನಟಿಸಿ, ಪ್ರೇಕ್ಷಕರನ್ನ ರಂಜಿಸಿರುವ ಇಂತಹ ಕಲಾವಿದರ ಬದುಕು, ಕೆಲವೊಮ್ಮೆ ಇಂತಹ ಸ್ಥಿತಿಗೆ ಬರುತ್ತೆ. ಸಂದರ್ಭಗಳಲ್ಲಿ ಸಿನಿಮಾ ಇಂಡಸ್ಟ್ರಿಯವರು, ಸಹ ಕಲಾವಿದರು ಸಹಾಯಕ್ಕೆ ಬರಬೇಕು. ಇದು ಅವರ ಕರ್ತವ್ಯ ಕೂಡ ಹೌದು.
ನಟಿ
ವಿಜಯಲಕ್ಷ್ಮಿ
ಆತ್ಮಹತ್ಯೆಗೆ
ಪ್ರಯತ್ನ
ಪಟ್ಟಿದ್ದು
ನಿಜ.!
ಕಹಿ
ಅಧ್ಯಾಯ
ಇಲ್ಲಿದೆ...

ವಿಜಯಲಕ್ಷ್ಮಿ ಅಭಿನಯದ ಚಿತ್ರಗಳು
ಅಂದ್ಹಾಗೆ, ವಿಜಯಲಕ್ಷ್ಮಿ ಅವರು ಕನ್ನಡದಲ್ಲಿ ಕೊನೆಯದಾಗಿ 2011ರಲ್ಲಿ 'ನಾನಲ್ಲ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿಲ್ಲ. ಈ ಮಧ್ಯೆ, ತಮಿಳು ಚಿತ್ರಗಳಲ್ಲಿ ನಟಿಸುತ್ತಿದ್ದ ವಿಜಯಲಕ್ಷ್ಮಿ ಪೋಷಕ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದರು. 'ನಾಗಮಂಡಲ', 'ಜೋಡಿಹಕ್ಕಿ', 'ಭೂಮಿ ತಾಯಿಯ ಚೊಚ್ಚಲ ಮಗ', 'ಸ್ವಸ್ತಿಕ್', 'ಹಬ್ಬ', 'ಸೂರ್ಯ ವಂಶ' ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ ವಿಜಯಲಕ್ಷ್ಮಿ.