For Quick Alerts
  ALLOW NOTIFICATIONS  
  For Daily Alerts

  ಆತ್ಮಹತ್ಯೆಗೆ ಯತ್ನಿಸಿದ್ದ ನಟಿ ವಿಂಧ್ಯಾ ಪರಿಸ್ಥಿತಿ ಗಂಭೀರ

  By Rajendra
  |

  ಬಾಯ್ ಫ್ರೆಂಡ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಕನ್ನಡದ ಉದಯೋನ್ಮುಖ ತಾರೆ ಶ್ರೀವಿಂಧ್ಯಾ ಪರಿಸ್ಥಿತಿ ಗಂಭೀರವಾಗಿದೆ. ಅವರ ತಾಯಿ ನಾಗಮ್ಮ ಅವರು ಮಧುಮೇಹಕ್ಕೆ ಬಳಸುತ್ತಿದ ಮಾತ್ರೆಗಳನ್ನು ಏಕಾಏಕಿ 40-50 ಸೇವಿಸಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು.

  ಸದ್ಯಕ್ಕೆ ಅವರಿಗೆ ಬೆಂಗಳೂರಿನ ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲಿನ ವೈದ್ಯಾಧಿಕಾರಿ ಡಾ.ಖಾದ್ರಿ ಅವರು ವಿಂಧ್ಯಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವಿವರ ನೀಡಿದ್ದಾರೆ. ಸದ್ಯಕ್ಕೆ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]

  ವಿಂಧ್ಯಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ. ಎಪ್ಪತ್ತೆರಡು ಗಂಟೆಗಳ ಕಾಲ ಅಬ್ಸರ್ ವೇಷನ್ ನಲ್ಲಿ ಇಡಲಾಗಿದೆ. ಈಗಲೇ ಅವರ ಆರೋಗ್ಯದ ಬಗ್ಗೆ ಏನೂ ಹೇಳಿಲಿಕ್ಕೆ ಆಗುವುದಿಲ್ಲ ಎಂದಿದ್ದಾರೆ ಬೌರಿಂಗ್ ಆಸ್ಪತ್ರೆಯ ವೈದ್ಯಾಧಿಕಾರಿಗಳು.

  ಶ್ರೀಕಾಂತ್ ಉರುಫ್ ಶ್ರೀಕಿ ಜೊತೆ ನಾಯಕಿಯಾಗಿ ಅಭಿನಯಿಸಿರುವ 'ಮನದ ಮರೆಯಲ್ಲಿ' ಚಿತ್ರ ಇನ್ನೇನು ಬಿಡುಗಡೆಯಾಗಬೇಕಿದೆ. ಮಂಜುನಾಥ ಎಂಬ ಆಕೆಯ ಬಾಯ್ ಫ್ರೆಂಡ್ ಕೊಡುತ್ತಿದ್ದ ಕಿರುಕುಳದಿಂದ ಬೇಸತ್ತು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

  English summary
  The condition of budding Kannada actress Vindhya, who was hospitalised on 4th March attempted suicide by consuming excess sugar treatment pills, has turned critical. Bowring and Lady Curzon Hospital doctors told, Vindhya were kept in observation for 72 hours. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X