»   » ಕನ್ನಡದ ಯುವ ನಟಿ ವಿಂಧ್ಯಾ ಆತ್ಮಹತ್ಯೆಗೆ ಯತ್ನ

ಕನ್ನಡದ ಯುವ ನಟಿ ವಿಂಧ್ಯಾ ಆತ್ಮಹತ್ಯೆಗೆ ಯತ್ನ

Posted By:
Subscribe to Filmibeat Kannada

ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಜೀವನದಲ್ಲಿ ತೀವ್ರವಾಗಿ ಮನನೊಂದಿರುವ ಕನ್ನಡದ ಯುವ ನಟಿ ವಿಂಧ್ಯಾ ಅವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ಮಂಗಳವಾರ (ಮಾ.4) ಬೆಳಗ್ಗೆ ನಡೆದಿದೆ. ಸದ್ಯಕ್ಕೆ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. [ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

ಇನ್ನಷ್ಟೇ ಬಿಡುಗಡೆಯಾಗಬೇಕಿರುವ 'ಮನದ ಮರೆಯಲ್ಲಿ' ಚಿತ್ರದಲ್ಲಿ ವಿಂಧ್ಯಾ ಅವರು ಅಭಿನಯಿಸಿದ್ದಾರೆ. ಮನೆಯಲ್ಲಿದ್ದಾಗ ಸುಮಾರು 40ಕ್ಕೂ ಹೆಚ್ಚು ನಿದ್ದೆ ಮಾತ್ರೆಗಳನ್ನು ವಿಂಧ್ಯಾ ಸೇವಿಸಿದ್ದಾರೆ ಎಂದು ಕನ್ನಡ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಹೇಳಲಾಗುತ್ತಿದೆ. ಪ್ರಸ್ತುತ ಅವರ ಸ್ಥಿತಿ ಚಿಂತಾಜನಕವಾಗಿದ್ದು ಕೋಮಾ ಹಂತದಲ್ಲಿದ್ದಾರೆ ಎನ್ನುತ್ತವೆ ಮೂಲಗಳು. ['ಮನದ ಮರೆಯಲ್ಲಿ' ಅಣ್ಣಾವ್ರ ಆದರ್ಶ ಸಾಕಾರ]

Actress Vindhya with her parents

ಗೆಳೆಯನಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪಗಳು ವಿಂಧ್ಯಾ ವಿರುದ್ಧ ಪದೇಪದೇ ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಅವರು ತೀವ್ರವಾಗಿ ಮನನೊಂದು ಮೂರು ದಿನಗಳಿಂದ ಖಿನ್ನತೆಗೆ ಒಳಗಾಗಿದ್ದರಂತೆ. ಕಡೆಗೆ ವಿಂಧ್ಯಾ ಅವರು ನಿದ್ದೆ ಮಾತ್ರೆಗೆ ಶರಣಾಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕೂಡಲೆ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ 'ಮನದ ಮರೆಯಲ್ಲಿ' ಚಿತ್ರದ ನಿರ್ಮಾಪಕ ಮಹೇಶ್ ಗೌಡ ಅವರು, "ವಿಂಧ್ಯಾ ಅವರ ತಂದೆತಾಯಿಗೆ ಕಣ್ಣು ಕಾಣುವುದಿಲ್ಲ. ವಿಂಧ್ಯಾ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಕೂಡಲೆ ವಿಷಯವನ್ನು ಅಕ್ಕಪಕ್ಕದವರಿಗೆ ತಿಳಿಸಿ ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ."

ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿರುವ ವಿಂಧ್ಯಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಮಂಜುನಾಥ್ ಎಂಬುವವರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಆಗಾಗ ಜೊತೆಯಲ್ಲಿ ಸಿನಿಮಾಗೂ ಹೋಗುತ್ತಿದ್ದರು. ಇತ್ತೀಚೆಗೆ ಯಾಕೋ ಇಬ್ಬರ ನಡುವೆ ಕಿರಿಕಿರಿ ಆಗುತ್ತಿತ್ತು ಎಂಬ ವಿವರಗಳನ್ನೂ ಮಹೇಶ್ ಗೌಡ ಖಾಸಗಿ ವಾಹಿನಿ ಜೊತೆ ಹಂಚಿಕೊಂಡಿದ್ದರು.

ಇತ್ತೀಚೆಗೆ ಅವರ ಇಬ್ಬರ ನಡುವಿನ ಸಮಸ್ಯೆಯನ್ನೂ ಕುಳಿತು ಬಗೆಹರಿಸಿದ್ದೆವು. ಈಗ ಏನಾಯಿತೋ ಏನೋ ಗೊತ್ತಾಗುತ್ತಿಲ್ಲ. ನಮಗೂ ಈಗಷ್ಟೇ ಸುದ್ದಿ ತಿಳಿದಿದ್ದು ಆಸ್ಪತ್ರೆಗೆ ಹೋಗುತ್ತಿದ್ದೇವೆ ಎಂದಿದ್ದಾರೆ ಮಹೇಶ್ ಗೌಡ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

English summary
Budding Kannada actress Vindhya from 'Manada Mareyalli' fame, has attempted suicide on Tuesday (4th March) morning. The actress is admitted in a Bowring hospital in Bangalore after she attempted suicide by consuming excess sleeping pills and treatment is going on.
Please Wait while comments are loading...