For Quick Alerts
  ALLOW NOTIFICATIONS  
  For Daily Alerts

  ಪರಭಾಷೆಗೆ ಪರೇಡ್ ಮಾಡುತ್ತಿರುವ ಕನ್ನಡ ನಟಿಯರು

  |

  ಅದೊಂದು ಟ್ರೆಂಡ್ ಇತ್ತು. ಕನ್ನಡ ಸ್ಟಾರ್ ನಟರ ಚಿತ್ರಗಳಿಗೆ ಪರಭಾಷೆಯಿಂದ ನಾಯಕಿಯರನ್ನ ಕರೆಸುವುದು. ಸದ್ಯಕ್ಕೆ ಈ ಟ್ರೆಂಡ್ ಕಮ್ಮಿಯಾಗಿದ್ದು, ಕನ್ನಡದ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗ್ತಿದೆ.

  ಕೆಜಿಎಫ್ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ, ದರ್ಶನ್ ಒಡೆಯ ಚಿತ್ರದಲ್ಲಿ ಕೊಡಗು ಮೂಲದ ಹೊಸ ಹುಡುಗಿ, ಹೀಗೆ ಹೊಸ ಕಲಾವಿದರನ್ನ ಪರಿಚಯಿಸುವ ಪದ್ಧತಿಯೂ ಹುಟ್ಟಿಕೊಂಡಿದೆ. ಹೀಗಿದ್ದರೂ ಕನ್ನಡ ನಟಿಯರು ಪರಭಾಷೆಗೂ ಹೋಗುತ್ತಿದ್ದ ಟ್ರೆಂಡ್ ಅಪರೂಪವಾಗಿತ್ತು.

  ಸಮಂತಾ ಬಗ್ಗೆ ಶ್ರದ್ಧಾ ಶ್ರೀನಾಥ್ ಅಚ್ಚರಿ ಕಾಮೆಂಟ್, ತೆಲುಗು ಫ್ಯಾನ್ಸ್ ಫುಲ್ ಗರಂ!

  ಇದೀಗ, ಒಬ್ಬರ ಹಿಂದೆ ಮತ್ತೊಬ್ಬರಂತೆ ಕನ್ನಡ ನಟಿಯರು ಬೇರೆ ಭಾಷೆ ಕಡೆ ಹೆಜ್ಜೆಯಿಡುತ್ತಿದ್ದಾರೆ. ಹೋಗಿ ಸಿನಿಮಾ ಮಾಡಿ ಬಂದರೂ ಅಚ್ಚರಿಯಿಲ್ಲ. ಅದೇನೋ, ಪರಭಾಷೆಗೆ ಹೋದ್ಮೇಲೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಅಪರೂಪವಾಗ್ತಿದೆ. ಹಾಗಿದ್ರೆ, ಇತ್ತೀಚಿನ ದಿನಗಳಲ್ಲಿ ಯಾವೆಲ್ಲಾ ಯುವ ನಟಿಯರು ಪರಭಾಷೆಗೆ ಪರೇಡ್ ಮಾಡಿದ್ದಾರೆ ಎಂದು ನೋಡೋಣ ಬನ್ನಿ...ಮುಂದೆ ಓದಿ....

  ಎರಡು ಕಡೆ ಬ್ಯಾಲೆನ್ಸ್ ಮಾಡ್ತಿರುವ ರಶ್ಮಿಕಾ

  ಎರಡು ಕಡೆ ಬ್ಯಾಲೆನ್ಸ್ ಮಾಡ್ತಿರುವ ರಶ್ಮಿಕಾ

  'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದಾರೆ. ಇಲ್ಲಿ ವರ್ಷಕ್ಕೆ ಒಂದು ಅಥವಾ ಎರಡು ಸಿನಿಮಾ ಮಾಡಿದ್ರೆ, ಅಲ್ಲಿ ಮೂರ್ನಾಲ್ಕು ಪ್ರಾಜೆಕ್ಟ್ ಗಳು ಅನೌನ್ಸ್ ಆಗ್ತಿದೆ. ಚಲೋ, ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್, ದೇವದಾಸ್, ಅಲ್ಲು ಅರ್ಜುನ್ ಸಿನಿಮಾ ಈಗ ತಮಿಳಿನಲ್ಲಿ ಕಾರ್ತಿ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಪೊಗರು ಸಿನಿಮಾ ಮಾಡ್ತಿದ್ದಾರೆ.

  ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ, ಗಂಡುಬೀರಿ ಎಂದ ಯುವ ನಿರ್ದೇಶಕ.!

  ಹಾರಿ ಹೋದ ಪಟಾಕ ನಭಾ ನಟೇಶ್

  ಹಾರಿ ಹೋದ ಪಟಾಕ ನಭಾ ನಟೇಶ್

  ಶಿವಣ್ಣನ ಜೊತೆ ವಜ್ರಕಾಯ ಸಿನಿಮಾದಲ್ಲಿ ನಟಿಸಿದ್ದ ಪಟಾಕ ಖ್ಯಾತಿ ನಭಾ ನಟೇಶ್ ನಂತರ ಲೀ ಸಿನಿಮಾದಲ್ಲಿ ನಟಿಸಿದರು. ಆಮೇಲೆ ಸಾಹೇಬ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದೇ ಕೊನೆ. ಈಗ ತೆಲುಗಿನಲ್ಲಿ ಮುಂದುವರಿಯುವ ಸೂಚನೆ ನೀಡಿದ್ದಾರೆ. ನಿನ್ನೆ ದೋಚುಕೊಂಡುವತೆ ಚಿತ್ರದ ಮೂಲಕ ತೆಲಗು ಸಿನಿಮಾರಂಗ ಪ್ರವೇಶ ಮಾಡಿದ ನಭಾ, ಈಗ 'ಇಸ್ಮಾರ್ಟ್ ಶಂಕರ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗ್ನೋಡಿದ್ರೆ, ನಭಾಗೆ ಟಾಲಿವುಡ್ ನಲ್ಲೇ ಹೆಚ್ಚು ಅವಕಾಶ ಸಿಗ್ತಿದೆ.

  ಮತ್ತೋರ್ವ ಕಿರಿಕ್ ಹುಡುಗಿ

  ಮತ್ತೋರ್ವ ಕಿರಿಕ್ ಹುಡುಗಿ

  ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ ಸಿನಿಮಾಗಳ ನಂತರ ಸಂಯುಕ್ತಾ ಹೆಗ್ಡೆ ಕೂಡ ಪರಭಾಷೆಯಲ್ಲೇ ಹೆಚ್ಚು ಸದ್ದು ಮಾಡ್ತಿದ್ದಾರೆ. ತೆಲುಗು ಕಿರಿಕ್ ಪಾರ್ಟಿ ಮೂಲಕ ಟಾಲಿವುಡ್ ಗೆ ಲಗ್ಗೆಯಿಟ್ಟು ಈಗ ತಮಿಳಿನಲ್ಲಿ ನಾಲ್ಕು ಸಿನಿಮಾ ಮಾಡ್ತಿದ್ದಾರೆ. ಹಾಗ್ನೋಡಿದ್ರೆ, ಕನ್ನಡದಲ್ಲೇ ಈಕೆಗೆ ಸಿನಿಮಾಗಳಿಲ್ಲ.

  'ಕಿರಿಕ್ ಪಾರ್ಟಿ' ಬಳಿಕ ರಶ್ಮಿಕಾ ಖಾತೆಯಲ್ಲಿ 11 ಸಿನಿಮಾ, ಆದ್ರೆ ಆ ನಟನ.?

  ಯು-ಟರ್ನ್ ನಟಿ ಶ್ರದ್ಧಾ ಶ್ರೀನಾಥ್

  ಯು-ಟರ್ನ್ ನಟಿ ಶ್ರದ್ಧಾ ಶ್ರೀನಾಥ್

  ಯುಟರ್ನ್, ಆಪರೇಷನ್ ಅಲಮೇಲಮ್ಮ, ಊರ್ವಿ ಸಿನಿಮಾಗಳಲ್ಲಿ ಕಾಣಿಸಿಕೊಂಡ ಶ್ರದ್ಧಾ ಶ್ರೀನಾಥ್ ಈಗ ಹೆಚ್ಚು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಮಿಲನ್ ಟಾಕೀಸ್ ಎಂಬ ಹಿಂದಿ ಸಿನಿಮಾನೂ ಮಾಡಿದ್ರು. ಈಗ ನಾನಿ ಜೊತೆ ಜೆರ್ಸಿ ಸಿನಿಮಾದಲ್ಲಿ ನಟಿಸುವ ಮೂಲಕ ತೆಲುಗು ಇಂಡಸ್ಟ್ರಿಗೂ ಪರಿಚಯವಾಗ್ತಿದ್ದಾರೆ. ಹಾಗ್ನೋಡಿದ್ರೆ, ಶ್ರದ್ಧಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ರುಸ್ತುಂ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

  ಮತ್ತೆ ಕನ್ನಡಕ್ಕೆ ಬಂದ ಪ್ರಣೀತಾ ಸುಭಾಷ್

  ಹೋಗಿ ಬಂದವರು ಇದ್ದಾರೆ

  ಹೋಗಿ ಬಂದವರು ಇದ್ದಾರೆ

  ಈ ನಟಿಯರನ್ನ ಹೊರತುಪಡಿಸಿ ಮತ್ತಷ್ಟು ಹೀರೋಯಿನ್ ಗಳು ತಮಿಳು, ತೆಲುಗು ಇಂಡಸ್ಟ್ರಿಯಲ್ಲಿ ನಟಿಸಿ ಬಂದಿದ್ದಾರೆ. ಕೆಲವರು ಇಲ್ಲಿಗಿಂತ ಅಲ್ಲೇ ಯಶಸ್ಸು ಕಂಡವರು ಇದ್ದಾರೆ. ಪ್ರಣಿತಾ ಸುಭಾಶ್, ನಿಕ್ಕಿ ಗಲ್ರಾನಿ, ನಿತ್ಯಾ ಮೆನನ್, ನಂದಿತಾ ಶ್ವೇತಾ, ಸಂಚಿತಾ ಶೆಟ್ಟಿ, ಕೃತಿ ಕರಬಂಧ, ಹರಿಪ್ರಿಯಾ, ಸಂಜನಾ ಗಲ್ರಾನಿ ಕೂಡ ಪರಭಾಷೆ ಚಿತ್ರಗಳಲ್ಲಿ ನಟಿಸಿದ್ದಾರೆ.

  English summary
  Kannada actress who are get success in other industry. Rashmika mandanna, shraddha srinath, samyuktha hegde, nabha natesh are busy in both tamil and telugu movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X